ಕನಕ ಸಮುದಾಯ ಭವನ ಉದ್ಘಾಟನೆ
ಗುಂಡ್ಲುಪೇಟೆ: ಆಡಳಿತಾರೂಢ ಬಿಜೆಪಿ ಮತ್ತು ಈಗ ಅಸ್ತಿತ್ವಕ್ಕೆ ಬಂದಿರುವ ಕೆಜೆಪಿಯವರ ಜಂಗಿ ಕುಸ್ತಿ ಮುಂದುವರಿಯಲಿ. ನಾವು ಮಾತ್ರ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡುತ್ತೇವೆ ಎಂದು ಶಾಸಕ ಎಚ್.ಎಸ್.ಮಹದೇವಪ್ರಸಾದ್ ತಿಳಿಸಿದರು.
ತಾಲೂಕಿನ ಮರಳಾಪುರ ಗ್ರಾಮದಲ್ಲಿ ಕನಕ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿ, ನನ್ನ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಇನ್ನು ಸಹ ಕೆಲಸ ಮಾಡಬೇಕು ಎಂಬ ಆಸೆ ಇದೆ. ಆದರೆ ಈ ಕೆಜೆಪಿ ಬಿಜೆಪಿ ಕಚ್ಚಾಟದ ನಡುವೆ ಸರ್ಕಾರ ಇನ್ನಷ್ಟು ದಿನ ಉಳಿದರೆ ನಂಜನಗೂಡು ತಾಲೂಕಿನ ಕಳಲೆ ಬಳಿಯಿರುವ ಕಬಿನಿ ಚಾನಲ್ನಿಂದ ನನ್ನ ಕ್ಷೇತ್ರದ ಆರು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡುತ್ತೇನೆ ಎಂದರು.
ಕಳಲೆ ಚಾನಲ್ನಿಂದ ಹಳ್ಳದಮಾದಹಳ್ಳಿ, ಅಗತಗೌಡನಹಳ್ಳಿ, ರಾಘವಾಪುರ, ಮಳವಳ್ಳಿ, ಹಾಲಹಳ್ಳಿ ಪಿಕಪ್ಗೆ ನೀರು ಬರುವಂಥ ಯೋಜನೆ ಇದಾಗಿದೆ ಎಂದರು.
ಮರಳಾಪುರ ಗ್ರಾಮ ಸೇರಿದಂತೆ ಎಲಚಟ್ಟಿ, ಜಕ್ಕಹಳ್ಳಿ, ಸೀಗೆವಾಡಿಗೆ 50 ಸಾವಿರ ಲೀ. ಸಾಮರ್ಥ್ಯದ ಓವರ್ಹೆಡ್ ಟ್ಯಾಂಕ್ಗಳು ಮಂಜೂರಾಗಿವೆ. ಕೊಡಗಾಪುರದಿಂದ ಮರಳಾಪುರ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಶೀಘ್ರದಲ್ಲಿ ಚಾಲನೆ ಸಿಗಲಿದೆ ಎಂದರು. ಜಿಪಂ ಸದಸ್ಯ ಡಿ.ಸಿ.ನಾಗೇಂದ್ರ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ಮುನಿರಾಜು, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ಕೆಜೆಪಿ ಮುಖಂಡ ಸೋಮಹಳ್ಳಿ ಕುಮಾರಸ್ವಾಮಿ, ಗ್ರಾಮದ ಮುಖಂಡ ಗುರುಸ್ವಾಮಿ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

