16, 17ರಂದು ಶೈಕ್ಷಣಿಕ ಸಮಾವೇಶ
ಹರಪನಹಳ್ಳಿ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಮೈಸೂರು ಜಿಲ್ಲೆಯ ಕೆ.ಆರ್. ನಗರದಲ್ಲಿ ಫೆ.16 ಹಾಗೂ 17ರಂದು ಆಯೋಜಿಸಿರುವ ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶಕ್ಕೆ ಹೋಗಲು ಶಿಕ್ಷಕರಿಗೆ ಓಓಡಿ ( ಅನ್ಯಕಾರ್ಯನಿಮಿತ್ಯ) ಸೌಲಭ್ಯವನ್ನು ಒದಗಿಸಲಾಗಿದೆ.
ಈ ಸಮಾವೇಶಕ್ಕೆ ತೆರಳುವ ಪೂರ್ವಭಾವಿ ಸಭೆ ಕೆಜಿವಿಎಸ್ ತಾಲೂಕು ಘಟಕದ ಆಶ್ರಯದಲ್ಲಿ ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಶನಿವಾರ ಜರುಗಿದ್ದು, ಈ ಕುರಿತು ಚರ್ಚೆ ನಡೆಯಿತು. ಓಓಡಿ ಸೌಲಭ್ಯದ ಬಗ್ಗೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ನಿರ್ದೆಶಕರು ಹೊರಡಿಸದ ಸುತ್ತೊಲೆ ಓದಿದ ಕೆಜಿವಿಎಸ್ ತಾಲೂಕು ಕಾರ್ಯದರ್ಶಿ ಬಿ. ಸದಾಶಿವಪ್ಪ ಅವರು ಹೋಗಿ ಬರಲು ಪ್ರಯಾಣದಿನ ಎಂದು ಫೆ.15 ಹಾಗೂ 18 ಎರಡು ದಿನಗಳನ್ನು ಗಣನೆಗೆ ತೆಗೆದುಕೊಳ್ಳುವುದರಿಂದ ಒಟ್ಟು 4 ದಿನಗಳು ಅನ್ಯ ಕಾರ್ಯನಿಮಿತ್ಯ ಎಂದು ಪರಿಗಣಿಸುತ್ತಾರೆ ಎಂದು ಹೇಳಿದರು.
ಅಲ್ಲಿನ ಸಮಾವೇಶದಲ್ಲಿ ಶಿಕ್ಷಣ ಹಕ್ಕು ಕಾಯ್ದೆ, ಸಿಸಿಇ ವಿಜ್ಞಾನ ಶಿಕ್ಷಣ, ಗಣಿತದ ಚಟುವಟಿಕೆಗಳು, ವಿಜ್ಞಾನ ಸಂಘ ಇತ್ಯಾದಿ ವಿಷಯಗಳ ಬಗ್ಗೆ ಗೋಷ್ಠಿಗಳು ನಡೆಯಲಿದ್ದು, ಹರಪನಹಳ್ಳಿ ತಾಲೂಕಿನಿಂದ ಅಂದಾಜು 40 -50 ಪ್ರತಿನಿಧಿಗಳು ಸಮಾವೇಶಕ್ಕೆ ತೆರಳಲು ತೀರ್ಮಾನಿಸಲಾಯಿತು.
ಕಸಾಪ ಸಹಯೋಗದಲ್ಲಿ ಕಾರ್ಯಕ್ರಮ: ಸಮಾವೇಶದ ನಂತರ ವೈಚಾರಿಕತೆ, ವೈಜ್ಞಾನಿಕ ವಿಚಾರಗಳ ಬಿತ್ತುವ ಕಾರ್ಯಕ್ರಮಗಳನ್ನು ಕಸಾಪ ಸಹಯೋಗದಲ್ಲಿ ಆಯೋಜಿಸಲು ಸಭೆ ನಿರ್ಣಯ ಕೈಗೊಂಡಿತು. ಶಿಕ್ಷಕಿ ಶಕುಂತಲಾ ಬಂಡಸೋಡೆ ಹಾಗೂ ನಿರ್ಮಲಮ್ಮ ಅವರು ಮಹಿಳಾ ದಿನಾಚರಣೆ ದಿನದಂದು ಮಹಿಳೆಯರಿಗಾಗಿ ಒಂದು ಉತ್ತಮ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ನೀಡಿದ ಸಲಹೆಗೆ ಸಭೆ ಒಪ್ಪಿಗೆ ಸೂಚಿಸಿತು.
ಕೆಜಿವಿಎಸ್ ತಾಲೂಕು ಘಟಕದ ಅದ್ಯಕ್ಷ ಇಸ್ಮಾಯಿಲ್ ಎಲಿಗಾರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಬಿ. ಸದಾಶಿವಪ್ಪ, ರಾಜ್ಯ ಸಮಿತಿ ಸದಸ್ಯ ಸಿ. ಗಂಗಾಧರ, ಜಿಲ್ಲಾ ಸಮಿತಿಯ ಎಸ್. ಬಸವರಾಜ, ಕಸಾಪ ಅಧ್ಯಕ್ಷ ಬಿ. ರಾಮಪ್ರಸಾದ್ ಗಾಂಧಿ, ಪತ್ರಕರ್ತ ಎಸ್.ಎನ್ ಕುಮಾರ, ಕೆ. ಅಂಜಿನಪ್ಪ, ಬಿ. ರಾಜಶೇಖರ, ಮಹಾಲಕ್ಷ್ಮಿ, ಜಿ. ಪದ್ಮಲತಾ, ಅರ್ಜುನ ಪರಸಪ್ಪ, ಸಾ. ದೇವ, ಪಾಂಡುಬಡಿಗೇರ, ನಿರ್ಮಲಮ್ಮ, ಶಕುಂತಲಾ ಬಂಡಸೋಡೆ, ಎಚ್. ಹೂವಣ್ಣ, ಬಿ. ಮಂಜುನಾಥ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

