ದಕ್ಷಿಣ ಕನ್ನಡ

ಫೆ.3ರಂದು ಜಿಲ್ಲಾ ಈಜು ಸ್ಪರ್ಧೆ

Published On :

ಪುತ್ತೂರು: ಪುತ್ತೂರಿನ ಎಕ್ವೇಟಿಕ್ ಕ್ಲಬ್‌ನ ಆಶ್ರಯದಲ್ಲಿ ದ.ಕ. ಜಿಲ್ಲಾ ಮಟ್ಟದ ಮುಕ್ತ ಈಜು ಸ್ಪರ್ಧೆ ಫೆ. 3ರಂದು ಡಾ. ಶಿವರಾಮ ಕಾರಂತರ ಬಾಲವನ ಈಜುಕೊಳದಲ್ಲಿ ನಡೆಯಲಿದ ಎಂದು ಎಕ್ವೇಟಿಕ್ ಕ್ಲಬ್‌ನ ಅಧ್ಯಕ್ಷ ಎವರೆಸ್ಟ್ ರೊಡ್ರಿಗಸ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಸ್ಪರ್ಧೆಯಲ್ಲಿ 350ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಸ್ಪರ್ಧೆಯನ್ನು ಪುತ್ತೂರು ಉಪವಿಭಾಗಾಧಾರಿ ಎಚ್. ಪ್ರಸನ್ನ ಉದ್ಘಾಟಿಸಲಿದ್ದಾರೆ. ಶಾಸಕಿ ಮಲ್ಲಿಕಾ ಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ಬಾಲವನ ಈಜುಕೊಳ ಸಮಿತಿಯ ಅಧ್ಯಕ್ಷ ಸವಣೂರು ಸೀತಾರಾಮ ರೈ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಮಾರೋಪದಲ್ಲಿ ಉದ್ಯಮಿ ಎಸ್.ಕೆ. ಅನಂದ್, ಸುದಾನ ದೇವಾಲಯದ ಧರ್ಮಗುರು ವಿಜಯ ಹಾವರ್‌ನ್ ಭಾಗವಹಿಸಲಿದ್ದಾರೆ. ರಾಜ್ಯ,ರಾಷ್ಟ್ರ ಮಟ್ಟದ ಈಜುಪಟುಗಳಾದ ಸ್ಪೀಡಲ್ ಲೋಬೋ, ಅಸ್ತಾ ರೈ, ವೈಷ್ಣವಿ ಹೆಗ್ಡೆ, ಅಂಜನಾ ರೈ, ಶ್ರೇಯಸ್ ಆನಂದ್, ಸ್ವೀಕೃತ್ ಆನಂದ್, ಪ್ರೀತಂ ಕಾರಟ್, ಶ್ರೀಕಾಂತ್ ಪ್ರಭು, ಶ್ರೀದೇವಿ ಶೆಟ್ಟಿ, ರೋಹನ್ ರೈ, ನಿರೂಪ್ ಮತ್ತು ಶಿವಾನಿ ಇವರನ್ನು ಸನ್ಮಾನಿಸಲಾಗುವುದು ಎಂದರು. ಕ್ಲಬ್‌ನ ಕಾರ್ಯದರ್ಶಿ ಉಮಾನಾಥ ಪಿ.ವಿ., ಖಜಾಂಜಿ ಅಬ್ದುಲ್ ರಫೀಕ್, ಸದಸ್ಯರಾದ ಸುರೇಶ್‌ಚಂದ್ರ ರೈ, ಅಸ್ಕರ್ ಆನಂದ್, ಕೋಚ್ ವಸಂತ ಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.