ಸಚಿವರಿಗೆ ಹಲವೆಡೆ ಸ್ವಾಗತ
ಗುಂಡ್ಲುಪೇಟೆ: ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಸಲುವಾಗಿ ಭೇಟಿ ನೀಡಿದ್ದ ಪ್ರವಾಸೋದ್ಯಮ ಸಚಿವ ಆರ.ವಿ.ದೇಶಪಾಂಡೆಗೆ ಅವರಿಗೆ ಗುಂಡ್ಲುಪೇಟೆ ತಾಲೂಕಿನ ಹಲವೆಡೆ ಸ್ವಾಗತ ನೀಡಲಾಯಿತು.
ಶನಿವಾರ ಬೆಳಗ್ಗೆ ಬಂಡೀಪುರದಿಂದ ಸಹಕಾರ ಸಚಿವ ಎಚ್.ಎಸ್.ಮಹದೇವಪ್ರಸಾದ್ ಸ್ವಗ್ರಾಮ ಹಾಲಹಳ್ಳಿಗೆ ಭೇಟಿ ನೀಡುವ ಮುನ್ನ ಹಂಗಳ, ಗುಂಡ್ಲುಪೇಟೆ, ಬೇಗೂರು, ಕಮರಹಳ್ಳಿ ಹಾಗು ಹಾಲಹಳ್ಳಿಯಲ್ಲಿ ಸಚಿವ ದೇಶಪಾಂಡೆ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಹಾಗು ಜನಪ್ರತಿನಿಧಿಗಳು ಹಾರ ತುರಾಯಿ ಹಾಕಿ ಸ್ವಾಗತಿಸಿದರು.
ಗುಂಡ್ಲುಪೇಟೆ ಪಟ್ಟಣಕ್ಕೆ ಆಗಮಿಸಿದ ದೇಶಪಾಂಡೆ ಅವರಿಗೆ ತಾಪಂ ಅಧ್ಯಕ್ಷ ಕನ್ನೇಗಾಲ ಸ್ವಾಮಿ, ಪುರಸಭೆ ಅಧ್ಯಕ್ಷ ಪಿ.ಚಂದ್ರಪ್ಪ, ಪುರಸಭೆ ಮಾಜಿ ಅಧ್ಯಕ್ಷ ರಮೇಶ್, ಬಿ. ವೆಂಕಟಾಚಲ ಮತ್ತಿತರರು ಹಾರ ಹಾಕಿ ಸ್ವಾಗತಿಸಿದರು.
ಮಾರ್ಗ ಮದ್ಯೆ ಬೇಗೂರು ಗ್ರಾಪಂ ಕಚೇರಿಯ ಮುಂದೆ ಜಿಪಂ ಅಧ್ಯಕ್ಷ ಡಿ.ಸಿ. ನಾಗೇಂದ್ರ, ಗ್ರಾಪಂ ಅಧ್ಯಕ್ಷೆ ಗೌರಮ್ಮ, ಉಪಾಧ್ಯಕ್ಷ ಸದಾ ಮತ್ತಿತರರು ದೇಶಪಾಂಡೆ ಅವರಿಗೆ ಗುಲಾಬಿ ಹಾರ ಹಾಕಿ ಸ್ವಾಗತಿಸಿದರು. ಬೇಗೂರು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಬೇಗೂರಿಗೆ ಶಿಕ್ಷಣದಲ್ಲಿ ಪ್ರಗತಿ ಸಾಧಿಸಲು ಪದವಿ ಕಾಲೇಜು ಮಂಜೂರು ಮಾಡಬೇಕು ಎಂದು ಬೇಗೂರು ಗ್ರಾಪಂ ವತಿಯಿಂದ ಮನವಿ ಸಲ್ಲಿಸಲಾಯಿತು. ಹಾಲಹಳ್ಳಿಗೆ ತೆರಳಿದ ಸಚಿವ ದೇಶಪಾಂಡೆ ಅವರಿಗೆ ಸಚಿವ ಸಹೋದರ ಎಚ್.ಎಸ್. ನಂಜುಂಡಪ್ರಸಾದ್ ಗ್ರಾಮದ ಗಡಿಯಲ್ಲಿ ಗ್ರಾಮಸ್ಥರೊಂದಿಗೆ ಸ್ವಾಗತಿಸಿ ಮಂಗಳವಾದ್ಯದೊಂದಿಗೆ ಮನೆಗೆ ಕರೆದುಕೊಂಡು ಹೋದರು. ಸಚಿವ ಮಹದೇವಪ್ರಸಾದ್ ಮನೆಗೆ ತೆರಳಿದ ದೇಶಪಾಂಡೆಗೆ ಮಹದೇವಪ್ರಸಾದ್ ಕುಟುಂಬದ ಸದಸ್ಯರು ಸ್ವಾಗತಿಸಿದರು. ಸಂಸದ ಆರ್.ಧ್ರುವನಾರಾಯಣ, ಮಾಜಿ ಸಂಸದ ಎ.ಸಿದ್ದರಾಜು, ಜಿಪಂ ಅಧ್ಯಕ್ಷ ಡಿ.ಸಿ.ನಾಗೇಂದ್ರ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

