ದಾವಣಗೆರೆ

ಹಳೆ ಬಸ್ಸು ನಿಲ್ದಾಣ ಮೇಲ್ದರ್ಜೆಗೆ

Published On :

ದಾವಣಗೆರೆ: ಮನೆ ಮನೆಯಿಂದ ಸಂಗ್ರಹವಾಗುವ ತ್ಯಾಜ್ಯದಿಂದ ವಿಂಗಡಣಾ ಯಂತ್ರ ಅಳವಡಿಸಲು, ಸಾವಯವ  ಗೊಬ್ಬರ ಉತ್ಪಾದನೆ ಕಿರು ಘಟಕ ಸ್ಥಾಪಿಸಲು, ಪ್ರಾಯೋಗಿಕವಾಗಿ ವಿದ್ಯುತ್, ಉಷ್ಣಶಕ್ತಿ ಉತ್ಪಾದನಾ ಕೇಂದ್ರ ಸ್ಥಾಪನೆ, ಹಳೆ ಬಸ್ಸು ನಿಲ್ದಾಣವನ್ನು ಶಾಪಿಂಗ್ ಮಾಲ್‌ನಂತೆ ಅಭಿವೃದ್ಧಿಪಡಿಸಲು 201ರು.- 14ನೇ ಸಾಲಿನ ಬಜೆಟ್‌ನಲ್ಲಿ ಯೋಜಿಸಿರುವುದಾಗಿ ಪಾಲಿಕೆ ಆರ್ಥಿಕ ಮತ್ತು ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಎಸ್. ಜಯಣ್ಣ ಹೇಳಿದರು.
ನಗರದ ಪಾಲಿಕೆ ನೂತನ ಸಭಾಂಗಣದಲ್ಲಿ ಮೇಯರ್ ಸುಧಾ ಜಯರುದ್ರೇಶ ಅಧ್ಯಕ್ಷತೆಯಲ್ಲಿ ನಡೆದ  ಬಜೆಟ್ ಮಂಡನಾ ಸಭೆಯಲ್ಲಿ ಮಾತನಾಡಿ, ತ್ಯಾಜ್ಯ ನಿರ್ವಹಣೆಗಾಗಿ ರು. 11.59 ಕೋಟಿ ಅನುದಾನ ಮೀಸಲಿಟ್ಟಿದೆ. ಆಸ್ಪತ್ರೆಗಳ ಲಿಕ್ವಿಡ್ ವೇಸ್ಟ್ ಮ್ಯಾನೇಜ್‌ಮೆಂಟ್ ಬಲಪಡಿಸಲು ಸಮರ್ಪಕ ವಿಲೇವಾರಿಗೆ ಆಸ್ಪತ್ರೆ ಅಧೀಕ್ಷಕರು, ಮುಖ್ಯಸ್ಥರು, ವೈದ್ಯರ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸಲು ಯೋಜಿಸಲಾಗಿದೆ ಎಂದರು.
   ಪಾರ್ಕ್‌ಗಳ ಅಭಿವೃದ್ಧಿಗೆ ರು. 5.15 ಕೋಟಿ ಅನುದಾನ ಮೀಸಲಿಟ್ಟಿದೆ. ಖಾಸಗಿ ಸಹಭಾಗಿತ್ವದಲ್ಲಿ ಪಾರ್ಕ್‌ಗಳಿಗೆ ಕಾಯಕಲ್ಪ ನೀಡಲಾಗುವುದು ಎಂದರು.
ಮಾಲ್‌ಗೆ ಒತ್ತು: ಹಳೆ ಬಸ್ಸು ನಿಲ್ದಾಣವನ್ನು ನವೀಕೃತ ಮಾದರಿಯಲ್ಲಿ ವಿನ್ಯಾಸಗೊಳಿಸಿ, ಜನರ ಉಪಯೋಗಕ್ಕೆ ಮುಕ್ತವಾಗಿಸಲಾಗುವುದು. ಮೊದಲ ಮತ್ತು ನಂತರದ ಮಹಡಿಯಲ್ಲಿ ಬೆಂಗಳೂರು ಬಸ್ಸು ನಿಲ್ದಾಣದ ಮಾದರಿಯಲ್ಲಿ ಶಾಪಿಂಗ್ ಮಾಲ್ ನಿರ್ಮಾಣಕ್ಕೆ ಒತ್ತು ನೀಡಿದೆ.
   ಆರ್ಥಿಕವಾಗಿ ಹಿಂದುಳಿದ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಒಂದು ವರ್ಷದ ಉಚಿತ ಬಸ್ಸು ಪಾಸ್ ವ್ಯವಸ್ಥೆ ಮಾಡಿ, ಪಾಲಿಕೆ ಹಣ ಭರಿಸಲಿದೆ. ವಿದ್ಯಾರ್ಥಿ ವೇತನ, ಕೌಶಲ್ಯ ಅಭಿವೃದ್ಧಿಗೆ ತರಬೇತಿ, ಸ್ವಯಂ ಉದ್ಯೋಗಕ್ಕೆ ಸಹಾಯಧನ, ಪುಟ್ಟಣ ಕಣಗಾಲ್ ವೇದಿಕೆಯಲ್ಲಿ ತಿಂಗಳಿಗೊಂದರಂತೆ ಕಾರ್ಯಕ್ರಮಕ್ಕೆ ರು. 20 ಸಾವಿರ ಪ್ರೋತ್ಸಾಹಧನ, ವಸತಿ, ಸಾಮಾಜಿಕ ಮತ್ತು ಹಿಂದುಳಿದ ವರ್ಗದವರ ಅಭಿವೃದ್ಧಿಗೆ, ಇ- ಆಡಳಿತಕ್ಕಾಗಿ ರು. ರು.0 ಲಕ್ಷ, ಜಿಪಿಎಸ್ ತಂತ್ರಜ್ಞಾನ ಅಳವಡಿಕೆ, ಆಸ್ತಿ ರಕ್ಷಣೆಗಾಗಿ ರು. 50 ಲಕ್ಷ, ಸುಗಮ ಸಂಚಾರ ನಿರ್ವಹಣೆ ಹಾಗೂ  ಸುರಕ್ಷತೆ, ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ನೀಡಲಾಗಿದೆ ಎಂದು ಪಿ.ಎಸ್. ಜಯಣ್ಣ ಬಜೆಟ್ ಮಂಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.