ದಾವಣಗೆರೆ

ನಾಲೆ ಉಸ್ತುವಾರಿಗೆ 6 ತಂಡ ರಚನೆ

Published On :

ದಾವಣಗೆರೆ: ಭದ್ರಾ ನಾಲೆಯಲ್ಲಿ ಅನಧಿಕೃತವಾಗಿ ವಿದ್ಯುತ್ ಮಾರ್ಗ, ಜನರೇಟರ್ ಮೂಲಕ ಪಂಪ್‌ಸೆಟ್ ಹಾಕಿಕೊಂಡು ನೀರು ಎತ್ತುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆಡಳಿತ ಬೆಸ್ಕಾಂ ಹಾಗೂ ನೀರಾವರಿ ಇಲಾಖೆಗಳಿಗೆ ಆದೇಶಿಸಿದೆ.
ನಾಲೆ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗಗಳಾಗ ಹರಪನಹಳ್ಳಿ, ಹರಿಹರ ತಾಲೂಕಿನಲ್ಲಿ ಕುಡಿಯುವ ನೀರಿನ ಕೆರೆಗೆ ನೀರು ತಲುಪಿಲ್ಲ.
ಭದ್ರಾ ಅಚ್ಚುಕಟ್ಟು ಬಲದಂಡೆಯ ನಾಲೆಯಲ್ಲಿ ತೋಟದ ಬೆಳೆಗಳಿಗೆ, ಜನ- ಜಾನುವಾರುಗಳಿಗೆ ಕುಡಿಯುವ ನೀರು ಬಿಟ್ಟಿದ್ದರೂ, ಕೊನೆಯ ಭಾಗಕ್ಕೆ ತಲುಪಿಲ್ಲ. ಸರದಿ ಪ್ರಕಾರ ಆ ಭಾಗಗಳಿಗೆ ನೀರು ಬರಬೇಕಿತ್ತು. ಈವರೆಗೆ ಬಂದಿಲ್ಲವೆಂದು ರೈತರು ಜಿಲ್ಲಾ ಕೇಂದ್ರದಲ್ಲಿ ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿದೆ.
ಅನಧಿಕೃತ ಪಂಪ್‌ಸೆಟ್: ಸಂಬಂಧಿಸಿದ ರೈತ ಮುಖಂಡರು, ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ, ಶಾಂತಿ ಸಾಗರದ 103 ಕಿ.ಮೀ.ನಿಂದ ಭದ್ರಾ ಬಲದಂಡೆ ಕೊನೆಯ ಹಂತದವರೆಗೆ ನೀರು ತಲುಪಲು ನಾಲೆಯ ಇಕ್ಕೆಲಗಳಲ್ಲಿ ಅನಧಿಕೃತವಾಗಿ ಪಂಪ್‌ಸೆಟ್‌ಗಳ ಮೂಲಕ ಹಾಗೂ ಜನರೇಟರ್ ಮೂಲಕ ಬೆಳೆಗೆ ನೀರೆತ್ತುವುದನ್ನು ತಡೆಗಟ್ಟಬೇಕು.
ಕೊನೆ ಭಾಗದ ರೈತರಿಗೆ ಸಮರ್ಪಕವಾಗಿ ನೀರು ತಲುಪಿಸುವ ನಿಟ್ಟಿನಲ್ಲಿ ಅಕ್ರಮ ಪಂಪ್‌ಸೆಟ್ ತೆರವಿಗೆ ಮುಂದಾಗಬೇಕು. ಅಂತಹ ಪಂಪ್‌ಸೆಟ್‌ಗಳ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಬೇಕು. ಅನಧಿಕೃತ ನೀರೆತ್ತುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಬೆಸ್ಕಾಂ, ನೀರಾವರಿ ಇಲಾಖೆಗೆ ಸೂಚಿಸಿದೆ.
6 ತಂಡ ರಚನೆ: ಭದ್ರಾ ನಾಲೆಯಿಂದ ಅನಧಿಕೃತವಾಗಿ ನೀರೆತ್ತುವ ಹಾವಳಿಯನ್ನು ತಡೆಗಟ್ಟಲು ಶಾಂತಿ ಸಾಗರದಿಂದ ಅಚ್ಚುಕಟ್ಟು ಕೊನೆಯ ಭಾಗದವರೆಗೆ ಉಸ್ತುವಾರಿ ಮಾಡಲು ಆರು ತಂಡಗಳನ್ನು ರಚಿಸಲಾಗಿದೆ. ಈ 6 ತಂಡಗಳಿಗೆ ನಾಲೆಯುದ್ದಕ್ಕೂ ಕಾರ್ಯಾಚರಣೆ ಆರಂಭಿಸಲು ಸೂಚಿಸಲಾಗಿದೆ.
ಭದ್ರಾ ನಾಲೆಯ ನೀರನ್ನು ಕೊನೆಯ ಭಾಗದ ರೈತರಿಗೆ ತಲುಪಲು ಮೇಲ್ಬಾಗದ ರೈತರೂ ಸಹ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಸುಭಾಷ್ ಶಿವಪ್ಪ ಪಟ್ಟಣಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.