ಇನ್ನರ್ವ್ಹೀಲ್ ಪದಗ್ರಹಣ
ಮೈಸೂರು: ಜಿಲ್ಲಾ ಇನ್ನರ್ವ್ಹೀಲ್ ಕ್ಲಬ್ನ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಹಾಗೂ ಜಿಲ್ಲಾ ಸಮಾವೇಶವು ಜು.12 ಮತ್ತು 13 ರಂದು ನಂಜನಗೂಡಿನಲ್ಲಿ ನಡೆಯಲಿದೆ. ನಂಜನಗೂಡಿನ ಇನ್ನರ್ ವ್ಹೀಲ್ ಕ್ಲಬ್ನ ಆಶ್ರಯದಲ್ಲಿ ಪಟ್ಟಣದ ಊಟಿರಸ್ತೆಯಲ್ಲಿರುವ ಯಾತ್ರಿ ಭವನದಲ್ಲಿ 13 ರಂದು ಸಂಜೆ 5ಕ್ಕೆ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಪದಗ್ರಹಣ ನಡೆಯಲಿದೆ ಎಂದು ಸಂಸ್ಥೆಯ ಜಿಲ್ಲಾಧ್ಯಕ್ಷೆ ವಿನಿತಾ ಸತೀಶ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಚಿಕ್ಕಮಂಗಳೂರು ಸೇರಿದಂತೆ 8 ಜಿಲ್ಲೆಗಳಲ್ಲಿ 40 ಕ್ಲಬ್ಗಳಿದ್ದು, 1054 ಮಂದಿ ಸದಸ್ಯರಿದ್ದಾರೆ. ಇವರಲ್ಲಿ 500 ಮಂದಿ ಸಮಾವೇಶದಲ್ಲಿ ಭಾಗವಹಿಸುವ ನೀರಿಕ್ಷೆಯಿದೆ ಎಂದರು.
ವಿದ್ಯಾರ್ಥಿ ನಿಲಯಕ್ಕೆ
ಅರ್ಜಿ ಆಹ್ವಾನ
ಮೈಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಆರ್ಯ ಈಡಿಗರ ಸಂಘ ನಡೆಸುತ್ತಿರುವ ವಿದ್ಯಾರ್ಥಿನಿಲಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ. 2014-15ನೇ ಸಾಲಿಗೆ ಪಿಯುಸಿ ಮತ್ತು ಮೇಲ್ಪಟ್ಟ ವ್ಯಾಸಂಗಕ್ಕಾಗಿ ಮೈಸೂರಿನ ವಿವಿಧ ಕಾಲೇಜುಗಳಲ್ಲಿ ಪ್ರವೇಶ ಪಡೆದ ಈಡಿಗ ಈಡಿಗ ಜನಾಂಗದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು ಅರ್ಜಿಯನ್ನು ನಗರದ ಕೃಷ್ಣಮೂರ್ತಿಪುರಂನ ಸಂಘದ ಕಚೇರಿಯಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಸೂಕ್ತ ದಾಖಲಾತಿಯೊಂದಿಗೆ ಜು. 17 ರೊಳಗೆ ತಲುಪಿಸಬೇಕು. ಹೆಚ್ಚಿನ ಮಾಹಿತಿಗೆ ಕಾರ್ಯದರ್ಶಿ ಬಿ. ವಿದ್ಯಾಸಾಗರ ಕದಂಬ ಮೊ. 99861-41484 ಸಂಪರ್ಕಿಸಬಹುದು.
ಪ್ರತಿಭಾ ಪುರಸ್ಕಾರ
ಕರ್ನಾಟಕ ರಾಜ್ಯ ಶಿವಾರ್ಚಕ ಯುವಕರ ಪ್ರಗತಿಪರ ಸಂಘವು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕಗಳಿಸಿದ ಶಿವಾರ್ಚಕ ಜನಾಂಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ವಿದ್ಯಾರ್ಥಿಗಳು ಅಂಕಪಟ್ಟಿಯ ನಕಲು, ಒಂದು ಭಾವಚಿತ್ರ, ಮೊಬೈಲ್ ಸಂಖ್ಯೆ ಒಳಗೊಂಡ ದಾಖಲೆಯನ್ನು ಜು.30 ರೊಳಗೆ ಅಧ್ಯಕ್ಷರು, ಬನ್ನೂರು ನಾಗರಾಜು, ಬನ್ನೂರು, ಟಿ. ನರಸೀಪುರ ತಾಲೂಕು, ಮೈಸೂರು ಅಥವಾ ಮೊ. 99458-96702 ಅಥವಾ 99643-26588 ಸಂಪರ್ಕಿಸಬಹುದು.
