ಚಿಕ್ಕಮಗಳೂರು

ವರ್ಷಧಾರೆಗೆ ಭಾರೀ ಹಾನಿ

Published On :

ನರಸಿಂಹರಾಜಪುರ: ಮೂರು ದಿನಗಳಿಂದ ಸುರಿಯುತ್ತಿದ್ದ ಭಾರೀ ಮಳೆ ಶನಿವಾರ ಕ್ಷೀಣಿಸಿದ್ದು ಆಗಾಗ್ಗೆ ಪಿರಿ,ಪಿರಿ ಮಳೆ ಬಿದ್ದಿದೆ. ಆದರೆ, ಮೂರು ದಿನದ ಮಳೆ ಹಲವು ಅನಾಹುತವನ್ನೇ ಸೃಷ್ಟಿಸಿದೆ. ಮುತ್ತಿನಕೊಪ್ಪ ಗ್ರಾಮದ ಶಾರುನ್ನೀಸಾ ಎಂಬುವರ ಮನೆಯ ಗೋಡೆ ಕುಸಿದು ಕಾರೊಂದು ಜಖಂಗೊಂಡಿದೆ. ಮುತ್ತಿನಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬುರ್ಜ್ ನಿವಾಸಿ ವಾಸುದೇವ ಎಂಬುವರ ಮನೆ ಮುಂಭಾಗದ ಗೋಡೆ ಕುಸಿದು ಬಿದ್ದಿದೆ.ಕುದರೆಗುಂಡಿಯ ಗೌರಿಹಳ್ಳದ ಅಬ್ದುಲ್‌ಖಾದರ್ ಎಂಬುವರ ಮನೆಯ ಒಂದು ಭಾಗದ ಗೋಡೆ ಕುಸಿದಿದ್ದು ಮನೆಯಲ್ಲಿದ್ದ ಟಿ.ವಿ.ಒಡೆದು ಹೋಗಿ ಇಬ್ಬರಿಗೆ ಗಾಯಗಳಾಗಿವೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು ಈಗ ವಿದ್ಯುತ್ ಇಲಾಖೆಯವರು ಸರಿಪಡಿಸುತ್ತಿದ್ದಾರೆ. ಬಹುತೇಕ ಬತ್ತದ ಗದ್ದೆಗಳಲ್ಲಿ ಅಂಚುಗಳು ಕುಸಿದು ಹೋಗಿದೆ.ಮುತ್ತಿನಕೊಪ್ಪ ಗ್ರಾಮದಲ್ಲಿ ತುಂಗಾ ನದಿಯ ನೀರು ಗದ್ದೆಯ ಮೇಲೆ ನಿಂತಿದ್ದರಿಂದ ಗದ್ದೆಯ ಮೇಲೆ ಮರಳು ತುಂಬಿಕೊಂಡಿದೆ. ಹಾತೂರು ಗ್ರಾಮದ ನರಿಮಸೆ ಕೆರೆ ದಂಡೆ ಒಡೆದು ಲಕ್ಷಾಂತರ ರುಪಾಯಿ ನಷ್ಚ ಉಂಟಾಗಿದೆ.ಕೆರೆ ದಂಡೆ ದುರಸ್ಥಿ ಮಾಡಲು ರು. 7 ಲಕ್ಷ ಬೇಕಾಗಬಹುದು ಎಂದು ಜಿಪಂ ಇಂಜಿನಿಯರ್ ತಿಳಿಸಿದ್ದಾರೆ.    

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.