ಚಾಮರಾಜನಗರ

ರಂಜಾನ್‌ಗೆ ಹಿಂದೂ ಶುಭಾಶಯ!

Published On :

ಎನ್.ನಾಗೇಂದ್ರಸ್ವಾಮಿ
ಕೊಳ್ಳೇಗಾಲ: ರಂಜಾನ್‌ನಲ್ಲಿ ಮುಸ್ಲಿಂ ಮುಖಂಡರು ದರ್ಗಾಕ್ಕೆ ತೆರಳಿ ಪ್ರಾರ್ಥನೆ ಬಳಿಕ ತಮ್ಮ ಬಂಧುಗಳಿಗೆ ಔತಣ ನೀಡಿ ಸತ್ಕರಿಸುವುದನ್ನು ನೋಡಿದ್ದೇವೆ.
ಕೇಳಿದ್ದೇವೆ. ಆದರೆ, ಕೊಳ್ಳೇಗಾಲದಲ್ಲಿ ರಂಜಾನ್ ಹಬ್ಬದಲ್ಲಿ ಮುಸ್ಲಿಂ ಮುಖಂಡರು ಪ್ರಾರ್ಥನೆ ಮುಗಿಸಿ ಮಸೀದಿಗೆ ಬರುವವರೆವಿಗೂ ಕಾಯುವ ಹಿಂದೂ ಮುಖಂಡರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಮುಸ್ಲಿಮರ ಹಬ್ಬದಲ್ಲಿ ಹಿಂದೂಗಳು ಸೌರ್ಹಾರ್ದತೆ, ಭಾವೈಕ್ಯೆತೆ ಮೆರೆದ ಘಟನೆ ಕೊಳ್ಳೇಗಾಲದಲ್ಲಿ ನಡೆದ ರಂಜಾನ್ ಸಾಕ್ಷಿಯಾಯಿತು.
ಪಟ್ಟಣದಲ್ಲಿ ಸುಮಾರು 9-30 ಗಂಟೆಗೆ ಈದ್ಗಾ ಮೈದಾನಕ್ಕೆ ಪ್ರಾರ್ಥನೆಗೆ ತೆರಳಿ ಮುಸ್ಲಿಂ ಬಂಧುಗಳನ್ನು ಸುಮಾರು ಎರಡು ಗಂಟೆಗಳಿಗೂ ಕಾದ ಹಿಂದೂ ಮುಖಂಡರು ಪ್ರಾರ್ಥನೆ ಸಲ್ಲಿಸಿ ಬಂದ ಮುಸ್ಲಿಂ ಮುಖಂಡರಿಗೆ ಹೂಗುಚ್ಛ ನೀಡಿ ಪರಸ್ಪರ ಆಲಿಂಗನದ ಮೂಲಕ ರಂಜಾನ್ ಶುಭಾಶಯ ಕೋರಿದರು. ಇಂತಹ ಸಂಪ್ರದಾಯ ಪಟ್ಟಣದಲ್ಲಿ ಕಳೆದ ಐದು ವರ್ಷಗಳಿಂದಲೂ ನಡೆದುಕೊಂಡು ಬರುತ್ತಿದೆ. ಮಂಗಳವಾರ ಮಸೀದಿ ಸರ್ಕಲ್ ಬಳಿ ವಿವಿಧ ಕೋಮಿನ ಬಹುತೇಕ ಹಿಂದೂ ಮುಖಂಡರು ಕಾದು ನಿಂತು ರಂಜಾನ್  ಶುಭಾಶಯ ಕೋರಿದರು.
5ವರ್ಷದಿಂದಲೂ ನಡೆಯುತ್ತಿದೆ: ಪಟ್ಟಣದಲ್ಲಿ ಕಳೆದ 5ವರ್ಷಗಳಿಂದಲೂ ಸರ್ವಧರ್ಮ ಸಮಿತಿಯ ಸಂಚಾಲಕ ದೇವಾಂಗ ಸಮುದಾಯದ ಮುಖಂಡ ಬಾಲಚಂದ್ರ ಅವರು ಈ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.
