ದಾವಣಗೆರೆ

ಇಂದು ಉಚಿತ ಕಲ್ಯಾಣ ಮಂಟಪ ಲೋಕಾರ್ಪಣೆ

Published On :

ದಾವಣಗೆರೆ: ಕೆರೆಯ ನೀರನ್ನು ಕೆರೆಗೆ ಚೆಲ್ಲು ಎಂಬ ನಾಣ್ಣುಡಿಯಂತೆ ಅನೇಕ ದಶಕಗಳಿಂದಲೂ ದುಡಿಮೆಯ ಸಾಕಷ್ಟು ಪಾಲನ್ನು ಸಮಾಜಕ್ಕೆ ನೀಡುತ್ತಾ ಬಂದ ಶಾಸಕ, ಬಾಪೂಜಿ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಡಾ. ಶಾಮನೂರು ಶಿವಶಂಕರಪ್ಪ ಕೋಟ್ಯಂತರ ರು. ವೆಚ್ಚದಲ್ಲಿ ನಿರ್ಮಿಸಿರುವ ಶಿವ ಪಾರ್ವತಿ ಕಲ್ಯಾಣ ಮಂಟಪವನ್ನು ಫೆ.11ರಂದು ಲೋಕಾರ್ಪಣೆ ಮಾಡಲಿದ್ದಾರೆ.
ನಗರದ ದೇವರಾಜ ಅರಸ್ ಬಡಾವಣೆ ಬಿ ಬ್ಲಾಕ್‌ನಲ್ಲಿ ನಿರ್ಮಿಸಲಾಗಿದೆ. ವಧು- ವರರ ಬಂಧುಗಳಿಗೆ ವಧು- ವರರಿಗೆ ಪ್ರತ್ಯೇಕ 2 ಕೊಠಡಿ ನಿರ್ಮಿಸಿದ್ದು, ಏಕಕಾಲಕ್ಕೆ 600 ಮಂದಿ ಊಟಕ್ಕೆ ಕುಳಿತುಕೊಳ್ಳಲು ಅನುಕೂಲವಾಗುವಂತಹ ವಿಶಾಲ ಭೋಜನ ಶಾಲೆಯನ್ನೂ ಧರ್ಮಛತ್ರ ಹೊಂದಿದೆ.
ಶಿವ ಪಾರ್ವತಿ ಕಲ್ಯಾಣ ಮಂಟಪವನ್ನು ಶ್ರೀ ಲಿಂಗೇಶ್ವರ ಪಬ್ಲಿಕ್ ಟ್ರಸ್ಟ್ ನಿರ್ವಹಣೆ ಮಾಡಲಿದೆ. ಟ್ರಸ್ಟ್‌ಗೆ ಡಾ. ಶಾಮನೂರು ಶಿವಶಂಕರಪ್ಪ ಅಧ್ಯಕ್ಷರಾಗಿದ್ದು, ಮಾಜಿ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಉಪಾಧ್ಯಕ್ಷರಾಗಿದ್ದಾರೆ. ಅಥಣಿ ಎಸ್. ವೀರಣ್ಣ ಕಾರ್ಯ ನಿರ್ವಾಹಕ ಟ್ರಸ್ಟಿಯಾಗಿದ್ದು, ಯುವ ಉದ್ಯಮಿಗಳಾದ ಎಸ್ಸೆಸ್ ಬಕ್ಕೇಶ್, ಎಸ್ಸೆಸ್ ಗಣೇಶ, ಡಾ. ಮುರುಗೇಶ ಟ್ರಸ್ಟಿಗಳಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.