ಅರ್ಜಿ ಆಹ್ವಾನ
ಚಾಮರಾಜನಗರ: ಯಳಂದೂರು ಪಪಂ ವ್ಯಾಪ್ತಿಯಲ್ಲಿ ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮದ ವತಿಯಿಂದ 2012-13ನೇ ಸಾಲಿಗೆ ನಮ್ಮ ಮನೆ, ವಾಜಪೇಯಿ ನಗರ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು ಮನೆ ನಿರ್ಮಾಣದ ಮೊತ್ತ 1.80 ಲಕ್ಷ. ಬ್ಯಾಂಕ್ ಸಾಲ 75 ಸಾವಿರ, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ(ವಾಜಪೇಯಿ) 75 ಸಾವಿರ, ಫಲಾನುಭವಿಗಳ ವಂತಿಕೆ 30 ಸಾವಿರ ವೆಚ್ಚದಲ್ಲಿ ಮನೆ ನಿರ್ಮಾಣಕ್ಕೆ ಅವಕಾಶವಿದೆ. ಒಟ್ಟು 200 ಮನೆಗಳ ನಿರ್ಮಾಣಕ್ಕೆ ಗುರಿ ಹೊಂದಲಾಗಿದ್ದು, ಈಗಾಗಲೇ ಪ್ರಕಟಣೆ ನೀಡುವ ಮೂಲಕ 150 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಉಳಿದ 50 ಮಂದಿಯನ್ನು ಸದ್ಯದಲ್ಲೇ ಆಯ್ಕೆ ಮಾಡಲಾಗುತ್ತದೆ. ಪಟ್ಟಣ ವ್ಯಾಪ್ತಿಯಲ್ಲಿ ವಾಸವಿದ್ದು, ಮಾಸಿಕ ಆದಾಯ 7300ಗಿಂತ ಕಡಿಮೆ ಇರುವ ನಿವೇಶನದ ಮಾಲೀಕರು ವಸತಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಪಪಂ ಕಾರ್ಯಾಲಯದಿಂದ ಪಡೆದು, ಅಗತ್ಯ ದಾಖಲಾತಿಗಳೊಂದಿಗೆ ಭರ್ತಿ ಮಾಡಿ, ಜ.30ರೊಳಗೆ ಸಲ್ಲಿಸಬೇಕು.
ಪದಾಧಿಕಾರಿ ಆಯ್ಕೆ
ಗುಂಡ್ಲುಪೇಟೆ: ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾಗಿ ಚಂದ್ರಶೇಖರ್, ಉಪಾಧ್ಯಕ್ಷರಾಗಿ ನಾಗಮ್ಮ ಅವಿರೋಧ ಆಯ್ಕೆಯಾದರೆಂದು ಚುನಾವಣಾಧಿಕಾರಿಗಳಾದ ತಹಸೀಲ್ದಾರ್ ಕವಿತಾ ರಾಜರಾಂ ಘೋಷಿಸಿದರು. ನೂತನ ಅಧ್ಯಕ್ಷರಿಗೆ ಜಿಪಂ ಮಾಜಿ ಅಧ್ಯಕ್ಷರಾದ ಬಿ.ಎಂ.ಮುನಿರಾಜು, ಕಬ್ಬಹಳ್ಳಿ ಮಹೇಶ್, ತಾಪಂ ಅಧ್ಯಕ್ಷೆ ಗಾಯತ್ರಿ, ಸದಸ್ಯರಾದ ಕನ್ನೇಗಾಲಸ್ವಾಮಿ, ಜಯರಾಂ, ಎಪಿಎಂಸಿ ನಿರ್ಗಮಿತ ಅಧ್ಯಕ್ಷ ಮಹೇಶ್ಚಂದ್ರ, ಉಪಾಧ್ಯಕ್ಷ ಜಿ.ಜಿ.ಗೋಪಾಲಪ್ಪ, ನಿರ್ದೇಶಕರಾದ ಎಚ್.ಎಂ.ಗಂಗಾಧರಪ್ಪ, ಸೋಮಹಳ್ಳಿ ಚಂದ್ರಶೇಖರ್, ಆಲತ್ತೂರು ರಾಜೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಬಿ.ರಾಜಶೇಖರ್, ಮುಖಂಡರಾದ ನಾಗರಾಜಪ್ಪ, ಹಂಗಳ ಮಹದೇವಪ್ಪ, ಬೊಮ್ಮಯ್ಯ, ಕೆ.ಸಿ.ಮಧು, ಬಿಜೆಪಿಯ ಎಚ್.ಜಿ.ಮಲ್ಲಿಕಾರ್ಜುನಸ್ವಾಮಿ, ಎಂಪಿಸಿಎಸ್ ಅಧ್ಯಕ್ಷ ಪುತ್ತನಪುರ ಕಾಳೇಗೌಡ, ಎಪಿಎಂಸಿ ಕಾರ್ಯದರ್ಶಿ ಸಣ್ಣೇಗೌಡ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಜರಿದ್ದು ಶುಭ ಹಾರೈಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

