ನಾಡಿನ ಇತಿಹಾಸ ಅಧ್ಯಯನ ಮಾಡಿ
ದಾವಣಗೆರೆ: ವಿದ್ಯಾರ್ಥಿ, ಯುವ ಜನರು ನಾಡಿನ ಇತಿಹಾಸವನ್ನು ತಿಳಿಯಬೇಕಾದ ಅಗತ್ಯವಿದ್ದು, ನಮ್ಮ ನಾಡು, ನುಡಿ, ಸಂಸ್ಕೃತಿ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಜಿಪಂ ಸಿಇಓ ಎ.ಬಿ. ಹೇಮಚಂದ್ರ ಕರೆ ನೀಡಿದ್ದಾರೆ. ಇಲ್ಲಿನ ಪಾಲಿಕೆ ಆವರಣದ ರಂಗ ಮಂದಿರದಲ್ಲಿ ಸೋಮವಾರ ವಾರ್ತಾ ಇಲಾಖೆ ಏರ್ಪಡಿಸಿದ್ದ ವಿಧಾನಸೌಧದ 60 ವರ್ಷದ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ, ಯುವ ಜನರು ನಮ್ಮ ನಾಡಿನ ಇತಿಹಾಸವನ್ನು ಅಧ್ಯಯನ ಮಾಡುವ ಮೂಲಕ ಸಾಧಕರ ಬಗ್ಗೆ ಅರಿಯಬೇಕು ಎಂದರು.
ಅತ್ಯಾಚಾರ ಯತ್ನ: ಆರೋಪಿಗೆ ಜೈಲು
ದಾವಣಗೆರೆ: ಮನೆಯೊಂದಕ್ಕೆ ಅಕ್ರಮವಾಗಿ ನುಗ್ಗಿ, ಮಕ್ಕಳೊಂದಿಗೆ ಮಲಗಿದ್ದ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿಗೆ 6 ತಿಂಗಳ ಸಾದಾ ಜೈಲು ಶಿಕ್ಷೆ ಹಾಗೂ 1 ಸಾವಿರ ರು.ಗಳ ದಂಡ ವಿಧಿಸಿ ಹರಪನಹಳ್ಳಿ ಜೆಎಂಎಫ್ಸಿ ನ್ಯಾಯಾಲಯ ತೀರ್ಪು ನೀಡಿದೆ. ಹರಪನಹಳ್ಳಿ ತಾ. ಬೆಂಡಿಗೆರೆ ಸಣ್ಣ ತಾಂಡಾ ಗ್ರಾಮದ ವೈ. ಗುರುಸಿದ್ದಪ್ಪ(30) ಶಿಕ್ಷೆಗೆ ಗುರಿಯಾದ ಆರೋಪಿ. ಮನೆಯಲ್ಲಿ 5.7.2010ರಂದು ಬೆಳಗಿನ ಜಾವ ಬೇರೆ ಮನೆಯೊಂದಕ್ಕೆ ನುಗ್ಗಿದ ಆರೋಪಿ ಗುರುಸಿದ್ದಪ್ಪನು ಅಲ್ಲಿ ತನ್ನಷ್ಟಕ್ಕೆ ತಾನು ಮಕ್ಕಳೊಂದಿಗೆ ಮಲಗಿದ್ದ ಮಹಿಳೆಗೆ ತನ್ನೊಡನೆ ಮಲಗುವಂತೆ ಕರೆದು, ಸೀರೆ ಹಿಡಿದು ಎಳೆದಾಡಿದ್ದನು. ಈ ಬಗ್ಗೆ ಹಲವಾಗಲು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಗುರುಸಿದ್ದಪ್ಪನ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆತನಿಗೆ 6 ತಿಂಗಳ ಸಾದಾ ಜೈಲು ಶಿಕ್ಷೆ ಹಾಗೂ 1 ಸಾವಿರ ದಂಡ ವಿಧಿಸಲಾಯಿತು. ಸರ್ಕಾರದ ಪರ ಸರ್ಕಾರಿ ಅಭಿಯೋಜಕ ಕೆ.ಸಿ. ದೀಪಕ್ ವಾದ ಮಂಡಿಸಿದ್ದರು.
ಚಾರ್ ಮಿನಾರ್ ಸಂಭ್ರಮ
ದಾವಣಗೆರೆ: ನಟ ಪ್ರೇಮ್ ಕಡೆಯಿಂದ ಸಿನಿಮಾ ಮಾಡಿಸುತ್ತೀಯಾ, ಮನೆ- ಆಸ್ತಿಯನ್ನೆಲ್ಲಾ ಮಾರಿಕೊಳ್ಳುತ್ತೀ ಎಂಬುದಾಗಿ ಹೇಳಿದ್ದವರಿಗೆ ಉತ್ತರ ನೀಡುವಂತೆ ಚಾರ್ ಮಿನಾರ್ ಚಿತ್ರವು ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುವ ಜೊತೆಗೆ ಚಿತ್ರ ನಿರ್ಮಾಪಕನಾಗಿಯೂ ನನ್ನನ್ನು ಗೆಲ್ಲಿಸಿದೆ ಎಂದು ಚಿತ್ರ ನಿರ್ದೇಶಕ, ನಿರ್ಮಾಪಕ ಚಂದ್ರು ಸಂತಸ ಹಂಚಿಕೊಂಡರು. ಚಿತ್ರದ ನಾಯಕ ಪ್ರೇಮ್, ನಾಯಕಿ ಮೇಘನಾ ಗಾಂವಕರ್ ಮಾತನಾಡಿದರು. ಅಶೋಕ ಚಿತ್ರ ಮಂದಿರ ಮಾಲೀಕ ಲಕ್ಷ್ಮಿಕಾಂತ ರೆಡ್ಡಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

