ನಾಲ್ಕು ಪಕ್ಷಗಳಿಂದ ಸ್ಪರ್ಧಿಸಿ ನಾಲ್ಕು ಗೆಲವು
ಕ.ಪ್ರ.ವಾರ್ತೆ ್ಣ ಚಾಮರಾಜನಗರ ್ಣ ಮಾ.30
ಒಮ್ಮೆ ಗೆದ್ದವರು ಮತ್ತೊಮ್ಮೆ ಗೆಲ್ಲೋದು ಕಷ್ಟ. ಅಂಥದ್ರಲ್ಲಿ ಗುಂಡ್ಲುಪೇಟೆಯ ಶಾಸಕರೊಬ್ಬರು ನಾಲ್ಕು ಪಕ್ಷಗಳಿಂದ ನಾಲ್ಕು ಬಾರಿ ಸ್ಪರ್ಧಿಸಿ, ಜಯಲಕ್ಷ್ಮಿಯನ್ನು ಒಲಿಸಿಕೊಂಡಿದ್ದಾರೆ!
ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವ, ಗುಂಡ್ಲುಪೇಟೆ ಶಾಸಕ ಎಚ್.ಎಸ್. ಮಹದೇವಪ್ರಸಾದ್ ಪ್ರಸ್ತುತ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿದ್ದು, ಐದನೇ ಬಾರಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
1985ರಲ್ಲಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ “VÚßMsÚßÇ®æÞmæ @ÈÚß½’ ಎಂದೇ ಖ್ಯಾತರಾದ ನಾಗರತ್ನಮ್ಮ ಅವರ ವಿರುದ್ಧ ಮೊದಲ ಬಾರಿಗೆ ಜತನಾ ಪಕ್ಷದ ಅಭ್ಯರ್ಥಿಯಾಗಿ 19,140 ಮತಗಳಿಂದ ಸೋತಿದ್ದರು. 1989ರಲ್ಲಿ ಎರಡನೇ ಬಾರಿಗೂ ಅವರ ವಿರುದ್ಧವೇ ಜನತಾದಳದಿಂದ ಸ್ಪರ್ಧಿಸಿ 18,056 ಮತಗಳ ಅಂತರದಿಂದ ಸೋತರು. ಇದಕ್ಕಿಂತ ಮುಂಚೆ ಅವರ ತಂದೆ ಶ್ರೀಕಂಠ ಶೆಟ್ಟಿ ಅವರೂ ನಾಗರತ್ಮಮ್ಮ ವಿರುದ್ಧ ಸೋತಿದ್ದರು.
ಇದೇ ಕ್ಷೇತ್ರದಲ್ಲಿ ಸತತ ಏಳು ಬಾರಿ ಗೆಲವು ಸಾಧಿಸಿ, 1993ರಲ್ಲಿ ನಾಗರತ್ನಮ್ಮ ನಿಧನರಾದ ನಂತರ 1994ರಲ್ಲಿ ಗುಂಡ್ಲುಪೇಟೆಯಲ್ಲಿ ಮಹದೇವಪ್ರಸಾದ್ ಯುಗ ಆರಂಭವಾಯಿತು. 1994ರಲ್ಲಿ ಜನತಾದಳದಿಂದ ಚಕ್ರ ಚಿಹ್ನೆಯಡಿ ಸ್ಪರ್ಧಿಸಿ ಕಾಂಗ್ರೆಸ್‌ನ ಸಿ.ಎಂ. ಶಿವಮಲ್ಲಪ್ಪ ಅವರನ್ನು 24,056 ಮತಗಳ ಅಂತರದಿಂದ ಸೋಲಿಸುವ ಮೂಲಕ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.
ಒಲಿದ ಜಯಲಕ್ಷ್ಮಿ: 1999ರಲ್ಲಿ ಜೆಡಿಯುನಿಂದ ಬಾಣ ಗುರುತಿನಡಿ ಸ್ಪರ್ಧಿಸಿ, ಕಾಂಗ್ರೆಸ್‌ನ ಎಚ್.ಎಸ್. ನಂಜಪ್ಪ ಅವರನ್ನು 24,981 ಮತಗಳ ಅಂತರದಿಂದ ಸೋಲಿಸಿದರು. 2004ರಲ್ಲಿ ಜೆಡಿಎಸ್‌ನ ತೆನೆ ಹೊತ್ತ ರೈತ ಮಹಿಳೆ ಗುರುತಿನಡಿ ಸ್ಪರ್ಧಿಸಿ, ಕಾಂಗ್ರೆಸ್‌ನ ಎಚ್.ಎಸ್. ನಂಜಪ್ಪ ಅವರನ್ನು 11,019 ಮತಗಳಿಂದ ಸೋಲಿಸಿದರು. 2008ರಲ್ಲಿ ಕಾಂಗ್ರೆಸ್ ಸೇರಿದ ಅವರು ಹಸ್ತದ ಗುರ್ತಿನಡಿ ಸ್ಪರ್ಧಿಸುವ ಮೂಲಕ ಬಿಜೆಪಿಯ ಸಿ.ಎಸ್. ನಿರಂಜನ್ ಕುಮಾರ್ ಅವರನ್ನು 2,303 ಮತಗಳ ಅಂತರಿಂದ ಸೋಲಿಸುವ ಮೂಲಕ ಸತತ ನಾಲ್ಕು ಬಾರಿ, ನಾಲ್ಕು ಚಿಹ್ನೆ ಹಾಗೂ ನಾಲ್ಕು ಪಕ್ಷಗಳಿಂದ ಗೆದ್ದರು.
ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ: 2004ರಲ್ಲಿ ಆಯ್ಕೆಯಾದಾಗ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿ ಮತ್ತು ಜೆಡಿಎಸ್-ಬಿಜೆಪಿ ಸರ್ಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದರು.
ಅಪ್ಪ-ಮಕ್ಕಳ ಇತಿಹಾಸ: ಗುಂಡ್ಲುಪೇಟೆ ವಿಧಾಸಭಾ ಕ್ಷೇತ್ರ ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ಒಬ್ಬರು ಸತತ ಏಳು ಬಾರಿ ಗೆದ್ದರೆ, ಮತ್ತೊಬ್ಬರು ಸತತ ನಾಲ್ಕು ಬಾರಿ, ನಾಲ್ಕು ಚಿಹ್ನೆಗಳಿಂದ ಗೆದ್ದಿದ್ದಾರೆ. ಇದುವರೆಗೂ ಇಲ್ಲಿ ಆಯ್ಕೆಯಾಗಿದ್ದು ಮೂವರು ಶಾಸಕರು ಮಾತ್ರ.
ಅದೇ ಅಪ್ಪ-ಮಗ ಸೋತಿರುವ ಇತಿಹಾಸದೊಂದಿಗೆ ಅಪ್ಪ, ಮಗನನ್ನೂ ಸೋಲಿಸಿರುವ ಇತಿಹಾಸವೂ ಈ ಕ್ಷೇತ್ರದಲ್ಲಿದೆ. ಮಹದೇವಪ್ರಸಾದ್ ಅವರ ಕುಟುಂಬ ಈ ಕ್ಷೇತ್ರದಿಂದ ಏಂಟು ಬಾರಿ ಸ್ಪರ್ಧಿಸಿ, ನಾಲ್ಕು ಬಾರಿ ಗೆದ್ದಿದೆ. 1978ರಲ್ಲಿ ಮಹದೇವಪ್ರಸಾದ್ ಅವರ ತಂದೆ ಎಚ್.ಎನ್. ಶ್ರೀಕಂಠಶೆಟ್ಟಿ ಕಾಂಗ್ರೆಸ್ (ಐ) ಅಭ್ಯರ್ಥಿಯಾಗಿ ಹಸ್ತ ಗುರುತಿನಿಂದ, 1983ರಲ್ಲಿ ಜನತಾರಂಗದಿಂದ ಸ್ಪರ್ಧಿಸಿ ನಾಗರತ್ನಮ್ಮ ಅವರ ಎದುರು ಸೋತಿದ್ದರು.
ಮಹದೇವ ಪ್ರಸಾದ್ 1994ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ 1999ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸಿ.ಎಂ. ಶಿವಮಲ್ಲಪ್ಪ ಅವರನ್ನು ಸತತ ಎರಡು ಬಾರಿ ಸೋಲಿಸಿದ್ದಾರೆ. ನಂತರ 2008ರಲ್ಲಿ ಸಿ.ಎಂ. ಶಿವಮಲ್ಲಪ್ಪ ಅವರ ಪುತ್ರ ಸಿ.ಎಸ್. ನಿರಂಜನ್‌ಕುಮಾರ್ ಅವರನ್ನೂ ಸೋಲಿಸಿದ್ದಾರೆ. ಇದೀಗ ಕೆಜೆಪಿಯಿಂದ ನಿರಂಜನ್‌ಕುಮಾರ್ ಅವರನ್ನೇ ಎದುರಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

