ರಾಜ್ಯ ಬಜೆಟ್ 2013
ಸಿಎಂ ಶೆಟ್ಟರ್ ಮಂಡಿಸಿದ ಬಜೆಟ್ ಚುನಾವಣೆ ಪ್ರಣಾಳಿಕೆಯಂತಿದೆ. ಅಧಿಕಾರಿಗಳು ಇದನ್ನು ಸಿದ್ಧಪಡಿಸಿದರೋ, ಬಿಜೆಪಿ ಪ್ರಣಾಳಿಕೆ ಸಮಿತಿ ರಚಿಸಿತೆ ಎಂಬುದೇ ಪ್ರಶ್ನೆ.
-ತೇಜಸ್ವಿ ಪಟೇಲ್. ಪ್ರಧಾನ ಕಾರ್ಯದರ್ಶಿ, ರಾಜ್ಯ ಕಬ್ಬು ಬೆಳೆಗಾರರ ಸಂಘ.
ಜನ ಸಾಮಾನ್ಯರು, ರೈತರು, ಕಾರ್ಮಿಕರ ಕಣ್ಣೀರು ಒರೆಸುವ ಬಜೆಟ್ ಇದಲ್ಲ. ಗಾತ್ರ ದೊಡ್ಡದಾಗಿದ್ದರೂ, ಅದಕ್ಕೆ ತಕ್ಕಂತೆ ಗುಣಾತ್ಮಕ ಅಂಶಗಳನ್ನು ಬಜೆಟ್ ಒಳಗೊಂಡಿಲ್ಲ.
-ಎಚ್.ಕೆ. ರಾಮಚಂದ್ರಪ್ಪ. ರಾಜ್ಯ ಕಾರ್ಯಾಧ್ಯಕ್ಷರು, ಎಐಟಿಯುಸಿ.
ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಿ
ದಾವಣಗೆರೆಗೆ ಶೀಥಲೀಕರಣ ಘಟಕ, ಮೆಕ್ಕೆಜೋಳ ಸಂಸ್ಕರಣ ಘಟಕ ಸ್ಥಾಪನೆ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪವಿಲ್ಲ.
-ಹುಚ್ಚವ್ವನಹಳ್ಳಿ ಮಂಜುನಾಥ. ಪ್ರಧಾನ ಕಾರ್ಯದರ್ಶಿ, ರಾಜ್ಯ ರೈತ ಸಂಘ
ಸಿಎಂ ಶೆಟ್ಟರ್ ಜನ ಸಾಮಾನ್ಯರಿಗೆ ಕೈಗೆಟುಕುವ ಬಜೆಟ್ ಮಂಡಿಸಿದ್ದಾರೆ. 70 ಸಾವಿರ ಕೋಟಿ ಸಾಲವಾಗಿದೆ ಎಂಬುದಾಗಿ ಟೀಕಿಸುವವರು ಹಿಂದಿನ ಸರ್ಕಾರಗಳ ಕಾಲದಲ್ಲೂ ಸಾಲ ಇದ್ದುದನ್ನು ಮರೆಯಬಾರದು.
-ಎಸ್.ವಿ. ರಾಮಚಂದ್ರ. ಶಾಸಕ
ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಿದ ಬಜೆಟ್ ಇದು. ಜನರಲ್ಲಿ ಹೊಸ ಆಸೆ ಹುಟ್ಟಿಸಿ, ಮತ ಗಳಿಸುವ ಲೆಕ್ಕಾಚಾರಕ್ಕೆ ಬಿಜೆಪಿ ಮುಂದಾಗಿದೆ.
-ಎಸ್. ರವಿಕುಮಾರ ನುಗ್ಗಿಹಳ್ಳಿ. ಔಷಧಿ ವ್ಯಾಪಾರಿ, ಯುವ ಮುಖಂಡ
ಜಿಲ್ಲೆಯಲ್ಲಿ ನ್ಯಾಮತಿ ತಾಲೂಕು, ಗಾಜಿನ ಮನೆ ನಿರ್ಮಾಣ ಘೋಷಣೆ ಬಿಟ್ಟರೆ ಹೊಸತೇನೂ ಇಲ್ಲ. ಕೃಷಿ, ಕೈಗಾರಿಕೆ, ವಿದ್ಯುತ್ ಉತ್ಪಾದನೆ ಬಗ್ಗೆ ಪ್ರಸ್ತಾಪವಿಲ್ಲ.
-ಎಲ್.ಎಚ್. ಅರುಣಕುಮಾರ. ಹಿರಿಯ ವಕೀಲ
ವಿಧಾನಸಭೆ ಚುನಾವಣೆಗೆ ಪೂರ್ವಭಾವಿಯಾಗಿಯೇ ಬಿಜೆಪಿ ಪ್ರಣಾಳಿಕೆಯನ್ನು ಘೋಷಿಸಿದಂತಿದೆ. ನಾಡಿನ ಜನತೆಯನ್ನು ಮರಳು ಮಾಡಲು ಸಿಎಂ ಜಗದೀಶ ಶೆಟ್ಟರ್ ಹತಾಶ ಪ್ರಯತ್ನವನ್ನು ಮಾಡಿದ್ದಾರೆ.
-ಬಿ.ಎಂ. ಸತೀಶ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

