'ಗೋ ಕಥೆ' 23ರಿಂದ
ಮಂಗಳೂರು: ಗೋವನಿತಾಶ್ರಯ ಟ್ರಸ್ಟ್ ಆಶ್ರಯದಲ್ಲಿ ಗೋಮಾತೆಯನ್ನು ರಾಷ್ಟ್ರಮಾತೆ ಎಂದು ಘೋಷಿಸುವ ಸಲುವಾಗಿ ಗೋ ಕಥೆ ಕಾರ್ಯಕ್ರಮ ಜು.23ರಿಂದ 27ರ ವರೆಗೆ ನಗರದ ಸಂಘನಿಕೇತನದಲ್ಲಿ ನಡೆಯಲಿದೆ.
ಸಂಜೆ 3ರಿಂದ ರಾತ್ರಿ 7.30ರ ವರೆಗೆ ನಡೆಯವ ಗೋಕಥೆಯಲ್ಲಿ ಆಸ್ತಾ ಚಾನೆಲ್ ಮೂಲಕ ಪರಿಚಿತರಾಗಿರುವ ಸಂತ ಗೋಪಾಲ ಮಣಿ ಮಹಾರಾಜ್ ಬಳಗ ಕಾರ್ಯಕ್ರಮ ನಡೆಸಿಕೊಡುವರು. ಹಿಂದಿ ಭಾಷೆಯಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಉಚಿತ ಗೋಪೂಜೆ ನಡೆಸಲೂ ಅವಕಾಶವಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಡಾ.ಪಿ.ಅನಂತಕೃಷ್ಣ ಭಟ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಟ್ರಸ್ಟ್ ಕಳೆದ 14 ವರ್ಷದಿಂದ ಗೋವಂಶ ಉಳಿಸುವ ಕಾರ್ಯ ನಡೆಸುತ್ತಿದೆ. ಬಂಟ್ವಾಳದ ಫಜೀರಿನ ಬೀಜಗುರಿಯ 10 ಎಕರೆ ಜಾಗದಲ್ಲಿ ಕಪಿಲಾ, ಗಂಗಾ, ಅಮೃತಾ ಹೆಸರಿನ ಮೂರು ಗೋಶಾಲೆಗಳಲ್ಲಿ 300ಕ್ಕಿಂತಲೂ ಅಧಿಕ ಜಾನುವಾರು ಪೋಷಿಸಲ್ಪಡುತ್ತಿದೆ. ಈ ಗೋಶಾಲೆ ರಾಷ್ಟ್ರೀಯ ಪ್ರಾಣಿ ಅಭಿವೃದ್ಧಿ ಸಂಸ್ಥೆಯ ಮಾನ್ಯತೆ ಪಡೆದಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿಗಳಾದ ಎ.ಕೆ.ಕೃಷ್ಣಮೂರ್ತಿ, ಶ್ರೀಧರ್ ಇದ್ದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

