ಚಾಮರಾಜನಗರ

ಓಂಕಾರ ಸಿದ್ದೇಶ್ವರಸ್ವಾಮಿ ರಥ ಬಂಡಿ ಪೂಜೆ

Published On :

ಬೇಗೂರು: ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿ ಹೊಣಕನಪುರ ಗ್ರಾಮದ ಓಂಕಾರ ಸಿದ್ದೇಶ್ವರಸ್ವಾಮಿ ಜಾತ್ರೆ ಫೆ.25 ರಂದು ನಡೆಯಲಿರುವ ಸಂಬಂಧ ನೂತನವಾಗಿ ನಿರ್ಮಿಸಿರುವ ರಥದ ಬಂಡಿಗೆ ಪೂಜೆ  ಸಲ್ಲಿಸಲಾಯಿತು.
ಈ ಹಿಂದೆ ಎಳೆಯಲಾಗುತ್ತಿದ್ದ ರಥದ ಬಂಡಿಗಳು ಶಿಥಿಲಗೊಂಡಿದ್ದು, ಈ ಬಾರಿ ರಥೋತ್ಸವದಲ್ಲಿ ಅದು ಚಲಿಸುವುದು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕ ಎಚ್.ಎಸ್. ಮಹದೇವಪ್ರಸಾದ್ ಅವರು ತಮ್ಮ ಶಾಸಕರ ನಿಧಿಯಿಂದ 1.20 ಲಕ್ಷ ನೀಡಿದ್ದು, ಮಿಕ್ಕ ಹಣವನ್ನು ಗ್ರಾಮಸ್ಥರು ಭಕ್ತಾದಿಗಳಿಂದ ಸಂಗ್ರಹಿಸಿ  3.20 ಲಕ್ಷ ವೆಚ್ಚದಲ್ಲಿ ನೂತನ ರಥದ ಬಂಡಿಗಳನ್ನು ನಿರ್ಮಿಸಿದ್ದಾರೆ.
ಈ ಸಂಬಂಧ ಫೆ. 25 ರಂದು ಓಂಕಾರ ಸಿದ್ದೇಶ್ವರ ಜಾತ್ರೆ ನಡೆಯಲ್ಲಿದ್ದು, ನಂಜನಗೂಡು ತಾಲೂಕಿನ ಕೃಷ್ಣಾಪುರ, ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿ, ಹೊರೆಯಾಲ, ರಂಗೂಪುರ, ಹೊಸಪುರ  ಗ್ರಾಮಗಳ  5 ರಥಗಳು ಜಾತ್ರೆಯಲ್ಲಿ ಭಾಗವಹಿಸುವುದು ವಿಶೇಷವಾಗಿದೆ.
ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಬಿ.ಎಂ, ಮುನಿರಾಜು, ಸದಸ್ಯ ಡಿ.ಸಿ.ನಾಗೇಂದ್ರ, ತಾ.ಪಂ ಸದಸ್ಯ ಜಯರಾಂ , ಪುರಸಭಾ ಮಾಜಿ ಅಧ್ಯಕ್ಷ ಜಿ.ಎಲ್ ಸುರೇಶ್, ತಾಲೂಕು ಕುರುಬ ಜನಾಂಗದ ಉಪಾಧ್ಯಕ್ಷ ಸ್ವಾಮಿ, ಓಂಕಾರ್ ವಲಯ ಅರಣ್ಯಾಧಿಕಾರಿ ಸತೀಶ್, ಹೊಣಕನಪುರ ಗ್ರಾಮದ ಶಿವರುದ್ರಪ್ಪ, ನಿಂಗರಾಜಪ್ಪ,ಕುಮಾರ್, ಹೊನ್ನಯ್ಯ , ಶಿವಯ್ಯಗೌಡ, ಮಹದೇವೇಗೌಡ, ಕೆ. ಸಿದ್ದೇಗೌಡ, ಮರಿಸ್ವಾಮಿ, ಚನ್ನಬಸವಯ್ಯ, ಇತರರು ಹಾಜರಿದ್ದರು.

