ನಾಳೆಯಿಂದ ಬಣ್ಣಾರಿ ಅಮ್ಮನ ಜಾತ್ರೆ
ಚಾಮರಾಜನಗರ: ಚಾಮರಾಜನಗರ-ಗುಂಡ್ಲುಪೇಟೆ ರಸ್ತೆಯ ವೀರನಪುರ ಕ್ರಾಸ್ ಬಳಿ ಇರುವ ಬಣ್ಣಾರಿ ಅಮ್ಮನವರ ಜಾತ್ರಾ ಮಹೋತ್ಸವ ಏ.1ರಿಂದ 8ರವರೆಗೆ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜಾತ್ರಾ ಮಹೋತ್ಸವನ್ನು ಯಶಸ್ವಿಗೊಳಿಸಬೇಕೆಂದು ದೇವಸ್ಥಾನದ ಭಕ್ತವೃಂದ ಪ್ರಕಟಣೆಯಲ್ಲಿ ಮನವಿ ಮಾಡಿದೆ.
ಸಿಂಗಾಪುರ ವಿವಿ ಆಹ್ವಾನ
ಕೊಳ್ಳೇಗಾಲ: ನೈಸರ್ಗಿಕ ಕೃಷಿಕ, ರಾಜ್ಯ ಪರಿಸರ ಪ್ರಶಸ್ತಿ ವಿಜೇತ ಎಂ.ಕೆ.ಕೈಲಾಸಮೂರ್ತಿ ಅವರನ್ನು ನೈಸರ್ಗಿಕ ಕೃಷಿ ಮತ್ತು ಪರಿಸರ ಸಮಸ್ಯೆಗಳ ಕುರಿತು ಉಪನ್ಯಾಸ ನೀಡಲು ಸಿಂಗಾಪುರ ರಾಷ್ಟ್ರೀಯ ವಿವಿ ಆಹ್ವಾನಿಸಿದೆ. ವಿಶ್ವವಿದ್ಯಾನಿಲಯದ ಗ್ರೇಟರ್‌ಗುಡ್ ಸಿರೀಸ್ ಕಾರ್ಯಕ್ರಮದಡಿಯಲ್ಲಿ ಆಹ್ವಾನ ನೀಡಿರುವ ಉಪನಿರ್ದೇಶಕ ಹೋಲ್ಮಾನ್ ಚಿನ್ ಅವರು ಏ.4ರಂದು ಕೃಷಿ ಮತ್ತು ಪರಿಸರ ವಿದ್ಯಾರ್ಥಿಗಳೊಡನೆ ಸಂವಾದ ನಡೆಸಲು ಕೋರಿದ್ದಾರೆ. ನಂತರ ಮಲೇಷ್ಯಾದ ರಾಜಧಾನಿಯಾದ ಕೊಲಾಲಂಪುರಕ್ಕೆ ತೆರಳಿ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಲಿದ್ದಾರೆ. ಕೊಲಾಲಂಪುರದ ಸುಸ್ಥಿರ ಮತ್ತು ನೈಸರ್ಗಿಕ ಕೃಷಿ ಪ್ರತಿಷ್ಠಾನ ಮತ್ತು ಸೆಲಂಗೋರ್ ತೀರಪ್ರದೇಶ ರೈತಸಂಘವು ಏ.6, 7ರಂದು ಸಂಘಟಿಸಿರುವ ಕಾರ್ಯಕ್ರಮಗಳಲ್ಲಿ ಕೈಲಾಸಮೂರ್ತಿ ಅವರು ಆಹಾರೋತ್ಪಾದನೆಯಲ್ಲಿ ಮಣ್ಣಿನ ಫಲವತ್ತತೆ ಮತ್ತು ನಿರ್ವಹಣೆ ಕುರಿತು ಉಪನ್ಯಾಸಗಳನ್ನು ನೀಡಲಿದ್ದಾರೆ. ಮನೆತ್ಯಾಜ್ಯದಿಂದ ತಾರಸಿ ಕೃಷಿ ಮಾಡುವ ಪತ್ನಿ ಭ್ರಮರಾಂಭ ಅವರನ್ನು ಕೂಡಾ ಸಂಘಟಕರು ಆಹ್ವಾನಿಸಿದ್ದಾರೆ. ಏ.9ರಂದು ಅವರು ಭಾರತಕ್ಕೆ ವಾಪಸ್ಸಾಗುವವರು.
ಬೆಟ್ಟಹಳ್ಳಿ ಜಾತ್ರೆ: ನೀತಿ ಸಂಹಿತೆ ಪಾಲಿಸಿ
ಹನೂರು: ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ಕೊಳ್ಳೇಗಾಲ ಉಪ ವಿಭಾಗದದ ಡಿವೈಎಸ್ಪಿ ಚನ್ನಬಸವಣ್ಣ ತಿಳಿಸಿದರು. ಪಟ್ಟಣದಲ್ಲಿ ಏರ್ಪಡಿಸಿದ್ದ ಗ್ರಾಮ ದೇವತೆ ಶ್ರೀ ಬೆಟ್ಟಹಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಈ ಬಾರಿ ಹನೂರು ಪಟ್ಟಣದಲ್ಲಿ 3 ದಿನ ಮದ್ಯಪಾನ ನಿಷೇಧಿಸಲಾಗಿದ್ದು, ಎಲ್ಲ ಬಾರ್‌ಗಳನ್ನು ಮುಚ್ಚಿಸಲಾಗುತ್ತದೆ ಎಂದರು. ಈ ಜಾತ್ರೆಗೆ ವಿವಿಧೆಡೆಯಿಂದ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು. ಉಪವಿಭಾಗಾಧಿಕಾರಿ ಸತೀಶ್‌ಕುಮಾರ್ ಮಾತನಾಡಿ, ಪ್ರತಿಯೊಬ್ಬ ಜನಪ್ರತಿನಿಧಿಗಳ ಮೇಲೆ ಕ್ಯಾಮೆರಾ ನಿಗಾ ಇಡಲಾಗುತ್ತದೆ. ಆದ್ದರಿಂದ ಯಾವುದೇ ರೀತಿಯಲ್ಲೂ ರಾಜಕೀಯವಾಗಿ ಫ್ಲೆಕ್ಸ್, ಬ್ಯಾನರ್‌ಗಳನ್ನು ಹಾಕುವಂತಿಲ್ಲ. ಪಟ್ಟಣದ ಎಲ್ಲ ಜನಾಂಗದ ಮುಖಂಡರು ಜಾತ್ರೆಗೆ ಸಹಕಾರ ನೀಡಬೇಕೆಂದು ತಿಳಿಸಿದರು.ಹನೂರು ತಹಸೀಲ್ದಾರ್ ಮಹದೇವ ಅವರಿಗೆ ಜಾತ್ರೆಯಲ್ಲಿ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

