ಅವಮಾನವೇ ಸಾಧನೆಗೆ ಮೆಟ್ಟಿಲಾಗಲಿ
ದಾವಣಗೆರೆ: ಅಪಮಾನ, ಅವಮಾನಗಳು ಪ್ರತಿಯೊಬ್ಬರ ಬದುಕಿನಲ್ಲೂ ಸಹಜ. ಅಂತಹವುಗಳ ವಿರುದ್ಧ ಸಿಡಿದೆದ್ದು, ಹೊಸ ಸಮಾಜ ನಿರ್ಮಾಣ ಮಾಡಿದಾಗ ಮಾತ್ರ ಬದಲಾವಣೆ ಸಾಧ್ಯ ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಗುರುಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದ ಅಂಬಾಭವಾನಿ ಕಲ್ಯಾಣ ಮಂಟಪದಲ್ಲಿ ಬಿಜೆಎಂ ಶಾಲೆ ಮತ್ತು ಜಿಎನ್ಬಿ ಆಂಗ್ಲ ಮಾಧ್ಯಮ ಶಾಲೆ ವಾರ್ಷಿಕೋತ್ಸವ ಹಾಗೂ ಅರಿವಿನ ಉತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಅವಮಾನ, ಅಪಮಾನಗಳಿಗೆ ಎದೆಗುಂದದೆ, ಅವುಗಳನ್ನು ಮೆಟ್ಟಿ ನಿಲ್ಲುವಂತಹ ಸಾಧಕರು ನೀವಾಗಬೇಕು ಎಂದರು.
ಪ್ರತಿಭೆ ಗುರುತಿಸಿ: ದೇವರ ಹೆಸರಿನಲ್ಲಿ, ದೇವಿಯ ಹೆಸರಿನಲ್ಲಿ ನಾಡಿನಲ್ಲಿ ಜಾತ್ರೆಗಳನ್ನು ಆಚರಿಸುತ್ತೇವೆ. ಆದರೆ, ಇದು ಮಕ್ಕಳ ಜಾತ್ರೆ. ಮಕ್ಕಳ ಪ್ರತಿಭೆ ಗುರುತಿಸಿ, ಅಂತಹವರಿಗೆ ಜ್ಞಾನ, ಸಂಸ್ಕಾರ ಎನ್ನುವ ಮಾತ್ರೆ ನೀಡಲು ಬಂದಿದ್ದೇವೆ. ಶಾಲಾ ಪರಂಪರೆಯಲ್ಲಿ ಅರಿವಿನ ಉತ್ಸವ ಇದೇ ಮೊದಲು ಎಂದರು.
ಉಪ ವಿಭಾಗಾಧಿಕಾರಿ ಡಾ. ಎಸ್. ನಾಗರಾಜ ಮಾತನಾಡಿ, ಅರಿವೆಂದರೆ ಗುರು, ಜ್ಞಾನ. ಪಾಲಕರು ಮಕ್ಕಳಿಗೆ ಡಾಕ್ಟರ್, ಎಂಜಿನಿಯರ್ ಆಗಬೇಕೆಂಬ ಒತ್ತಡ ಹೇರದೆ, ಮಕ್ಕಳಿಗೆ ಆಸಕ್ತಿ ಇರುವಂತಹ ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರೋತ್ಸಾಹಿಸಬೇಕು ಎಂದರು.
ಆದರ್ಶ ಪಾಲಿಸಿ: ಸಂಗಮ ಶ್ರೀ ಪ್ರಶಸ್ತಿ ಪುರಸ್ಕೃತ ವಿಶ್ವಚೇತನ ವಿದ್ಯಾಸಂಸ್ಥೆ ಸಂಸ್ಥಾಪಕಿ, ಉದ್ಯಮಿ ಡಾ. ವಿಜಯಲಕ್ಷ್ಮಿ ವೀರಮಾಚಿನೇನಿ ಮಾತನಾಡಿ, ಒಂದು ಸಂಸ್ಥೆ ಸ್ಥಾಪಿಸುವುದು, ನಡೆಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಧೈರ್ಯ, ಎದೆಗಾರಿಕೆ ಇದ್ದಾಗ ಮಾತ್ರ ಅದನ್ನು ನಡೆಸಲು ಸಾಧ್ಯ. 12ನೇ ಶತಮಾನದಲ್ಲೂ ಬಸವಣ್ಣ ಸಾಕಷ್ಟು ಪ್ರತಿರೋಧ ಎದುರಿಸಬೇಕಾಯಿತು ಎಂದರು.
ದೂಡಾ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಯಶವಂತರಾವ್ ಜಾಧವ್, ಪಾಲಿಕೆ ಮುಖ್ಯ ಲೆಕ್ಕಾಧಿಕಾರಿ ಡಾ. ಸೋಮನಾಥ, ಶಿವಕುಮಾರ ಪೈಲ್ವಾನ್, ಬಸವಣ್ಣ, ವೇದಮೂರ್ತಿ, ಎಸ್.ವಿ. ಪಾಟೀಲ್, ಸಂಸ್ಥೆಯ ಮಂಜುನಾಥ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

