ನಾಗರಹೊಳೆ ಹಲವೆಡೆ ಮಳೆ
ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹಲವು ವಲಯಗಳಲ್ಲಿ ಭರ್ಜರಿ ಮಳೆಯಾಗಿದ್ದು, ವನ್ಯಜೀವಿಗಳಿಗೆ ಹಾಗೂ ಪ್ರಾಣಿಪ್ರಿಯರ ಮನಸ್ಸಿಗೆ ಸಂತಸ ಮೂಡಿಸಿದೆ.
ಒಂದು ಗಂಟೆಗೂ ಹೆಚ್ಚು ಕಾಲ ವೀರನಹೊಸಳ್ಳಿ, ಕಲ್ಲಳ್ಳ, ಮೇಟಿಕುಪ್ಪೆ, ಆನೆಚೌಕೂರು ವಲಯಗಳಲ್ಲಿ ಬಿದ್ದ ಮಳೆಯು ಅರಣ್ಯವನ್ನು ತಂಪಾಗಿಸಿದೆ. ಮತ್ತೊಂದೆಡೆ ಕೆರೆ-ಕಟ್ಟೆಗಳಿಗೆ ಅಲ್ಪಸ್ವಲ್ಪ ನೀರು ತುಂಬಿದೆ.
ಕಳೆದ ವರ್ಷ ಈ ಭಾಗದಲ್ಲಿ ಅತಿ ಕಡಿಮೆ ಪ್ರಮಾಣ ಮಳೆಯಾಗಿತ್ತು. ಆದ್ದರಿಂದ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳಿಗೆ ಆಹಾರ ಮತ್ತು ನೀರಿನ ತೀವ್ರ ಕೊರತೆ ಏರ್ಪಟ್ಟಿತ್ತು. ಅದೂ ಅಲ್ಲದೆ ಈ ಸಮಯ ಅರಣ್ಯಕ್ಕೆ ಬೆಂಕಿ ಬೀಳುವ ಸಮಯವಾಗಿದ್ದು, ಈಗ ಬಿದ್ದಿರುವ ವರ್ಷಧಾರೆಯಿಂದಾಗಿ ಬೆಂಕಿಯಿಂದ ಅರಣ್ಯ ಪಾರಾಗಿರುವುದು ನೆಮ್ಮದಿ ವಿಚಾರವಾಗಿದೆ. ಮತ್ತಷ್ಟು ಮಳೆ ಬಿದ್ದಲ್ಲಿ ಕೆರೆಕಟ್ಟೆಗಳು ತುಂಬಿ ವನ್ಯಜೀವಿಗಳ ನೀರಿನ ದಾಹ ಇಂಗಿಸಲು ಸಹಕಾರಿಯಾಗಲಿದೆ.
ಮೈಸೂರಲ್ಲಿ ಮಳೆ: ಮೈಸೂರಿನಲ್ಲಿ ಶುಕ್ರವಾರ ರಾತ್ರಿ ಜೋರು ಮಳೆ ಬಿದ್ದಿತು. ಮಧ್ಯಾಹ್ನ ನಗರದ ಕೆಲವೆಡೆ ತುಂತುರು ಮಳೆಯಾಗಿತ್ತು. ರಾತ್ರಿ 9ರ ಸುಮಾರಿಗೆ ಜೋರು ಮಳೆಯಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