ಅಭ್ಯರ್ಥಿಗಳ ಗೆಲವಿಗೆ ಶ್ರಮಿಸಿ: ಧ್ರುವನಾರಾಯಣ
ಹನೂರು: ಪಟ್ಟಣದ ಎಲ್ಲಾ ವಾರ್ಡುಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳ ಗೆಲವಿಗೆ ಶ್ರಮಿಸುವಂತೆ ಸಂಸದ ಆರ್.ಧ್ರುವನಾರಾಯಣ ಅವರು ಮನವಿ ಮಾಡಿದರು.
ಮಾ.7 ರಂದು ಪಟ್ಟಣ ಪಂಚಾಯ್ತಿ ಚುನಾವಣೆ ಸಂಬಂಧ ಪಟ್ಟಣದ ವಾಸವಿ ಮಹಲ್‌ನಲ್ಲಿ ಕಾಂಗ್ರೆಸ್ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಹನೂರು ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು ಕಳೆದ ಬಾರಿ ಪಟ್ಟಣದ 13 ವಾರ್ಡ್‌ಗಳ ಪೈಕಿ 9 ವಾರ್ಡ್‌ಗಳಲ್ಲಿ ಪಕ್ಷ ಗೆಲವು ಸಾಧಿಸಿತ್ತು. ಹನೂರು ಪಟ್ಟಣವು ತಾಲೂಕು ಕೇಂದ್ರವಾಗಿ ಘೋಷಣೆಯಾಗಿದ್ದು,  ಸಮೀಕ್ಷೆಗಳ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಟಿಕೆಟ್ ಸಿಗದ ಅಭ್ಯರ್ಥಿಗಳು ಸಹ  ಒಗ್ಗಟ್ಟಿನಿಂದ ಶ್ರಮಿಸಬೇಕು. ಮುಂದಿನ ದಿನಗಳಲ್ಲಿ ಎಲ್ಲರಿಗೂ ಸರಿಸಮನಾಗಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ನರೇಂದ್ರ ಮಾತನಾಡಿ, ಹನೂರನ್ನು ತಾಲೂಕು ಕೇಂದ್ರ ಮಾಡಲು ಕಳೆದ 16 ವರ್ಷದದಿಂದ ಮಾಜಿ ಶಾಸಕ  ದಿ.ರಾಜುಗೌಡರು ನಡೆಸಿದ ಹೋರಾಟಕ್ಕೆ ಫಲ ದೊರಕಿದಂತಾಗಿದೆ.
2001 ರ ಜನಗಣತಿಯ ಆಧಾರದ ಮೇಲೆ 2007 ರ ಮೀಸಲಾತಿ ಅನ್ವಯ ಚುನಾವಣೆ ನಡೆಸಲು ಸುಪ್ರಿಂ ಕೋರ್ಟ್ ಆದೇಶಿಸಿದ್ದು, ಪಟ್ಟಣ ಪಂಚಾಯ್ತಿಯ 13 ವಾರ್ಡ್‌ಗಳಲ್ಲಿಯೂ ಕಾಂಗ್ರೆಸ್ ಗೆಲವಿಗೆ ಶ್ರಮಿಸುವಂತೆ  ಹಾಗೂ ಅರ್ಜಿ ಸಲ್ಲಿಸಲು ಎರಡು ದಿನಗಳ ಕಾಲಾವಕಾಶವಿದ್ದು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದರೆ ಸಂಸದರು,  ಮುಖಂಡರುಗಳು ಜೊತೆ ಚರ್ಚಿಸಿ ಅಭ್ಯರ್ಥಿಗಳನ್ನು ಆಯ್ಕೆಮಾಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಕಾಂಗ್ರೆಸ್ ಮುಖಂಡ ದತ್ತೇಶ್, ಸಂಪಂಗಿ ರಾಮಯ್ಯ, ಹಿರಿಯ ಮುಖಂಡ ಕೆ.ಕೆ ನಟರಾಜ್, ಜಿ.ಪಂ ಸದಸ್ಯರುಗಳಾದ ಈಶ್ವರ, ದೇವರಾಜ್, ಮುಖಂಡರುಗಳಾದ ಕಾಮರಾಜು, ಶಿವಕುಮಾರ್, ಚೆಲುವರಾಜ್, ಜಯಪ್ರಕಾಶ್ ಗುಪ್ತ, ವೆಂಕಟರಮಣ ನಾಯ್ಡು, ಪ.ಪಂ ಮಾಜಿ ಉಪಾಧ್ಯಕ್ಷ ಮಾದೇಶ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.