ದಾವಣಗೆರೆ

ಸಮಾಜದಲ್ಲಿ ನೈತಿಕ ಅಧಃಪತನ: ವಿಷಾದ

Published On :

ಹೊನ್ನಾಳಿ: ಪ್ರಾಣಿಗಳು ತಮ್ಮ ಜನ್ಮಸಹಜ ಗುಣಗಳನ್ನು ಇಂದಿಗೂ ಪ್ರದರ್ಶಿಸಿ ನಡೆಯುತ್ತಿವೆ. ಆದರೆ ಮನುಷ್ಯ ಮಾತ್ರ ತನ್ನ ಎಲ್ಲಾ ಮೌಲ್ಯಗಳನ್ನು ಮರೆತು ಅವಗುಣಗಳತ್ತ ಸಾಗುತ್ತಿದ್ದಾನೆ ಎಂದು ಹೊನ್ನಾಳಿ ಹಿರೇಕಲ್ಮಠದ  ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ಸ್ಥಳೀಯ ಹಿರೇಕಲ್ಮಠದಲ್ಲಿ ಅಯೋಜಿಸಲಾಗಿದ್ದ ಧರ್ಮಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಮನುಷ್ಯ ಇಂದು ಕೂಡಿ ಬಾಳುವುದನ್ನು, ಪ್ರಮಾಣಿಕವಾಗಿ ದುಡಿಯುವುದನ್ನು ಮರೆಯುತ್ತಾ ಹೋಗುತ್ತಿದ್ದು ಪರಸ್ಪರ ಅಪನಂಬಿಕೆ, ಮೋಸ ವಂಚನೆ ಗಳು ಹಾಗೂ ಹಣಸಂಪಾದನೆಗೆ ಸುಲಭ ಹಾಗೂ ದುರುಳ ಮಾರ್ಗಗಳನ್ನು ಅನುಸರಿಸುತ್ತಿರುವುದರಿಂದ ಸಮಾಜದಲ್ಲಿ ನೈತಿಕತೆಯ ಅಧಃಪತನವಾಗುತ್ತಿದೆ ಎಂದು ಹೇಳಿದರು.
ಕಾಮಿನಾಳು ಹಿರೇಮಠದ ಸಿದ್ದಪಾದಶಿವಾಚಾರ್ಯ ಸ್ವಾಮೀಜಿ ಧರ್ಮೋಪದೇಶ ಮಾಡಿದರು. ಶಿವಮೊಗ್ಗ ನಗರ ಬಾಣಾಪುರದ ಮರುಳಪ್ಪನವರು ಪ್ರಸಾದ ಸೇವೆ ಮಾಡಿದರು. ನಿಜಗುಣ ಶಿವಯೋಗಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಂಭಣ್ಣ, ಮಂಜುನಾಥ್, ಅನಿಲ್, ಶೇಖರಪ್ಪ ಮಲ್ಲೇಶಪ್ಪ ಉಪಸ್ಥಿತರಿದ್ದರು. ಜನ್ನೇಶ್ವರ ಗಾನಕಲಾ ಸಂಘದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.