ಚಿಕ್ಕಮಗಳೂರು

ವಿದ್ಯುತ್ ಸಂಪರ್ಕಕ್ಕೆ ಆಗ್ರಹ

Published On :

ಬೀರೂರು: ಮೆಸ್ಕಾಂನ ನಿರ್ಲಕ್ಷ್ಯದಿಂದ ಕಳೆದ ಒಂದು ತಿಂಗಳಿಂದ ನಾಲ್ಕು ಟಿ.ಸಿ.ಗಳು ಕೆಟ್ಟು ವಿದ್ಯುತ್ ಸಂಪರ್ಕ ಇಲ್ಲದೆ ಕತ್ತಲಲ್ಲಿ ಕೊಳೆಯುವಂತಾಗಿದೆ ಎಂದು ಆರೋಪಿಸಿ ಬೀರೂರು ಮೆಸ್ಕಾಂ ಕಚೇರಿ ಎದುರು ಎಮ್ಮೆದೊಡ್ಡಿ ಪ್ರದೇಶದ ಜನರುಪ್ರತಿಭಟಿಸಿದರು.
 ಎಮ್ಮೇದೊಡ್ಡಿ ಭಾಗದ ಪಾರ್ವತಿ ನಗರ, ಹೆಳವರಹಟ್ಟಿ, ಎಚ್. ರಾಂಪುರ, ಪರದೇಶಿಹಾಳ್ ಗ್ರಾಮಗಳ ಮನೆಗಳಿಗೆ ಕಳೆದ ಒಂದೂವರೆ ತಿಂಗಳಿಂದ ವಿದ್ಯುತ್ ಇಲ್ಲದೆ ತೊಂದರೆಯಾಗುತ್ತಿದ್ದರೂ ಮೆಸ್ಕಾಂ ಅಧಿಕಾರಿಗಳು ಗಮನಹರಿಸಿಲ್ಲ ಎಂದು ಆರೋಪಿಸಿದರು.
ನೀರಿಗೂ ಹಾಹಾಕಾರ: ವಿದ್ಯುತ್ ಇಲ್ಲದೆ ಮಕ್ಕಳು ಮನೆಯಲ್ಲಿ ಪುಸ್ತಕ ಓದುವುದೇ ಕಷ್ಟಕರವಾಗಿದ್ದು, ಕುಡಿಯುವ ನೀರಿಗೂ ಹಾಹಾಕಾರ ಎದ್ದಿದೆ. ಈ ಬಗ್ಗೆ ಹಲವು ಬಾರಿ ಮೆಸ್ಕಾಂ ಕಚೇರಿಗೆ ಮನವಿ ಮಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
  ಮೇಸ್ತ್ರಿ ಮಂಜೇಗೌಡ ಎಂಬುವರು 1ಟಿ.ಸಿ. ಅಳವಡಿಸಲು ರು. 20,000 ಕೊಡಬೇಕು ಮತ್ತು ಅದಕ್ಕೆ ಬೇಕಾದ ಸಲಕರಣೆಗಳಾದ ಆಯಿಲ್, ಡಿವಾಲ್ ಮೊದಲಾದವನ್ನು ನೀವೇ ಒದಗಿಸಬೇಕು ಎಂದು ತಾಕೀತು ಮಾಡುತ್ತಾರೆ ಎಂದು ಆರೋಪಿಸಿದರು.
    ಹಣ ಕೊಡದಿದ್ದಲ್ಲಿ ಎರಡು ಅಥವಾ ಮೂರು ತಿಂಗಳಾದರೂ ನಿಮಗೆ ಟಿ.ಸಿ. ಸಿಗುವುದಿಲ್ಲ ಎಂದು ತಿಳಿಸಿದ್ದರಿಂದ ಗ್ರಾಮಸ್ಥರು ಸೇರಿ ಈಗಾಗಲೇ ರು. 12,000ವನ್ನು ಮಂಜೇಗೌಡರಿಗೆ ನೀಡಿದ್ದರೂ ಟಿ.ಸಿ. ಅಳವಡಿಸಲು ಯಾವುದೇ ಕ್ರಮ ಕ್ರಮ ಕೈಗೊಂಡಿಲ್ಲ. ಸಮಸ್ಯೆ ಬಗ್ಗೆ ಈಗಲಾದರೂ ಸಹ ಅಧಿಕಾರಿಗಳ ಅರಿವಿಗೆ ಬಂದಿರುವುದರಿಂದ ಶೀಘ್ರವೇ ಈ ಗ್ರಾಮಗಳಿಗೆ ಟಿ.ಸಿ. ಅಳವಡಿಸಬೇಕು ಎಂದು ಮಾರುತಿ ಯುವಕ ಸಂಘದ ಸದಸ್ಯರು ಆಗ್ರಹಿಸಿದ್ದಾರೆ.
  ಸಮಸ್ಯೆ ಬಗಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಮೆಸ್ಕಾಂ ಕಚೇರಿ ಎದುರು ಎಲ್ಲ ಗ್ರಾಮಗಳ ಜನರು ಸೇರಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ. ಧರಣಿಯಲ್ಲಿ ಶ್ರೀನಿವಾಸ್, ಮಂಜುನಾಥ್, ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.