ಚಾಮರಾಜನಗರ

ಚುನಾವಣೆ: ನಾಮಪತ್ರ ಸಲ್ಲಿಸುವುದೆಲ್ಲಿ?

Published On :

ಚಾಮರಾಜನಗರ: ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿಗಳ ನೇಮಕ ಹಾಗೂ ಅಧಿಕಾರಿಗಳ ನಾಮಪತ್ರ ಸ್ವೀಕರಿಸುವ ಸ್ಥಳಗಳನ್ನು ನಿಗದಿಪಡಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ ಆದೇಶ ಹೊರಡಿಸಿದ್ದಾರೆ.
ಚಾಮರಾಜನಗರ ನಗರಸಭೆ: ವಾರ್ಡ್ ಸಂ.1ರಿಂದ 8ರವರೆಗೆ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು(9480381370) ಚುನಾವಣಾಧಿಕಾರಿ ಹಾಗೂ ಕೃಷಿ ಸಹಾಯಕ ನಿರ್ದೇಶಕ(8095782384)ರನ್ನು ಸಹಾಯಕ ಚುನಾವಣಾಧಿಕಾರಿಯನ್ನಾಗಿ ನೇಮಿಸಲಾಗಿದೆ. ನಗರದ ತಾಲೂಕು ಕಚೇರಿ ಹಿಂಭಾಗದಲ್ಲಿರುವ ಕೃಷಿ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ನಾಮಪತ್ರಗಳನ್ನು ಸ್ವೀಕರಿಸಲು ಸ್ಥಳ ನಿಗದಿ ಮಾಡಲಾಗಿದೆ.
ವಾರ್ಡ್ ಸಂ.9ರಿಂದ 16ಕ್ಕೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು(8197237017) ಚುನಾವಣಾಧಿಕಾರಿಯಾಗಿ, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು(944803754) ಸಹಾಯಕ ಚುನಾವಣಾಧಿಕಾರಿಯಾಗಿ ನೇಮಕವಾಗಿದ್ದು, ನಗರದ ತಾಲೂಕು ಕಚೇರಿ ಕೊಠಡಿ ಸಂ.5ರಲ್ಲಿ  ನಾಮಪತ್ರ ಸ್ವೀಕರಿಸುವರು.
ವಾರ್ಡ್ ಸಂ. 17ರಿಂದ 24ರವರೆಗೆ ಜಿಪಂ ರೇಷ್ಮೆ ಉಪನಿರ್ದೇಶಕರು(9448569868) ಚುನಾವಣಾಧಿಕಾರಿ. ಕೆಎಸ್‌ಪಿ ರೇಷ್ಮೆ ಸಹಾಯಕ ನಿರ್ದೇಶಕರ(9449019958)ನ್ನು ಸಹಾಯಕ ಚುನಾವಣಾಧಿಕಾರಿಯನ್ನಾಗಿ ನೇಮಿಸಲಾಗಿದೆ. ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ(08226-223220) ನಾಮಪತ್ರ ಸ್ವೀಕರಿಸಲಿದ್ದಾರೆ.
ವಾರ್ಡ್ ಸಂ- 25ರಿಂದ 31ರವರೆಗೆ ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿ(9480124861) ಚುನಾವಣಾಧಿಕಾರಿಯಾಗಿ, ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು(9480843090) ಸಹಾಯಕ ಚುನಾವಣಾಧಿಕಾರಿಯಾಗಿ ನೇಮಕವಾಗಿದ್ದು, ನಗರದ ತಾಲೂಕು ಕಚೇರಿಯಲ್ಲಿ(08226 223220) ನಾಮಪತ್ರ ಸ್ವೀಕರಿಸುವರು.
ಕೊಳ್ಳೇಗಾಲ ನಗರಸಭೆ: ವಾರ್ಡ್ ಸಂ.1ರಿಂದ 8ರವರೆಗೆ ಕೊಳ್ಳೇಗಾಲ ಕೃಷಿ ಸಹಾಯಕ ನಿರ್ದೇಶಕರು(7259004800)ಚುನಾವಣಾಧಿಕಾರಿಯಾಗಿ, ತಾಲೂಕು ಸಮಾಜ ಕಲ್ಯಾಣಾಧಿಕಾರಿ(9449831999) ಸಹಾಯಕ ಚುನಾವಣಾಧಿಕಾರಿಯಾಗಿ ನೇಮಕವಾಗಿದ್ದು, ಕೊಳ್ಳೇಗಾಲ ಮಿನಿ ವಿಧಾನಸೌಧದಲ್ಲಿರುವ ತಾಲೂಕು ಕಚೇರಿಯಲ್ಲಿ(08224-26204)) ನಾಮಪತ್ರ ಸ್ವೀಕರಿಸುವರು.
