ಲಯನ್ಸ್ವತಿಯಿಂದಡಯಾಲಿಸಿಸ್ ಕೇಂದ್ರ
ಚಾಮರಾಜನಗರ: ಜಿಲ್ಲೆಯಲ್ಲಿ ಲಯನ್ಸ್ ಸಂಸ್ಥೆ ವತಿಯಿಂದ ಕಿಡ್ನಿ ತೊಂದರೆ ಇರುವವರಿಗೆ ಡಯಾಲಿಸಿಸ್ ಕೇಂದ್ರ ತೆರೆದು ಸೇವೆ ನೀಡುವ ಗುರಿಯನ್ನು ಸಂಸ್ಥೆ ಹೊಂದಿದೆ ಎಂದು ಲಯನ್ಸ್ ಸಂಸ್ಥೆಯ ನೂತನ ಅಧ್ಯಕ್ಷ ಬಿ.ಎಂ.ಪ್ರಭುಸ್ವಾಮಿ ತಿಳಿಸಿದರು.
ನಗರದ ಶಿವಕುಮಾರಸ್ವಾಮಿ ಭವನದಲ್ಲಿ ನಡೆದ ಲಯನ್ಸ್ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಸಮಾಜದ ಋಣ ತೀರಿಸಬೇಕಾದರೆ ಸಮಾಜ ಸೇವೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡಾಗ ಮಾತ್ರ ಸಾಧ್ಯ ಎಂದು ಅಭಿಪ್ರಾಯಪಟ್ಟರು. ಜಿಲ್ಲಾ ಮಾಜಿ ರಾಜ್ಯಪಾಲ ಡಾ. ಪಿ.ಆರ್.ಎಸ್.ಚೇತನ್ ನೂತನ ತಂಡಕ್ಕೆ ಪದವಿ ಪ್ರಮಾಣ ಮಾಡಿದರು.
ಎರಡನೇ ಉಪ ರಾಜ್ಯಪಾಲ ಎಂ. ಅನಿಲ್ಕುಮಾರ್ ಮಾತನಾಡಿದರು. ನೂತನ ಅಧ್ಯಕ್ಷ ಬಿ.ಎಂ.ಪ್ರಭುಸ್ವಾಮಿ, ಉಪಾದ್ಯಕ್ಷ ಖುರ್ಷಿದ್ ಅನ್ವರ್, ದ್ವಿತೀಯ ಉಪಾಧ್ಯಕ್ಷ ಸಿದ್ದಿಖುಲ್ಲ, ತೃತೀಯ ಉಪಾಧ್ಯಕ್ಷ ಕೃಪಾಶಂಕರ್, ಜೋನ್ ಚೇರಮನ್ ಎನ್. ಚೇತನ್, ಕಾರ್ಯದರ್ಶಿ ಎ. ಶ್ರೀನಿವಾಸ್, ಸಹ ಕಾರ್ಯದರ್ಶಿ ಹೊಸೂರು ಜಗದೀಶ್, ಖಜಾಂಚಿ ಸುನೀಲ್ ಕುಮಾರ್ ಜೈನ್, ನಿರ್ದೇಶಕರಾಗಿ ಡಾ.ಎ.ಬಿ. ನಂಜಪ್ಪ, ಚಿನ್ನಸ್ವಾಮಿ, ಕನ್ಹಯಲಾಲ್ ಜೈನ್, ಡಾ.ಮಹೇಶ್, ಲೋಕೇಶ್ ಕುಮಾರ್ ಜೈನ್, ಪ್ರಕಾಶ್ ಕುಮಾರ್ ಜೈನ್, ಶ್ರೀನಿಧಿ, ಡಾ.ವಿನಯ್, ಬಾಲಸುಬ್ರಮಣ್ಯಂ, ಡಾ.ಬಸವರಾಜೇಂದ್ರ ಹಾಗು ನೂತನ ಸದಸ್ಯರಾಗಿ ಕಾವುದವಾಡಿಗುರು, ವೃಷಬೇಂದ್ರ, ಶಮಂತ್, ಮೋಹನ್ ಅಧಿಕಾರ ಸ್ವೀಕರಿಸಿದರು. ನಿಕಟ ಪೂರ್ವ ಅಧ್ಯಕ್ಷ ಮುರುಗೇಶ್, ಜಿ.ಡಿ.ದಿವಾಕರ್ ಹಾಗೂ ಇತರ ಸಂಘ ಸಂಸ್ಥೆಯ ಅಧ್ಯಕ್ಷರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

