25ರಿಂದ ಪಣಂಬೂರಲ್ಲಿ ಬೀಚ್ ಉತ್ಸವ
ಮಂಗಳೂರು: ಕರಾವಳಿ ಉತ್ಸವ ಅಂಗವಾಗಿ ಬೀಚ್ ಉತ್ಸವ ಜ.25ರಿಂದ 27ರ ವರೆಗೆ ಪಣಂಬೂರು ಬೀಚ್ನಲ್ಲಿ ನಡೆಯಲಿದೆ. ಉತ್ಸವ ಸಮಿತಿ ಅಧ್ಯಕ್ಷ, ಸ.ಆಯುಕ್ತ ಡಾ.ವೆಂಕಟೇಶ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. 25ರಂದು ಸಂಜೆ 4ಕ್ಕೆ ಬೀಚ್ ಉತ್ಸ ಮತ್ತು ಆಹಾರೋತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಉದ್ಘಾಟಿಸಲಿದ್ದಾರೆ. ಟೀಮ್ ಮಂಗಳೂರು ತಂಡದ ಆಕರ್ಷಕ ಗಾಳಿಪಟ ಹಾರಾಟ ಪ್ರದರ್ಶನ, 6.30ರಿಂದ ಆಯ್ದ ತಂಡಗಳಿಂದ ನೃತ್ಯ ಸ್ಪರ್ಧೆ, ಸಂಗೀತ ಸ್ಪರ್ಧೆ ಏರ್ಪಡಲಿದೆ. 26ರಂದು ಸಂಜೆ 4ರಿಂದ ಗಾಳಿಪಟ ಹಾರಾಟ ಪ್ರದರ್ಶನ, ಬೇಬಿ ಬೀಚ್ ಸ್ಪರ್ಧೆ, ಸಂಗೀತ ಸ್ಪರ್ಧೆ ನಡೆಯಲಿದೆ. 27ರಂದು ಬೆಳಗ್ಗೆ 8ರಿಂದ ಶಾಲಾ ಮಕ್ಕಳಿಗೆ ಸ್ಕೇಟಿಂಗ್ ಸ್ಪರ್ಧೆ, 11ರಿಂದ ನಾಡದೋಣಿಗಳ ಸ್ಪರ್ಧೆ, ಸಮುದ್ರದಲ್ಲಿ ಈಜು ಸ್ಪರ್ಧೆ, ಮರಳಿನಲ್ಲಿ ಆಕೃತಿ ರಚನೆ ಸ್ಪರ್ಧೆ, ಸಂಜೆ 3ರಿಂದ ಗಾಳಿಪಟ ಹಾರಾಟ ಪ್ರದರ್ಶನ, 6ರಿಂದ ಸಮಾರೋಪ, ಬಳಿಕ ಗಾಯಕ ಯುಫೋರಿಯಾ ತಂಡದಿಂದ ಸಂಗೀತ ರಸಮಂಜರಿ ಜರುಗಲಿದೆ ಎಂದರು. ಮೀನುಗಾರಿಕಾ ಉಪನಿರ್ದೇಶಕ ಸುರೇಶ್ ಕುಮಾರ್, ಪಡಿತರ ಪೂರೈಕೆ ಉಪನಿರ್ದೇಶಕ ಶರಣಬಸಪ್ಪ, ಬೀಚ್ ಅಭಿವೃದ್ಧಿ ಸಮಿತಿ ಅಧ್ಯಕ್ಷ ಯತೀಶ್ ಬೈಕಂಪಾಡಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

