ದಕ್ಷಿಣ ಕನ್ನಡ

ರಜೆಯಲ್ಲಿ ತೆರಳಿದ ಹೊಸ ಆಯುಕ್ತ

Published On :

ಮಂಗಳೂರು: ಸಚಿವದ್ವಯರ ಪಾಲಿಗೆ ಪ್ರತಿಷ್ಠೆಯ ಪಣವಾಗಿರುವ ಮಹಾನಗರ ಪಾಲಿಕೆ ಆಯುಕ್ತರ ವರ್ಗ ವಿಚಾರಕ್ಕೆ ಮತ್ತೊಂದು ತಿರುವು ಲಭಿಸಿದೆ.
 ಬುಧವಾರ ಅಧಿಕಾರ ಸ್ವೀಕರಿಸಿದ ಬಳಿಕ ಮುಖ್ಯಮಂತ್ರಿ ಕಚೇರಿಯ ಮೌಖಿಕ ಸೂಚನೆಯಂತೆ ಕಚೇರಿಗೆ ಹಾಜರಾಗದ ಆಯುಕ್ತ ಎಚ್.ಪ್ರಸನ್ನ, ಜು.20ರವರೆಗೆ ರಜೆ ಹಾಕಿ ತನ್ನೂರಿಗೆ ಹೊರಟಿದ್ದಾರೆ.
ಉಸ್ತುವಾರಿ ಸಚಿವ ರಮಾನಾಥ ರೈ ವರ್ಗಾವಣೆಯಾದ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ಪರ ಮತ್ತು ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ವಿರೋಧವಾಗಿದ್ದಾರೆ. ಶಾಸಕ ಜೆ.ಆರ್. ಲೋಬೋ ಈ ಬಾರಿ ವಿರೋಧವಾದ ಹಿನ್ನೆಲೆಯಲ್ಲಿ ಶಾನಾಡಿ ವರ್ಗವಾಗಿತ್ತು. ಮಡಿಕೇರಿಯಲ್ಲಿದ್ದ ಎಚ್.ಪ್ರಸನ್ನ ಅವರಿಗೆ ಮಂಗಳೂರು ಮಹಾನಗರ ಪಾಲಿಕೆಗೆ ವರ್ಗವಾಗಿತ್ತು. ನೇರ ನಡೆ ನುಡಿಯ ಅಧಿಕಾರಿ ಎಂಬ ಹೆಗ್ಗಳಿಗೆ ಪ್ರಸನ್ನ ಅವರಿಗೆ ಇದೆ. ಇದೀಗ ಸಚಿವದ್ವಯರ ಜಗಳ್ ಬಂದಿಯಲ್ಲಿ ಇಬ್ಬರು ಅಧಿಕಾರಿಗಳು ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ಜು.27ರಂದು ತರಬೇತಿ ಮುಗಿಸಿ ಹೈದರಾಬಾದ್‌ನಿಂದ ಮಂಗಳೂರಿಗೆ ಆಗಮಿಸಲಿದ್ದಾರೆ. ಅವರಿಗೆ ನಗರಾಭಿವೃದ್ಧಿ ಇಲಾಖೆಗೆ ವರ್ಗಾಯಿಸಲಾಗಿದೆ.  ಆಯುಕ್ತರು ಅಧಿಕಾರ ಸ್ವೀಕರಿಸಿದ ಬಳಿಕ ರಜೆ ಹಾಕಿ ಹೋಗಿದ್ದಾರೆ. ಆಯುಕ್ತರು ಇಲ್ಲದ ಕಾರಣ ತ್ಯಾಜ್ಯ ವಿಲೇವಾರಿ ಒಪ್ಪಂದಕ್ಕೆ ಸಹಿ ಹಾಕಲು ವಿಳಂಬವಾಗಿದೆ. ಯಾವ ಅಧಿಕಾರಿ ಬಂದರೂ ನಾವು ಅಭಿವೃದ್ಧಿ ಕಾರ್ಯಕ್ಕೆ ಸಹಕಾರ ಬಯಸುತ್ತೇವೆ. ಯಾವ ಅಧಿಕಾರಿಯನ್ನು ನಾವು ವರ್ಗ ಮಾಡಿ ಎನ್ನುವುದಿಲ್ಲ ಎಂದು ಮೇಯರ್ ಮಹಾಬಲ ಮಾರ್ಲ ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.