ಮಾರ್ಗದರ್ಶಕರಾಗಿದ್ದ ಮಾಹಾಂತ ಸ್ವಾಮೀಜಿ
ಹೊನ್ನಾಳಿ: ಇಡೀ ವೀರಶೈವ ಪಂಚಮಸಾಲಿ ಸಮಾಜದ ಮಾರ್ಗದರ್ಶಕರಾಗಿದ್ದ ಡಾ. ಮಾಹಾಂತ ಶಿವಾಚಾರ್ಯ ಮಹಾಸ್ವಾಮೀಜಿಯವರ ಅಗಲಿಕೆ ಇಡೀ ಸಮಾಜಕ್ಕೆ ತುಂಬಲಾರದ ನಷ್ಟವವಾಗಿದೆ ಎಂದು ಪಂಚಮಸಾಲಿ ಸಮಾಜದ ತಾಲೂಕು ಘಟಕದ ಗೌರವಾಧ್ಯಕ್ಷ ಡಾ. ರಾಜ್ ಕುಮಾರ್ ಹೇಳಿದರು.
ಸೋಮವಾರ ಸ್ಥಳೀಯ ವೀರಭದ್ರೇಸ್ವರ ದೇವಾಲಯದ ಸಭಾಂಗಣದಲ್ಲಿ ಸ್ವಾಮೀಜಿಯವರ ಲಿಂಗೈಕ್ಯ ನಿಮಿತ್ತ ಆಯೋಜಿಸಲಾಗಿದ್ದ ಗುರು ನಮನ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ 2008ರಲ್ಲಿ ಇಡೀ ಸಮಾಜಕ್ಕೆ ಧಾರ್ಮಿಕ ಸ್ವಾತಂತ್ರ್ಯವನ್ನು ತಂದು ಕೊಟ್ಟ ಪರಮಪೂಜ್ಯರು ಪೀಠಾರೋಹಣವಾದ 5 ನೇ ವರ್ಷದ ವಾರ್ಷಿಕೋತ್ಸವ ಸಿದ್ಧತೆಯಲ್ಲಿರುವಾಗಲೇ ಸ್ವಾಮೀಜಿಯವರು ಇಡೀ ಭಕ್ತಸಾಗರವನ್ನು ಅಗಲಿದ್ದಾರೆ ಎಂದರು.
ವೀರಶೈವ ಪಂಚಮನಾಲಿ ಸಮಾಜದ ಜಿಲ್ಲಾ ಉಪಾಧ್ಯಕ್ಷ ನ್ಯಾಮತಿ ಗುರುಶಾಂತಪ್ಪ, ತಾಲೂಕು ಘಟಕದ ಮಾಜಿ ಅಧ್ಯಕ್ಷ ಕೆ. ಸೋಮಶೇಖರಪ್ಪ, ರಾಜ್ಯ ಯುವ ಘಟಕದ ತಾಲೂಕು ಅಧ್ಯಕ್ಷ ಪಟ್ಟಣ ಶೆಟ್ಟಿ ಪರಮೇಶ್ ತಾಲೂಕು ಸಮಾಜದ ಪ್ರಧಾನ ಕಾರ್ಯದರ್ಶಿ ಅಶೋಕ ಅಧ್ಯಕ್ಷ ಬೆನಕನಹಳ್ಳಿ ಚೆನ್ನಬಸಪ್ಪ ಮಾತನಾದರು.
ಪಂಚಮಸಾಲಿ ಸಮಾಜದ ಜಿ. ದೊಡ್ಡಪ್ಪ, ಪೇಟೆ ಸುರೇಶ್, ಮೃತ್ಯುಂಜನ ಪಾಟೀಲ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

