ಆಹಾರ ವಿಷವಾಗಿದೆ: ಕೃಷ್ಣ
ಚಾಮರಾಜನಗರ: ಇಂದು ಮಾನವನ ಆಹಾರ ಔಷಧವಾಗಿದೆ ಎಂದು ಕೃಷ್ಣ ಪ್ರಸಾದ್ ವಿಷಾದಿಸಿದರು.
ಅವರು ತಾಲೂಕಿನ ಹೊಂಡರಬಾಳು ಗ್ರಾಮದ ಅಮೃತಭೂಮಿಯಲ್ಲಿ 4 ದಿನಗಳ ರಾಷ್ಟ್ರ ಮಟ್ಟದ ರೈತ ಕಾರ್ಯಕರ್ತರ ಅಧ್ಯಯನ ಶಿಬಿರದಲ್ಲಿ ಮಾತನಾಡಿ, ಹಿಂದೆ ಸ್ಥಳೀಯವಾಗಿ ಉತ್ಪಾದನೆಯಾಗುತ್ತಿದ್ದ ತಳಿಗಳಿಂದ ಆಹಾರ ಬೆಳೆಗಳನ್ನು ಬೆಳೆಯುತ್ತಿದ್ದರು. ಈಗ ಕುಲಾಂತರಿ ಬೀಜಗಳ ಹಾವಳಿಯಿಂದಾಗಿ ಬೀಜಗಳ ಮೇಲೆ ಔಷಧದ ಪ್ರವೇಶವಾಗಿ ತಿನ್ನುವ ಆಹಾರವೇ ಔಷಧವಾಗಿದೆ. ಅಕ್ಕಡಿ ಪದ್ಧತಿಯಲ್ಲಿ ಬೇಸಾಯ ಮಾಡಿ ರಾಗಿ, ಜೋಳ, ತೊಗರಿ, ಅಲಸಂದೆ, ಅವರೆ, ಎಳ್ಳುಗಳನ್ನು ಒಂದೇ ಭೂಮಿಯಲ್ಲಿ ಏಕಕಾಲದಲ್ಲಿ ಬೆಳೆಯುತ್ತಿದ್ದರು. ಆಗ ಕಾಳುಗಳು ಮನುಷ್ಯನಿಗೆ ಆಹಾರವಾದರೆ ಕಡಿಗಳು ಜಾನುವಾರುಗಳ ಮೇವಾಗುತ್ತಿತ್ತು. ಆದರೆ ಆ ಪದ್ಧತಿ ನಶಿಸಿ ಹೋಗುತ್ತಿದೆ ಎಂದರು.
ಚುಕ್ಕಿ ನಂಜುಂಡಸ್ವಾಮಿ, ಚಾಮರಸ ಪಾಟೀಲ್, ರಾಕೇಶ್ ಟಿಕಾಯತ್, ಸೇರಿದಂತೆ ಹಲವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

