ಖಾಲಿ ಜಾಗದಲ್ಲಿ ಕೊಳಚೆ ಸಂಗ್ರಹ
ಮೂಲ್ಕಿಯ ಬಸ್ ನಿಲ್ದಾಣದ ಸಮೀಪದ ವಾಣಿಜ್ಯ ಕಟ್ಟಡಗಳು, ಹೊಟೇಲ್ಗಳು, ವಸತಿ ಸಂಕೀರ್ಣ ಸೇರಿದಂತೆ ಹೆಚ್ಚಿನ ಕಟ್ಚಡಗಳ ತ್ಯಾಜ್ಯ ನೀರು ಮೂಲ್ಕಿಯ ಆರ್ಆರ್ ಟವರ್ ಸಮೀಪದ ಖಾಲಿ ಜಾಗದಲ್ಲಿ ಕಳೆದ ಹಲವು ವರ್ಷಗಳಿಂದ ಬಂದು ಸೇರುತ್ತಿದೆ. ಇದರಿಂದ, ಇಲ್ಲಿ ತ್ಯಾಜ್ಯ ನೀರು ಸಂಗ್ರಹವಾಗಿ ಕೆರೆಯಂತಾಗಿದ್ದು ಇದರ ಪರಿಸರದಲ್ಲಿರುವ ಮನೆಗಳ ಬಾವಿಗಳಿಗೆ ತ್ಯಾಜ್ಯ ನೀರು ಸೇರಿ ಬಾವಿಯ ನೀರು ಕುಡಿಯಲು ಅಸಾಧ್ಯವಾಗಿದೆ.
ತ್ಯಾಜ್ಯ ನೀರು ಇಲ್ಲಿಂದ ಮುಂದೆ ಹೋಗಲು ಸೂಕ್ತ ವ್ಯವಸ್ಥೆಯಿಲ್ಲದ ಕಾರಣ ಇಲ್ಲಿ ಖಾಲಿ ಜಾಗವಿರುವುದರಿಂದ ನೀರು ನಿಂತು ಸೊಳ್ಳೆಗಳ ಉತ್ಪತ್ತಿಯಾಗುತ್ತಿದ್ದು ಪರಿಸರದಲ್ಲಿ ಮಲೇರಿಯಾ ಮುಂತಾದ ರೋಗಗಳು ಹರಡುತ್ತಿದೆ. ಈ ಸಮಸ್ಯೆಯನ್ನು ನಗರ ಪಂಚಾಯಿತಿ ಗಮನಕ್ಕೆ ಹಲವು ಬಾರಿ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕೆಲವು ವರ್ಷಗಳ ಹಿಂದೆ ಮೂಲ್ಕಿಯ ಉದ್ಯಮಿಗಳು ಸೇರಿ ಮೂಲ್ಕಿ ಬಸ್ ನಿಲ್ದಾಣದಿಂದ ಬಪ್ಪನಾಡು ದೇವಳದ ಎದುರುಗಡೆಯಿಂದ ಶಾಂಭವಿ ಸೇತುವೆಯವರೆಗೆ ಪೈಪು ಲೈನ್ ಮೂಲಕ ಚರಂಡಿ ನಿರ್ಮಿಸಿ ತ್ಯಾಜ್ಯ ನೀರನ್ನು ವಿಲೇವಾರಿ ಮಾಡುವ ವ್ಯವಸ್ಥ ಮಾಡಿದ್ದರು.ಆದರೆ ನೀರನ್ನು ಶುದ್ಧೀಕರೀಸದೆ ನದಿಗೆ ಬಿಡುತ್ತಿರುವುದರಿಂದ ಅಲ್ಲಿನ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಯೋಜನೆ ನೆನೆಗುದಿಗೆ ಬಿದ್ದಿತು. ಒಳಚರಂಡಿ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಯೋಜನೆಯು ಕಾರ್ಯಗತಗೊಳ್ಳಲು ಹೆಚ್ಚಿನ ಅವಧಿ ಬೇಕಾಗಿರುವುದರಿಂದ ತಾತ್ಕಾಲಿಕವಾಗಿ ಕೂಡಲೇ ಸೂಕ್ತ ವ್ಯವಸ್ಥೆ ಮಾಡಿ.
ಸ್ಥಳೀಯರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

