ದಾವಣಗೆರೆ

ಇಂದು ದಾವಣಗೆರೆ ವಿದ್ಯುತ್ ವ್ಯತ್ಯಯ

Published On :

ದಾವಣಗೆರೆ: 11 ಕೆ.ವಿ. ಎಸ್‌ವಿಟಿ ವಿದ್ಯುತ್ ಮಾರ್ಗದ ಮೇಲೆ ತುರ್ತು ಕಾರ್ಯವನ್ನು ಕೈಗೊಳ್ಳುವ ಹಿನ್ನೆಲೆಯಲ್ಲಿ ಫೀಡರ್ ವ್ಯಾಪ್ತಿಯಲ್ಲಿ ಫೆ.6ರಂದು ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ. ಅಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ನಗರದ ಎಂಸಿ ಕಾಲನಿ ಬಿ ಬ್ಲಾಕ್, ಕಾಲನಿಯ ಮಹಾನಗರ ಪಾಲಿಕೆ ಈಜುಕೊಳದ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು, ಗ್ರಾಹಕರು ಸಹಕರಿಸುವಂತೆ ಬೆಸ್ಕಾಂ ನಗರ ಉಪ ವಿಭಾಗ- 1ರ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಕೆ.ಸಿ. ಕುಮಾರಸ್ವಾಮಿ ಕೋರಿದ್ದಾರೆ.
ಎಸ್‌ಡಿಎ ಹುದ್ದೆಗೆ ತರಬೇತಿ ಶಿಬಿರ
ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ದ್ವಿತೀಯ ದರ್ಜೆ ಲೆಕ್ಕ ಸಹಾಯಕ (ಎಸ್‌ಡಿಎ) ಹುದ್ದೆನೇಮಕಾತಿ ಪರೀಕ್ಷೆಗೆ ಫೆ.6ರಿಂದ 10 ದಿನಗಳ ಉಚಿತ ಶಿಬಿರವನ್ನು ದಾವಣಗೆರೆ ಬಡಾವಣೆ ಠಾಣೆ ಎದುರಿನ ಮಹಾತ್ಮ ವಿದ್ಯಾಶಾಲೆಯಲ್ಲಿ ಸ್ಪರ್ಧಾ ಭಾರತಿ ಅಧ್ಯಯನ ಕೇಂದ್ರ ಏರ್ಪಡಿಸಿದೆ. ಬೋಧಕ ಕೊಟ್ರೇಶ ಗ್ರಾಪಂ ಕಾಯ್ದೆ ಬಗ್ಗೆ ಉಪನ್ಯಾಸ ನೀಡುವರು. ಮಾಹಿತಿಗೆ ಮೊ- 99618- 83943, 97315- 15559ಗೆ ಸಂಪರ್ಕಿಸಿ.
ಇಂದು ನಿವೃತ್ತ ನೌಕರರ ಸಭೆ
ಜಗಳೂರು ತಾಲೂಕಿನಲ್ಲಿ 1977ರಿಂದ 2012ರ ಅವಧಿಯಲ್ಲಿ ನಿವೃತ್ತರಾದ ಸರ್ಕಾರಿ ನೌಕರರಿಗೆ ವೇತನ  ಪರಿಷ್ಕರಣೆ ಮಾಡುವ ವಿಚಾರವಾಗಿ ಫೆ.6ರಂದು ಜಗಳೂರು ಪಟ್ಟಣದ ಬಾಲಕಿಯರ ಪ್ರಾಥಮಿಕ ಶಾಲೆ(ಹಳೆಯ ಬಿ.ಇ.ಓ. ಕಚೇರಿ)ಯಲ್ಲಿ ನಿವೃತ್ತ ನೌಕರರ ಸಂಘದ ಸಭೆ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.