ವಾರ್ಡ್ ಸಂ-9ರಿಂದ16ರವರೆಗೆ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಚುನಾವಣಾಧಿಕಾರಿಯನ್ನಾಗಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ(9088221846)ಯನ್ನು ಸಹಾಯಕ ಚುನಾವಣಾಧಿಕಾರಿಯಾಗಿ ನೇಮಕ ಮಾಡಿದ್ದು, ಕೊಳ್ಳೇಗಾಲದ ನಗರಸಭೆ ಕಚೇರಿಯಲ್ಲಿ ನಾಮಪತ್ರ ಸ್ವೀಕರಿಸಲಾಗುವುದು.
ವಾರ್ಡ್ ಸಂ.17ರಿಂದ 24ಕ್ಕೆ ತಾಪಂ ಇಒ(9480858110) ಚುನಾವಣಾಧಿಕಾರಿಯಾಗಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ(ಬಿಆರ್ಸಿ)( 9448105523) ಸಹಾಯಕ ಚುನಾವಣಾಧಿಕಾರಿಯಾಗಿ ನೇಮಕವಾಗಿದ್ದು,  ಕೊಳ್ಳೇಗಾಲ ತಾಪಂ ಕಚೇರಿಯಲ್ಲಿ ನಾಮಪತ್ರ ಸ್ವೀಕರಿಸುವರು.
ವಾರ್ಡ್ ಸಂ.25ರಿಂದ 31ಕ್ಕೆ ಸಹಾಯಕ ಕಾರ್ಯಪಾಲಕ ಅಭಿಯಂತರರು, ನಂ.4, ಕಬಿನಿ ನಾಲಾ ಉಪವಿಭಾಗ, ಕಾಮಗೆರೆ(9448209032 ) ಇವರು ಚುನಾವಣಾಧಿಕಾರಿಯಾಗಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಕಾರ್ಯದರ್ಶಿ(9480120008) ಸಹಾಯಕ ಚುನಾವಣಾಧಿಕಾರಿಯಾಗಿ ನೇಮಕವಾಗಿದ್ದು,  ಕೊಳ್ಳೇಗಾಲ ತಾಪಂ ಕಚೇರಿಯಲ್ಲಿ ನಾಮಪತ್ರ ಸ್ವೀಕರಿಸುವರು.
ಗುಂಡ್ಲುಪೇಟೆ ಪುರಸಭೆ: ವಾರ್ಡ್ 1ರಿಂದ 10ರವರೆಗೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ(9480695107) ಚುನಾವಣಾಧಿಕಾರಿಯಾಗಿ, ಶಿಕ್ಷಣ ಸಂಯೋಜಕರು(9448750798) ಸಹಾಯಕ ಚುನಾವಣಾಧಿಕಾರಿಯಾಗಿ ನೇಮಕವಾಗಿದ್ದಾರೆ. ವಾರ್ಡ್ ಸಂ.11ರಿಂದ 23ರವರೆಗೆ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರನ್ನು ಚುನಾವಣಾಧಿಕಾರಿಯಾಗಿ, ತಾಲೂಕು ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕರನ್ನು ಸಹಾಯಕ ಚುನಾವಣಾಧಿಕಾರಿಯಾಗಿ ನೇಮಕ ಮಾಡಲಾಗಿದ್ದು, ಗುಂಡ್ಲುಪೇಟೆಯ ತಾಲೂಕು ಕಚೇರಿ ಸಭಾಭವನದಲ್ಲಿ (08229 -222129) ನಾಮಪತ್ರ ಸ್ವೀಕರಿಸುವರು.
ಯಳಂದೂರು ಪಪಂ: ವಾರ್ಡ್ ಸಂ. 1ರಿಂದ 11ರವರೆಗಿನ ಎಲ್ಲ ವಾರ್ಡ್‌ಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು(9480695110) ಚುನಾವಣಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಣ ಸಂಯೋಜಕರು (9448602813) ಸಹಾಯಕ ಚುನಾವಣಾಧಿಕಾರಿಯಾಗಿ ನೇಮಕಗೊಂಡಿದ್ದು, ಯಳಂದೂರು ತಾಲೂಕು ಕಚೇರಿ(08226- 240080)ಯಲ್ಲಿ ನಾಮಪತ್ರ ಸ್ವೀಕರಿಸಲಿದ್ದಾರೆ.
ಹನೂರು ಪಪಂ: ವಾರ್ಡ್ ಸಂ.1ರಿಂದ 13ರವರೆಗಿನ ಎಲ್ಲ ವಾರ್ಡ್‌ಗಳಿಗೆ ಹನೂರು ವಲಯ, ಕ್ಷೇತ್ರ ಶಿಕ್ಷಣಾಧಿಕಾರಿಗಳು(9480695108) ಚುನಾವಣಾಧಿಕಾರಿಯಾಗಿ, ಕ್ಷೇತ್ರ ಸಂಪನ್ಮೂಲ ಸ
ಮನ್ವಯಾಧಿಕಾರಿ, ಹನೂರು ವಲಯ(9480695113) ಸಹಾಯಕ ಚುನಾವಣಾಧಿಕಾರಿಯಾಗಿ ನೇಮಕವಾಗಿದ್ದು, ಹನೂರು ಪಪಂ ಕಚೇರಿಯಲ್ಲಿ ನಾಮಪತ್ರ ಸ್ವೀಕರಿಸುವರು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.