ಅಂದಿನಿಂದ ಇಂದಿನವರೆವಿಗೂ ಹಿಂದೂ ಹಬ್ಬದಲ್ಲಿ ಮುಸ್ಲಿಂ ಮುಖಂಡರು ಮಕ್ಕಳ ಮಹದೇಶ್ವರ ದೇವಸ್ಥಾನಕ್ಕೆ ಆಗಮಿಸಿ ಪ್ರಸಾದ ಸೇವಿಸುವುದು. ಅದರಂತೆ ಮುಸ್ಲಿಂ ಹಬ್ಬದಂದು ಹಿಂದೂ ಮುಖಂಡರು ಸೌಹಾರ್ದತೆಯಿಂದ ವಿವಿಧ ಕೋಮಿನ ಎಲ್ಲಾ ಮುಖಂಡರು ಪಾಲ್ಗೊಂಡು ಶುಭಾಶಯ ಕೋರುವ ಸಂಪ್ರದಾಯ ನಡೆಸಿಕೊಂಡು ಬರುವ ಮೂಲಕ ಪಟ್ಟಣದಲ್ಲಿ ಭಾವೈಕ್ಯತೆ ಮೆರೆಯಲಾಗುತ್ತಿದೆ.
ಮಂಗಳವಾರವೂ ಪ್ರಾರ್ಥನೆ ಸಲ್ಲಿಸಿ ಕೊಳ್ಳೇಗಾಲದ ಮಸೀದಿಗೆ ಸಾವಿರಾರು ಸಂಖ್ಯೆಯ ಮುಖಂಡರು ಆಗಮಿಸುತ್ತಿದ್ದಂತೆ ಸ್ವಾಗತ ಕೋರಿ ಹೂನೀಡಿ ಶುಭಾಶಯ ಕೋರಿದ ವಿವಿಧ ಕೋಮಿನ ಮುಖಂಡರು ಹಾಗೂ ಯಜಮಾನರು ಹಾಗೂ ರೋಟರಿ ಮಿಡ್‌ಟೌನ್, ರೋಟರಿ, ನಾಗರಿಕ ಹಿತರಕ್ಷಣಾ ಸಮಿತಿ ಮುಖಂಡರು ಮುಸ್ಲಿಂ ಬಂಧುಗಳ ಹಬ್ಬಕ್ಕೆ ಶುಭ ಹಾರೈಸಿದರು.
ಸಂದರ್ಭದಲ್ಲಿ  ಡಿವೈಎಸ್ಪಿ ಚನ್ನಬಸವಣ್ಣ, ವೃತ್ತ ನಿರೀಕ್ಷಕ ಅಮರನಾರಾಯಣ  ಹಾಗೂ ಎಸೈ ಸಂತೋಷಕುಮಾರ್ ಹಾಜರಿದ್ದು ಭಾವೈಕ್ಯತೆಗೆ ಸಾಕ್ಷಿಯಾದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸದಸ್ಯ ಪರಮೇಶ್ವರಯ್ಯ,ಪಿ.ಎಂ. ಕೃಷ್ಣಯ್ಯ, ದೇವಾಂಗ ಸಮುದಾಯ ಅಣ್ಣಾದ್ರೇಯ, ನಾಗೇಂದ್ರ, ಬಾಲಚಂದರ್, ದಲಿತ ಸಮುದಾಯದ ನಟರಾಜಮಾಳಿಗೆ, ಲಿಂಗರಾಜು, ಶಾಂತರಾಜು ಮಾತ್ರವಲ್ಲ, ಈ ಹಿನ್ನೆಲೆಯಲ್ಲಿ  ನಾಯಕ ಸಮುದಾಯದ ಚಿಕ್ಕಲಿಂಗಯ್ಯ, ಎ.ಪಿ.ಎಸ್.ರಾಜಾ, ಜಿ.ಎಂ.ಸುರೇಶ್, ವೀರಶೈವ ಸಮುದಾಯದ ಬಸಪ್ಪನದೊಡ್ಡಿ ಬಸವರಾಜು, ಉಪ್ಪಾರ ಸಮುದಾಯದ ವೆಂಕಟಾಚಲ ,ನಗರಸಭೆ ಉಪಾಧ್ಯಕ್ಷ ಕಲೀಂಉಲ್ಲಾ, ಸದಸ್ಯ ಬಸ್ತಿಪುರ ಶಾಂತು,ಅಂಬೇಡ್ಕರ್ ಸಂಘದ ಅಧ್ಯಕ್ಷ ನಟರಾಜು, ಕಾರ್ಯದರ್ಶಿ ಪುಟ್ಟಬುದ್ದಿ, ಮುಸ್ಲಿಂ ಸಮುಧಾಯದ ಅತಾವುಲ್ಲಾ,ಪೈರೋಜ್, ಕಿಜರ್ ಪಾಷ, ರಫೀಕ್, ಫಯಾಜ್, ಮುಬಾರಕ್, ಮುಸ್ತಾಕ್, ಶ್ರೀನಿವಾಸ, ಶಿವಕುಮಾರ್, ರೋಟರಿ ಅಧ್ಯಕ್ಷ ಈಶ್ವರ್ ಸೇರಿದಂತೆ ಹತ್ತ್ಛು ಹಲವಾರು ಈ ಸಂದರ್ಭದಲ್ಲಿ ಮುಖಂಡರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.