ವಿಕಲ ವಿಕಾಸ ವಿದ್ಯಾಪುರಸ್ಕಾರ
ವಿಕಲ ವಿಕಾಸ ಸಂಸ್ಥೆಯು 2013-14ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 60ಕ್ಕಿಂತ ಹೆಚ್ಚು ಅಂಕಗಳಿಸಿದ ವಿವಿಧ ರೀತಿಯ ಅಂಧರು, ದೈಹಿಕ ಅಂಗವಿಕಲರು, ಬುದ್ಧಿಮಾಂಧ್ಯರು ಹಾಗೂ ಶ್ರವಣ ದೋಷವುಳ್ಳ ವಿದ್ಯಾರ್ಥಿಗಳನ್ನು ಗೌರವಿಸಲಿದೆ. ಆಸಕ್ತ ಅರ್ಹ ವಿದ್ಯಾರ್ಥಿಗಳು ಅಂಕಪಟ್ಟಿಯ ನಕಲು ಮತ್ತು ಅಂಗವಿಕಲರ ಇಲಾಖೆ ನೀಡಿರುವ ಗುರುತಿನ ಚೀಟಿಯ ನಕಲನ್ನು ಜು. 31 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ವಿಕಲ ವಿಕಾಸ ಸಂಸ್ಥೆ, ನಂ. 45, ಮೊದಲ ಮಹಡಿ, ಎವಿಎನ್ಎಸ್ ಮಾರುಕಟ್ಟೆ, ಹಳೆಯ ವಿಜಯಾಬ್ಯಾಂಕ್ ಕಟ್ಟಡ, ದೇವರಾಜ ಅರಸು ರಸ್ತೆ, ಮೈಸೂರು-01 ಅಥವಾ ಮೊ.98868-29899 ಅಥವಾ 94488-69315 ಸಂಪರ್ಕಿಸಬಹುದು.
ಪ್ರತಿಭಾ ಪುರಸ್ಕಾರ
ಹಾಸನ ಜಿಲ್ಲಾ ಬಳಗವು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಪಡೆದ(ಶೇ 75) ಹಾಸನ ಜಿಲ್ಲಾ ವಿದ್ಯಾರ್ಥಿಗಳನ್ನು ಸನ್ಮಾನಿಸಲಿದೆ. ಆಸಕ್ತರು ಪಿ. ಶಾರದಮ್ಮ, ಅಧ್ಯಕ್ಷರು, ಹಾಸನ ಜಿಲ್ಲಾ ಬಳಗ, ಮನೆ ನಂ. 408, ಎ ಮತ್ತು ಬಿ ಬ್ಲಾಕ್, ಕುವೆಂಪುನಗರ, ಮೈಸೂರು ಇವರಿಂದ ನಿಗದಿತ ಅರ್ಜಿ ಪಡೆದು ಅಂಕಪಟ್ಟಿಯ ನಕಲು ಹಾಗೂ ಬಳಗದ ಖಾಯಂ ಸದಸ್ಯತ್ವ ಹೊಂದಿರುವ ರಶೀದಿಯ ನಕಲು ಪ್ರತಿಯನ್ನು ಜು. 15 ರೊಳಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ಮೊ. 98459-45704 ಸಂಪರ್ಕಿಸಬಹುದು.
ಕಾರ್ಯಕಾರಿಣಿ 12ರಿಂದ
ಮೈಸೂರು: ನಗರದ ರಾಜೇಂದ್ರ ಕಲಾಮಂದಿರದಲ್ಲಿ ಜು.12 ಮತ್ತು 13 ರಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ನಡೆಯಲಿದೆ ಎಂದು ನಗರ ಬಿಜೆಪಿ ಅಧ್ಯಕ್ಷ ಮಾರುತಿರಾವ್ ಪವಾರ್ ಹೇಳಿದರು. ಕಾರ್ಯಕಾರಿಣಿಯು ಜು.13ರ ಬೆಳಗ್ಗೆ 10.30ಕ್ಕೆ ಉದ್ಘಾಟನೆಗೊಳ್ಳಲಿದೆ. ಕೇಂದ್ರ ಸಚಿವರಾದ ರಾಜನಾಥ ಸಿಂಗ್, ಡಿ.ವಿ.ಸದಾನಂದಗೌಡ, ಅನಂತಕುಮಾರ್, ವೆಂಕಯ್ಯ ನಾಯ್ಡು ಮತ್ತು ಜಿ.ಎಂ. ಸಿದ್ದೇಶ್ವರ ಅವರು ಈ ಕಾರ್ಯಕಾರಿಣಿಯಲ್ಲಿ ಭಾಗವಹಿಸಲಿದ್ದು, ರಾಜ್ಯದ ಮುಖಂಡರು ಮತ್ತು ನಾಯಕರು ನೇತೃತ್ವ ವಹಿಸುವರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ರಾಜ್ಯದ ಎಲ್ಲ ವಿಭಾಗಗಳ ಮುಖಂಡರು ಮತ್ತು ಜಿಲ್ಲಾ ಮುಖಂಡರು, ಪ್ರಮುಖರು ಸೇರಿ 700 ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಮೂರು ಅವಧಿಯಲ್ಲಿ ವಿವಿಧ ಗೋಷ್ಠಿಗಳು ನಡೆಯಲಿದೆ. ಮೈಸೂರು ಸೇರಿದಂತೆ ರಾಜ್ಯಾದ್ಯಂತ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡುವುದಾಗಿ ಹೇಳಿದರು.
ಕಾರ್ಯಕರ್ತರಿಗೆ ಅಭಿನಂದನೆ: ಜು.12ರ ಸಂಜೆ 6ಕ್ಕೆ ಜೆ.ಕೆ.ಮೈದಾನದಲ್ಲಿ ಆಯೋಜಿಸುವ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಲಾಗುವುದು. ಅಲ್ಲದೆ ನೂತನ ಸಂಸದರು ಮತ್ತು ಕೇಂದ್ರದ ಸಚಿವರಿಗೆ ನಾಗರಿಕ ಸನ್ಮಾನ ನಡೆಸಲಾಗುವುದು ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

