ಪಾಲಿಕೆ ಮೀಸಲಾತಿ ಬದಲಾವಣೆ ಇಲ್ಲ
ದಾವಣಗೆರೆ: ರಾಜ್ಯ ಚುನಾವಣಾ ಆಯೋಗವು ಸರ್ಕಾರ 2007ರಲ್ಲಿ ನಿಗದಿಪಡಿಸಿದ ಹಾಗೂ ರಾಜ್ಯಪತ್ರದಲ್ಲಿ ಪ್ರಕಟಿಸಿದ ಅಂತಿಮ ಮೀಸಲಾತಿ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲದಂತೆ ಅಳವಡಿಸಿಕೊಂಡು 2013ರ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ನಡೆಸಲು ಆದೇಶಿಸಿರುವ ಹಿನ್ನೆಲೆಯಲ್ಲಿ ಕಳೆದ ಪಾಲಿಕೆ ಚುನಾವಣೆಯಲ್ಲಿ ನಿಗದಿಪಡಿಸಿದ್ದ ಮೀಸಲಾತಿಯಂತೆ 2013ರ ನಗರ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವುದಾಗಿ ಜಿಲ್ಲಾಡಳಿತ ತಿಳಿಸಿದೆ.
ದಾವಣಗೆರೆ ಮಹಾನಗರ ಪಾಲಿಕೆಗೆ 2007ರಲ್ಲಿ ಸರ್ಕಾರ ನಿಗದಿಪಡಿಸಿದ್ದ ಮೀಸಲಾತಿಯೇ 2013ರ ಚುನಾವಣೆಯಲ್ಲೂ ಮುಂದುವರಿಸಲಾಗುವುದು. ಅದರಲ್ಲಿ ಯಾವುದೇ ಬದಲಾವಣೆ ಇಲ್ಲದಂತೆ ಅಳವಡಿಸಿಕೊಂಡು, ಎಲ್ಲಾ 41 ವಾರ್ಡ್ಗಳೂ ಚುನಾವಣೆ ನಡೆಸುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಮೀಸಲಾತಿ ವಿವರ ಪ್ರಕಟಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಸುಭಾಷ್ ಶಿವಪ್ಪ ಪಟ್ಟಣಶೆಟ್ಟಿ ತಿಳಿಸಿದ್ದಾರೆ.
ವಾರ್ಡ್ವಾರು ಮೀಸಲಾತಿ: ಒಂದನೇ ವಾರ್ಡ್ ಎಸ್ಜೆಎಂ ನಗರ, ಪರಿಶಿಷ್ಟ ಪಂಗಡ, 2ನೇ ವಾರ್ಡ್ ಗಾಂಧಿ ನಗರದ ಪರಿಶಿಷ್ಟ ಜಾತಿ, 3ನೇ ವಾರ್ಡ್ ಭಾಷಾ ನಗರ ಸಾಮಾನ್ಯ (ಮಹಿಳೆ), 4ನೇ ವಾರ್ಡ್ ಮಂಡಕ್ಕಿ ಭಟ್ಟಿ ಲೇಔಟ್ ಸಾಮಾನ್ಯ ವರ್ಗ, 5ನೇ ವಾರ್ಡ್ ಬೇತೂರು ರಸ್ತೆ ಹೌಸಿಂಗ್ ಬೋರ್ಡ್ ಕಾಲನಿ ಪರಿಶಿಷ್ಟ ಜಾತಿ, 6ನೇ ವಾರ್ಡ್ ಅಹಮ್ಮದ್ ನಗರ ಹಿಂದುಳಿದ ವರ್ಗ ಎ, 7ನೇ ವಾರ್ಡ್ ಆಜಾದ ನಗರ ಸಾಮಾನ್ಯ ವರ್ಗ, 8ನೇ ವಾರ್ಡ್ ಕುರುಬರ ಕೇರಿ ಸಾಮಾನ್ಯ, 9ನೇ ವಾರ್ಡ್ ಜಾಲಿ ನಗರ ಸಾಮಾನ್ಯ(ಮಹಿಳೆ), 10ನೇ ವಾರ್ಡ್ ಸುರೇಶ ನಗರ ಪರಿಶಿಷ್ಟ ಪಂಗಡ(ಮಹಿಳೆ)ಕ್ಕೆ ಮೀಸಲಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ನಗರ ಪಾಲಿಕೆಯ 11ನೇ ವಾರ್ಡ್ ಗಣೇಶ ಪೇಟೆ ಸಾಮಾನ್ಯ(ಮಹಿಳೆ), 12ನೇ ವಾರ್ಡ್ ಬಸವರಾಜಪೇಟೆ ಹಿಂದುಳಿದ ವರ್ಗ ಎ, 13ನೇ ವಾರ್ಡ್ ಚಾಮರಾಜಪೇಟೆ ಸಾಮಾನ್ಯ, 14ನೇ ವಾರ್ಡ್ ಬಸಾಪುರ ಸಾಮಾನ್ಯ, 15ನೇ ವಾರ್ಡ್ ಭಾರತ ಕಾಲನಿ ಪರಿಶಿಷ್ಟ ಜಾತಿ(ಮಹಿಳೆ), 16ನೇ ವಾರ್ಡ್ ಮಂಡಿಪೇಟೆ ಹಿಂದುಳಿದ ವರ್ಗ ಎ(ಮಹಿಳೆ), 17ನೇ ವಾರ್ಡ್ ಕಾಯಿಪೇಟೆ ಸಾಮಾನ್ಯ, 18ನೇ ವಾರ್ಡ್ ದೇವರಾಜ ಅರಸ್ ಬಡಾವಣೆ ಸಾಮಾನ್ಯ(ಮಹಿಳೆ), 19ನೇ ವಾರ್ಡ್ ಯಲ್ಲಮ್ಮ ನಗರ ಹಿಂದುಳಿದ ವರ್ಗ ಎ(ಮಹಿಳೆ), 20ನೇ ವಾರ್ಡ್ ವಿನೋಬ ನಗರ ಹಿಂದುಳಿದ ವರ್ಗ ಬಿ ವರ್ಗಕ್ಕೆ ಮೀಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪಾಲಿಕೆಯ 21ನೇ ವಾರ್ಡ್ ಪಿ.ಜೆ. ಬಡಾವಣೆ ಸಾಮಾನ್ಯ, 22ನೇ ವಾರ್ಡ್ ಕೆ.ಬಿ. ಬಡಾವಣೆ ಹಿಂದುಳಿದ ವರ್ಗ ಎ, 23ನೇ ವಾರ್ಡ್ ಆವರಗೆರೆ ಸಾಮಾನ್ಯ ವರ್ಗಕ್ಕೆ, 24ನೇ ವಾರ್ಡ್ ನಿಟುವಳ್ಳಿ ಆಂಜನೇಯ ಬಡಾವಣೆ ಹಿಂದುಳಿದ ವರ್ಗ ಎ(ಮಹಿಳೆ), 25ನೇ ವಾರ್ಡ್ ಭಗತ್ ಸಿಂಗ್ ನಗರ ಹಿಂದುಳಿದ ವರ್ಗ ಎ, 26ನೇ ವಾರ್ಡ್ ಕೆಟಿಜೆ ನಗರ- 01 ಸಾಮಾನ್ಯ, 27ನೇ ವಾರ್ಡ್ ಕೆಟಿಜೆ ನಗರ- 2 ಹಿಂದುಳಿದ ವರ್ಗ ಎ, 28ನೇ ವಾರ್ಡ್ ಎಂಸಿಸಿ ಎ ಬ್ಲಾಕ್ ಸಾಮಾನ್ಯ(ಮಹಿಳೆ), 29ನೇ ವಾರ್ಡ್ ಎಸ್. ನಿಜಲಿಂಗಪ್ಪ ಬಡಾವಣೆ ಸಾಮಾನ್ಯ, 30ನೇ ವಾರ್ಡ್ ಎಸ್ಸೆಸ್ ಬಡಾವಣೆ ಹಿಂದುಳಿದ ವರ್ಗ ಎ ಗೆ ಮೀಸಲಾಗಿರುತ್ತದೆ.
ಮಹಾ ನಗರದ 31ನೇ ವಾರ್ಡ್ ಸಿದ್ದವೀರಪ್ಪ ಬಡಾವಣೆ ಸಾಮಾನ್ಯ, 32ನೇ ವಾರ್ಡ್ ಎಂಸಿಸಿ ಬಿ ಬ್ಲಾಕ್ ಸಾಮಾನ್ಯ(ಮಹಿಳೆ), 33ನೇ ವಾರ್ಡ್ ಕೆಇಬಿ ಕಾಲನಿ ಹಿಂದುಳಿದ ವರ್ಗ ಬಿ, 34ನೇ ವಾರ್ಡ್ ನಿಟುವಳ್ಳಿ ಹೊಸ ಬಡಾವಣೆ ಪರಿಶಿಷ್ಟ ಜಾತಿ, 35ನೇ ವಾರ್ಡ್ ನಿಟುವಳ್ಳಿ ಚಿಕ್ಕನಹಳ್ಳಿ ಬಡಾವಣೆ ಹಿಂದುಳಿದ ವರ್ಗ ಎ(ಮಹಿಳೆ), 36ನೇ ವಾರ್ಡ್ ಶಿವಕುಮಾರಸ್ವಾಮಿ ಬಡಾವಣೆ ಹಿಂದುಳಿದ ವರ್ಗ ಎ, 37ನೇ ವಾರ್ಡ್ ಕಾಮ್ರೆಡ್ ಲೆನಿನ್ ನಗರ ಸಾಮಾನ್ಯ, 38ನೇ ವಾರ್ಡ್ ವಿದ್ಯಾನಗರ ಸಾಮಾನ್ಯ, 39ನೇ ವಾರ್ಡ್ ಆಂಜನೇಯ ಬಡಾವಣೆ ಹಿಂದುಳಿದ ವರ್ಗ ಬಿ(ಮಹಿಳೆ), 40ನೇ ವಾರ್ಡ್ ಶಾಬನೂರು ಸಾಮಾನ್ಯ, 41ನೇ ವಾರ್ಡ್ ಬುದ್ಧ ಬಸವ ಭೀಮ ನಗರ ಸಾಮಾನ್ಯ(ಮಹಿಳೆ) ವರ್ಗಕ್ಕೆ ಮೀಸಲಾಗಿದೆ ಎಂದು ಪಟ್ಟಣಶೆಟ್ಟಿ ವಿವರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

