ಚಾಮರಾಜನಗರ

ಡೆಂಘೀ, ಚಿಕೂನ್‌ಗುನ್ಯ ತಡೆಗೆ ಕ್ರಮ

Published On :

ಚಾಮರಾಜನಗರ: ಸಮುದಾಯದ ಸಹಭಾಗಿತ್ವ ಹಾಗೂ ಅಂತರ ಇಲಾಖೆಗಳ ಸಮನ್ವಯ ಸಹಕಾರದಿಂದ ಮಲೇರಿಯಾ, ಡೆಂಘೀ, ಚಿಕೂನ್‌ಗುನ್ಯ ಸೇರಿದಂತೆ ಅನೇಕ ಮಾರಕ ರೋಗ ತಡೆಗಟ್ಟಲು ಸಾಧ್ಯ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಹೇಮಂತ್‌ಕುಮಾರ್ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಆರೋಗ್ಯ ಇಲಾಖೆಯ ಸಭಾಂಗಣದಲ್ಲಿ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಾರ್ತಾ ಇಲಾಖೆ ಸಹಯೋಗದಲ್ಲಿ ನಡೆದ ಶಕ್ತಿಬಿಂದು ಕಾರ್ಯಾಗಾರದಲ್ಲಿ ಮಾತನಾಡಿ, ಈಡಿಸ್ ಜಾತಿಯ ಸೊಳ್ಳೆಗಳಿಂದ ಡೆಂಘೆ, ಚಿಕನ್‌ಗುನ್ಯ ಬರಲಿದ್ದು, ಅನಾಫೆಲಿಸ್ ಸೊಳ್ಳೆಯಿಂದ ಮಲೇರಿಯ ಉಂಟಾಗುತ್ತದೆ.
ವಾರಕ್ಕೊಮ್ಮೆ ಮನೆಯಲ್ಲಿನ ನೀರಿನ ಶೇಖರಣೆ ಖಾಲಿ ಮಾಡಿ, ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಭರ್ತಿ ಮಾಡಿ, ಸೊಳ್ಳೆಗಳು ನುಸುಳದಂತೆ ಭದ್ರವಾಗಿ ಮುಚ್ಚಿಕೊಳ್ಳಬೇಕು. ಈಡಿಸ್ ಸೊಳ್ಳೆಗಳನ್ನು ನಾಶ ಪಡಿಸುವ ಸಲುವಾಗಿ ಗಪ್ಪಿ, ಗಬ್ಯೂಸಿಯಾ ಜಾತಿಯ ಮೀನುಗಳನ್ನು ಇಲಾಖೆಯಿಂದ ನೀಡಲಾಗುತ್ತಿದ್ದು,  ಸಾರ್ವಜನಿಕರು ಇದನ್ನು ಪಡೆದುಕೊಳ್ಳಬಹುದು ಎಂದರು.
ಜಿಲ್ಲೆಯಲ್ಲಿ ಮಲೇರಿಯ ಶಿವನಸಮುದ್ರ ಹಾಗೂ ಸತ್ತೇಗಾಲದಲ್ಲಿ 100ಕ್ಕೆ ಶೇ.85ರಷ್ಟಿದೆ. ಈ ಹಿನ್ನೆಲೆಯಲ್ಲಿ ಸತ್ತೇಗಾಲ ಹಾಗೂ ಶಿವನಸಮುದ್ರ ಗ್ರಾಮಸ್ಥರಿಗೆ 4 ಸಾವಿರ ಸೊಳ್ಳೆ ಪರದೆ ವಿತರಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಮಲೇರಿಯಾ 2012 ಜನವರಿಯಿಂದ ಡಿಸೆಂಬರ್ ಅಂತ್ಯದವರಗೆ 96 ಪ್ರಕರಣ, ಡೆಂಗ್ಯೂ 2010 ರಿಂದ 12 ಪ್ರಕರಣ ದಾಖಲಾಗಿದೆ. ಚಿಕುನ್‌ಗುನ್ಯಾ 2010ರಿಂದ 12 ಪ್ರಕರಣಗಳು ದಾಖಲಾಗಿವೆ ಎಂದರು.
ವಾರ್ತಾ ಸಹಾಯಕ ರಮೇಶ್, ಜಿಲ್ಲಾ ಕೀಟ ಶಾಸ್ತ್ರಜ್ಞೆ ರೇಖಾ, ರೋಗ ಪರಿಮಿತಿ ತಜ್ಞ ರಾಜೇಶ್, ಹಿರಿಯ ಆರೋಗ್ಯ ಮೇಲ್ವಿಚಾರಕರಾದ ರಾಜಣ್ಣ, ಬಾಲಸುಬ್ರಹ್ಮಣ್ಯ ಇದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.