ಚಾಮರಾಜನಗರ

26ರಂದು ಕುವೆಂಪು ನಮನ ಕಾರ್ಯಕ್ರಮ

Published On :

ಮೈಸೂರು:  ಕುವೆಂಪು ನಗರದ ಅನಿಕೇತನ ಸೇವಾ ಟ್ರಸ್ಟ್ ವತಿಯಿಂದ ಜ.26ರ ಸಂಜೆ 6ಕ್ಕೆ ಆದಿಚುಂಚನಗಿರಿ ರಸ್ತೆಯ ಸೌಗಂಧಿಕ ಉದ್ಯಾನವನದಲ್ಲಿ ಗಣರಾಜ್ಯೋತ್ಸವ ಮತ್ತು ರಸಋಷಿ ಕುವೆಂಪು ನಮನ ಕಾರ್ಯಕ್ರಮ ಆಯೋಜಿಸಿದೆ.
ಗಾಯಕರಾದ ರತ್ನಮಾಲಾ ಪ್ರಕಾಶ್, ಪುತ್ತೂರು ನರಸಿಂಹನಾಯಕ್, ಎಸ್. ಸುನೀತಾ, ವ್ಯಾಸರಾಜ ಮತ್ತು ದಿವ್ಯಾ ಗಾಯನ ಕಾರ್ಯಕ್ರಮ ನೀಡುವರು ಎಂದು ಟ್ರಸ್ಟ್ ಅಧ್ಯಕ್ಷರಾದ ಪಾಲಿಕೆ ಸದಸ್ಯ ಕೆ.ವಿ. ಮಲ್ಲೇಶ್ ತಿಳಿಸಿದ್ದಾರೆ.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮಂಡ್ಯದ ಜಿ. ಮಾದೇಗೌಡ ಕಾರ್ಯಕ್ರಮ ಉದ್ಘಾಟಿಸುವರು. ಸ್ವಾತಂತ್ರ್ಯ ಸೇನಾನಿ ಎಚ್.ಎಸ್. ದೊರೆಸ್ವಾಮಿ, ಹಿರಿಯ ವಿದ್ವಾಂಸ ಡಾ. ಪ್ರಭುಶಂಕರ ಮಾತನಾಡುವರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮೇಯರ್ ಎಂ.ಸಿ. ರಾಜೇಶ್ವರಿ, ಶಾಸಕರಾದ ಸಾ.ರಾ. ಮಹೇಶ್, ಎಚ್.ಎಸ್. ಮಹಾದೇವಪ್ರಸಾದ್, ಮರಿತಿಬ್ಬೇಗೌಡ, ಸಿ.ಎಚ್. ವಿಜಯಶಂಕರ್, ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ, ಸಂದೇಶ್ ನಾಗರಾಜ್,  ಮಾಜಿ ಸ್ಪೀಕರ್ ಕೃಷ್ಣ, ಎಂಡಿಎ ಅಧ್ಯಕ್ಷ ಎಲ್. ನಾಗೇಂದ್ರ ಭಾಗವಹಿಸುವರು.
ವಿವಿಧ ಕ್ಷೇತ್ರದ ಸಾಧನೆಗಾಗಿ ಡಾ. ಪ್ರಧಾನ ಗುರುದತ್ತ, ಡಾ.ಕೆ.ಎಸ್. ರಂಗಪ್ಪ, ಕೃಷ್ಣವಟ್ಟಂ, ನಂದಿನಿ ಈಶ್ವರ್, ಡಾ.ವಿ. ಲಕ್ಷ್ಮೀನಾರಾಯಣ, ಉದ್ಯಮಿಗಳಾದ ಶಿವಪ್ರಕಾಶ್, ಗೋವಿಂದೇಗೌಡ, ಎಂ.ಸಿ. ಸುಂದರೇಶನ್, ಸಿ. ನರಸೇಗೌಡ, ಕೃಷ್ಣ, ಸುರೇಶ್‌ಆಳ್ವ ಅವರನ್ನು ಸನ್ಮಾನಿಸಲಾಗುವುದು. ಪತ್ರಿಕೋದ್ಯಮಿ ರಾಜಶೇಖರ ಕೋಟಿ ಮಾತನಾಡುವರು.
ಪ್ರಭಾರ ಜಿಲ್ಲಾಧಿಕಾರಿ ಡಾ. ಅಜಯ್ ನಾಗಭೂಷಣ್, ಪೊಲೀಸ್ ಆಯುಕ್ತ ಕೆ.ಎಲ್. ಸುಧೀರ್, ಎಂಡಿಎ ಆಯುಕ್ತ ಡಾ.ಸಿ.ಜೆ. ಬೆಟಸೂರಮಠ, ಪಾಲಿಕೆ ಆಯುಕ್ತ ಡಾ.ಎಂ.ಆರ್. ರವಿ ಭಾಗವಹಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.