ಇಂದಿನಿಂದ ಗೌಡ್ರಗದ್ಲ ನಾಟಕ
ದಾವಣಗೆರೆ: ವೃದ್ಧಾಶ್ರಮ, ಅನಾಥಾಶ್ರಮ ಸಹಾಯಾರ್ಥ ಬೆಂಗಳೂರಿನ ಮಾತೃಶ್ರೀ ಕಲಾನಿಕೇತನ ಮತ್ತು ಸಾಮಾಜಿಕ ವಿದ್ಯಾಸಂಸ್ಥೆ ಆಶ್ರಯದಲ್ಲಿ ಹಿರಿಯ ಕಲಾವಿದೆ, ಚಿತ್ರನಟಿ ಪಂಕಜ ರವಿಶಂಕರ ಅಭಿನಯಿಸುವ ದಿವಂಗತ ಜಿ.ವಿ. ಈಶಕೃತ ರಚಿತ ಗೌಡ್ರಗದ್ಲ ನಾಟಕ ಫೆ.25ರಂದು ದಾವಣಗೆರೆ ನಗರದ ಹದಡಿ ರಸ್ತೆಯ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಮುದಾಯ ಭವನದಲ್ಲಿ ಪ್ರದರ್ಶನಗೊಳ್ಳಲಿದೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಲಾವಿದೆ ಪಂಕಜ ರವಿಶಂಕರ್, ಗೌಡ್ರಗದ್ಲ ನಾಟಕದಲ್ಲಿ ತಾವು ದೇವೇಗೌಡನ ಪಾತ್ರಧಾರಿಯಾಗಿದ್ದು, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷೆ, ಹಿರಿಯ ಕಲಾವಿದೆ ಮಾಲತಿ ಸುಧೀರ್ ಮಧುರನ ಪಾತ್ರದಲ್ಲಿ ಅಭಿನಯಿಸುವರು ಎಂದರು.
3.30 ಮೊದಲ ಪ್ರದರ್ಶನ: ಜೂನಿಯರ್ ವಿಷ್ಣುರ್ಧನ್ ರವಿ ಕೋರೆ, ಜೂ. ಶಂಕರನಾಗ್ ಭೋಜರಾಜ ಸೇರಿದಂತೆ ಅನೇಕರು ಅಭಿನಯಿಸುವರು. ಅಂದು ಮಧ್ಯಾಹ್ನ 3.30ರಿಂದ ಮೊದಲ ಪ್ರದರ್ಶನ ಹಾಗೂ ಸಂಜೆ 6.30ರಿಂದ ಎರಡನೇ ಪ್ರದರ್ಶನ ಆರಂಭಗೊಳ್ಳಲಿದೆ. ಸಹಾಯಾರ್ಥ ನಾಟಕ ಪ್ರದರ್ಶನಕ್ಕೆ ಪ್ರವೇಶ ದರ ರು. 100 ಮತ್ತು ರು. 200 ನಿಗದಿಪಡಿಸಿದ್ದೇವೆ ಎಂದು ಅವರು ತಿಳಿಸಿದರು.
ಪ್ರದರ್ಶನ ಉದ್ಘಾಟನಾ ಸಮಾರಂಭಕ್ಕೆ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು ಎಂದರು.
ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪುಷ್ಪಾ ಲಕ್ಷ್ಮಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಪದ್ಮಾ ವೆಂಕಟೇಶ, ದಾಕ್ಷಾಯಣಿ ಮಲ್ಲಿಕಾರ್ಜುನಪ್ಪ, ಅಂಜಿನಪ್ಪ, ಉಮಾ, ಶಿವಣ್ಣ, ಸುನಿತಾ, ಮೀನಾಕ್ಷಮ್ಮ, ಎಚ್. ಕೊಟ್ರೇಶ ಮತ್ತಿತರರು ಇದ್ದರು.
ಟಿಕೆಟ್ಗೆ ಮೊ. 72599- 25499, 98861- 90080, 94484- 43095ಗೆ ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

