ಚನ್ನಗಿರಿ ಪಪಂ ಆಯವ್ಯಯ ಮಂಡನೆ
ಚನ್ನಗಿರಿ: ಚನ್ನಗಿರಿ ಪಟ್ಟಣ ಪಂಚಾಯಿತಿಗೆ 2013-14ನೇ ಸಾಲಿನ ಆಯವ್ಯಯ ಮಂಡನಾ ಸಭೆಯು ಪ.ಪಂ. ಅಧ್ಯಕ್ಷೆ ಪುಷ್ಪಲತಾ ಜಗದೀಶ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
2012-13ನೇ ಸಾಲಿನಲ್ಲಿ ಆರಂಭಿಕ ಶುಲ್ಕ 5,07,32,224 ಹಣವಿದ್ದು, 2013-14ನೇಸಾಲಿಗೆ 12,95,48,154 ಹಣ ಸಂಗ್ರಹದ ನಿರೀಕ್ಷೆಯನ್ನು ಹೊಂದಲಾಗಿದೆ ಎಂದು ತಿಳಿಸಿದರು.
13,70,630 ಉಳಿತಾಯ: 2013-14ನೇ ಸಾಲಿಗೆ 17,89,09,739 ಗಳನ್ನು ಅಭಿವೃದ್ಧಿ ಕೆಲಸಗಳಿಗೆ ಖರ್ಚು ಮಾಡುವ ಗುರಿಯನ್ನು ಹೊಂದಲಾಗಿದ್ದು, ಅಖೈರಾಗಿ 13,70,630 ಉಳಿತಾಯವಾಗಿದೆ ಎಂದು ತಮ್ಮ ಅಧಿಕಾರ ಅವಧಿಯ ಅಂತಿಮ ಬಜೆಟ್ ಅನ್ನು ಮಂಡಿಸಿದರು.
ಪಟ್ಟಣ ಪಂಚಾಯಿತಿಗೆ ಹೊಸದಾಗಿ ಆದಾಯ ಬರುವಂತಹ ಯಾವುದೇ ಯೋಜನೆಗಳನ್ನು ಹಾಕಿಕೊಂಡಿಲ್ಲ, ಬರುತ್ತಿರುವ ಆದಾಯ ಮೂಲಗಳಿಂದಲೇ ಹೆಚ್ಚುವರಿಯಾಗಿ ಆದಾಯ ಸಂಪನ್ಮೂಲವನ್ನು ವೃದ್ಧಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸರ್ಕಾರದ ಯೋಜನೆಗಳಂತೆ ಸಾರ್ವಜನಿಕ ಉಪಯೋಗಕ್ಕಾಗಿ ಬಳಸಲು ಪ.ಪಂ. ನಿಧಿಯಲ್ಲಿ 22.75ರ ಯೋಜನೆಗೆ ವ್ಯಕ್ತಿ ಸಂಬಂಧಿತ ಯೋಜನೆಗಳಿಗಾಗಿ ಶೇ.40ರಂತೆ 3.60 ಲಕ್ಷ, ಸಮುದಾಯ ಸಂಬಂಧಿತ ಸೌಲಭ್ಯಕ್ಕಾಗಿ 5.40 ಲಕ್ಷ, ಎಸ್ಎಫ್ಸಿ ಮುಕ್ತ ನಿಧಿಯಲ್ಲಿ 22.75ಯೋಜನೆಗೆ 15.50 ಲಕ್ಷ, ಸಮುದಾಯ ಸಂಬಂಧಿತ ಸೌಲಭ್ಯಕ್ಕೆ 23.25 ಲಕ್ಷ ಹಣವನ್ನು ಮೀಸಲಿರಿಸಲಾಗಿದೆ ಎಂದರು.
1.20 ಲಕ್ಷ ಮೀಸಲು; ಪ.ಪಂ.ನಿಧಿಯ 7.25ರ ಯೋಜನೆಗೆ ವ್ಯಕ್ತಿ ಸಂಬಂಧಿತ ಸೌಲಭ್ಯಕ್ಕೆ 80 ಸಾವಿರ, ಸಮುದಾಯ ಸಂಬಂಧಿತ ಯೋಜನೆಗೆ 1.20 ಲಕ್ಷ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.
ಎಸ್ಎಫ್ಸಿ ನಿಧಿಯಲ್ಲಿ 7.25ರ ಯೋಜನೆಗೆ ವ್ಯಕ್ತಿ ಸಂಬಂಧಿತ ಸೌಲಭ್ಯಕ್ಕೆ 5.20 ಲಕ್ಷ, ಸಮುದಾಯ ಸೌಲಭ್ಯಕ್ಕೆ ರು. 7.79ಲಕ್ಷ ಮೀಸಲಿಡಲಾಗಿದೆ ಎಂದು ತಿಳಿಸಿದರು.
ಪ.ಪಂ.ನಿಧಿಯ 3ರ ಯೋಜನೆಗೆ ವ್ಯಕ್ತಿ ಸಂಬಂಧಿತ ಯೋಜನೆಗೆ 47 ಸಾವಿರ, ಸಮುದಾಯ ಸಂಬಂಧಿತ ಸೌಲಭ್ಯಕ್ಕೆ 71 ಸಾವಿರ ಕಾಯ್ದಿರಿಸಲಾಗಿದೆ. ಎಸ್ಎಫ್ಸಿ ಮುಕ್ತ ನಿಧಿಯ 3ರ ಯೋಜನೆಗೆ ವ್ಯಕ್ತಿ ಸಂಬಂಧಿತ ಯೋಜನೆಗೆ 2 ಲಕ್ಷ, ಸಮುದಾಯ ಸೌಲಭ್ಯಕ್ಕೆ 3 ಲಕ್ಷ ಹಣ ಮೀಸಲಿಡಲಾಗಿದೆ ಎಂದು ಬಜೆಟ್ ಮಂಡಿಸಿದರು. ಈ ಸಭೆಯಲ್ಲಿ ಪ.ಪಂ.ನ ಉಪಾಧ್ಯಕ್ಷ ರೇವಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಲಕ್ಷ್ಮಿ, ಮುಖ್ಯಾಧಿಕಾರಿ ಕೆ. ಪರಮೇಶ್, ಅಭಿಯಂತರ ಹಾಲೇಶಪ್ಪ, ಗುಮಾಸ್ತ ಪ್ರಸಾದ್, ಪ.ಪಂ.ನ ಸದಸ್ಯರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

