ದಕ್ಷಿಣ ಕನ್ನಡ

13 ವರ್ಷವಾದರೂ ಮರಳಿ ಬಾರದ ಮಗ: ಈಗ ದೂರು

Published On :

ಸುಬ್ರಹ್ಮಣ್ಯ: 13 ವರ್ಷಗಳ ಹಿಂದೆ ಮುಂಬೈಗೆ ತೆರಳಿದ ಯುವಕ ಮರಳಿ ಬಾರದೆ ನಾಪತ್ತೆಯಾಗಿರುವ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ದಾಖಲಾಗಿದೆ. ಕಲ್ಮಡ್ಕ ಗ್ರಾಮದ ಮುಚ್ಚಿಲ ಮನೆ ನಿವಾಸಿ ದಿ. ಅಬ್ದುಲ್ ಖಾದರ್ ಎಂಬವರ ಮಗ ಇಸ್ಮಾಯಿಲ್ (36) ನಾಪತ್ತೆಯಾದವರು. ಅವರು 13 ವರ್ಷಗಳ ಹಿಂದೆ ಕೆಲಸದ ನಿಮಿತ್ತ ಮುಂಬೈಗೆ ಹೋಗುತ್ತೇನೆ ಎಂದು ಮನೆಯಲ್ಲಿ ಹೇಳಿ ಹೋಗಿದ್ದರು. ಮನೆ ಮಂದಿ ಇಸ್ಮಾಯಿಲ್ ಮುಂಬೈನಲ್ಲಿ ಇರಬಹುದೆಂದು ಭಾವಿಸಿದ್ದರು. ಆದರೆ ಸುದೀರ್ಘ ಸಮಯದವರೆಗೂ ಅವರು ಮನೆಗೆ ಬಾರದೆ, ಯಾವುದೇ ಸಂಪರ್ಕಕ್ಕೆ ಸಿಗದೆ ಇದ್ದುದರಿಂದ ಸಂಶಯಗೊಂಡ ಮನೆಯವರು ಸ್ನೇಹಿತರು, ಸಂಬಂಧಿಕರ ಮನೆಯಲ್ಲಿ ವಿಚಾರಿಸಿದ್ದಾರೆ. ಆದರೆ ಯಾವುದೇ ಸುಳಿವು ಸಿಗದ ಕಾರಣ ಮಂಗಳವಾರ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದಾರೆ. ಇಸ್ಮಾಯಿಲ್ 7ನೇ ತರಗತಿವರೆಗೆ ಓದಿದ್ದು, ಕನ್ನಡ, ಹಿಂದಿ, ಉರ್ದು, ತುಳು ಭಾಷೆ ಮಾತನಾಡುತ್ತಾನೆ. 5 ಅಡಿ ಎತ್ತರವಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.