ವಿದ್ಯುತ್ ವ್ಯತ್ಯಯ
ಚಿಕ್ಕಮಗಳೂರು: ಇಲ್ಲಿನ ರೈಲ್ವೆ ಸ್ಟೇಷನ್ ಸಮೀಪದ 66 ಕೆ.ವಿ. ಟವರನ್ನು ಬದಲಿಸಬೇಕಾಗಿರುವುದರಿಂದ ಜ. 24 ರಿಂದ 27ರವರೆಗೆ ಎಲ್ಲಾ ನಗರ ಹಾಗೂ ಗ್ರಾಮೀಣ ಫೀಡರ್ಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದ್ದು, ಗ್ರಾಹಕರು ಅನಾನುಕೂಲತೆಗೆ ಸಹಕರಿಸಬೇಕೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಚಿಕ್ಕಮಗಳೂರು ನಗರದ ಹುಡ್ಕೋ ಮತ್ತು ವಿಜಯಪುರದಲ್ಲಿ ಬೆಳಿಗ್ಗೆ 6 ರಿಂದ 9 ರವರೆಗೆ, ಮಧ್ಯಾಹ್ನ 12ರಿಂದ 3 ರವರೆಗೆ ಸಂಜೆ 6 ರಿಂದ 8ರವರೆಗೆ, ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆ ಮತ್ತು ಜೈಲ್ ರಸ್ತೆಯಲ್ಲಿ ಬೆಳಿಗ್ಗೆ 9 ರಿಂದ 12ರವರೆಗೆ, ಮಧ್ಯಾಹ್ನ 3ರಿಂದ 6ರವರೆಗೆ, ಸಂಜೆ 8 ರಿಂದ 10ರವರೆಗೆ, ಚಿಕ್ಕಮಗಳೂರು ಗ್ರಾಮೀಣದ ವಸ್ತಾರೆ, ಮಲ್ಲಂದೂರು ಮತ್ತು ಉದ್ದೇಬೋರನಹಳ್ಳಿಯ ಹಾಗೂ ಆಲ್ದೂರಿನ ಶಂಕರ್ ಫಾಲ್ಸ್ ಮತ್ತು ಗುಡ್ಡದೂರಿನಲ್ಲಿ ಬೆಳಿಗ್ಗೆ 6ರಿಂದ 12ರವರೆಗೆ, ಸಂಜೆ 6 ರಿಂದ 8ರವರೆಗೆ, ಚಿಕ್ಕಮಗಳೂರು ಗ್ರಾಮೀಣದ ಲಕ್ಯಾ, ಪೀಠ, ಮಲ್ಲೇನಹಳ್ಳಿ ಮತ್ತು ಹಿರೇಕೊಳಲೆ ಹಾಗೂ ಆಲ್ದೂರಿನ ಗುಲ್ಲನ್ಪೇಟೆ ಮತ್ತು ಆಲ್ದೂರು ಟೌನ್ನಲ್ಲಿ ಮಧ್ಯಾಹ್ನ 12ರಿಂದ 6ರವರೆಗೆ, ಸಂಜೆ 8ರಿಂದ 10ರವರೆಗೆ ಮತ್ತು ಬಾಳೆಹೊನ್ನೂರು, ಕೊಪ್ಪ, ಜಯಪುರ, ಕಳಸ, ಶೃಂಗೇರಿ ವಿ.ವಿ. ಕೇಂದ್ರಗಳಲ್ಲಿ ಬೆಳಿಗ್ಗೆ 6 ರಿಂದ ರಾತ್ರಿ 10ರವರೆಗೆ ಅನಿಯಮಿತ ಲೋಡ್ ಶೆಡ್ಡಿಂಗ್ ಮಾಡಲಾಗುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

