ದಾವಣಗೆರೆ

ಕಾಡುತ್ತಿರುವ ವಿದ್ಯುತ್ ಸಮಸ್ಯೆ

Published On :

ಹರಪನಹಳ್ಳಿ: ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಲಿದೆ. ಒಂದು ಕಡೆ ತುಂಗಭದ್ರಾ ನದಿ ಬತ್ತಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದರೆ, ಇನ್ನೊಂದೆಡೆ ವಿದ್ಯುತ್ ಸಮಸ್ಯೆ ಕಾಡ ತೊಡಗಿದೆ. ಇದರಿಂದ ತಾಲೂಕಿನ ಜನರ ಜೀವನ ನಿರ್ವಹಣೆ ಕಷ್ಟದಾಯಕವಾಗಿದೆ.
ಪಟ್ಟಣದಲ್ಲಿ ಬೆಳಗ್ಗೆ 8ರಿಂದ 9ಗಂಟೆಯವರೆಗೆ, ಮಧ್ಯಾಹ್ನ 12 - 1ರ ವರೆಗೆ, ಸಂಜೆ 6 ರಿಂದ 7ರ ವರೆಗೆ ಇದರ ಮಧ್ಯೆ 1ತಾಸು ಯಾವಾಗಲಾದರೂ ವಿದ್ಯುತ್ ನಿಲುಗಡೆಯಾಗಬಹುದು. ಒಟ್ಟು ಪಟ್ಟಣದಲ್ಲಿ 4 ತಾಸು ವಿದ್ಯುತ್ ನಿಲುಗಡೆಯಾಗುತ್ತದೆ ಎಂದು ಬೆಸ್ಕಾಂ ಎಇಇ ಜಯಪ್ಪ ತಿಳಿಸಿದ್ದಾರೆ.
ಪ್ರತಿ ವಾರಕ್ಕೊಮ್ಮೆ ಅಂದರೆ ಭಾನುವಾರದಿಂದ ಶನಿವಾರ ಮೇಲೆ ತಿಳಿಸಿದ   ಸಮಯ ಬದಲಾವಣೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.
ಗ್ರಾಮೀಣ ಭಾಗದಲ್ಲಿ: ಗ್ರಾಮೀಣ ಪ್ರದೇಶದಲ್ಲಿ ನಿರಂತರ ಜ್ಯೋತಿ ಪೀಡರ ಹೊರತು ಪಡಿಸಿ ಹಗಲು ಹೊತ್ತು 9 ತಾಸು ವಿದ್ಯುತ್ ನಿಲುಗಡೆಯಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಪ್ರಖರ ಬಿಸಿಲು, ದೊರಕದ ನೀರು, ವಿದ್ಯುತ್ ಸಮಸ್ಯೆ  ಈ ಮೂರಕ್ಕೂ ಜನತೆ ಮೂಕ ರೋಧನೆ ಅನುಭವಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.