ಚಾಮರಾಜನಗರ

ಬಜೆಟ್‌ನಲ್ಲಿ ಸಾಲಮನ್ನಾ ಇಲ್ಲ: ಅಸಮಾಧಾನ

Published On :

ಚಾಮರಾಜನಗರ: ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಹಕಾರ ಸಂಘಗಳಿಂದ ಸಾಲ ಪಡೆದು ಸುಸ್ತಿದಾರರಾಗಿರುವ ರೈತರ ನೆರವಿಗೆ ಯಾವುದೇ ಯೋಜನೆ ಪ್ರಕಟ ಮಾಡದೆ ಬರಪೀಡಿತ ಜಿಲ್ಲೆಯ ರೈತರಿಗೆ ಅನ್ಯಾಯವೆಸಗಿದ್ದಾರೆ ಎಂದು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಾದಪ್ಪ ಉ. ಪಾಪಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಾದ್ಯಂತ ಸತತ ಎರಡು-ಮೂರು ವರ್ಷಗಳಿಂದ ಬರಗಾಲವಿದ್ದು, ವ್ಯವಸಾಯ ಮಾಡುವುದೇ ದುಸ್ತರವಾಗಿದೆ. ಜಾನುವಾರುಗಳಿಗೆ ಮೇವು, ನೀರು ಇಲ್ಲ. ಕೊಳವೆ ಬಾವಿಗಳಲ್ಲಿ ನೀರು ಬತ್ತಿದೆ. ಈ ಸ್ಥಿತಿಯಲ್ಲಿ ಈ ಭಾಗದ ರೈತರು ಸಹಕಾರ ಸಂಘಗಳ ಸಾಲ ಕಟ್ಟಲಾಗದೆ, ನೂತನ ಯೋಜನೆಯ ಪ್ರಯೋಜನವನ್ನೂ ಪಡೆದುಕೊಳ್ಳಲು ಸಾಧ್ಯವಾಗದೆ ತೀರ ಸಂಕಷ್ಟಕ್ಕೊಳಗಾಗಿದ್ದಾರೆ.
2008 ರಲ್ಲಿ ಶೇ.3ರ ಬಡ್ಡಿ ದರದಲ್ಲಿ ಸಾಲ ನೀಡಿದಾಗಲೂ ಈ ರೈತರಿಗೆ ಹಳೆ ಸಾಲ ಪಾವತಿ ಮಾಡಿ ನವೀಕರಿಸಿ ಹೊಸ ದರದಲ್ಲಿ ಸಾಲ ಪಡೆಯಲು ಸಾಧ್ಯವಾಗಲಿಲ್ಲ. ಮತ್ತು ಇದರಿಂದಾಗಿ ಸಹಕಾರ ಸಂಘಗಳು ಪ್ರಗತಿ ಸಾಧಿಸುವಲ್ಲಿ ಕಷ್ಟವಾಗುತ್ತಿದೆ. ಇದೆಲ್ಲವನ್ನು ಸಹ ಅಂಕಿ ಅಂಶಗಳ ಸಹಿತ ಮುಖ್ಯಮಂತ್ರಿಗಳಿಗೆ ಸಲ್ಲಿಸಿ ಮನವಿ ಮಾಡಿದ್ದೆವು. ಇದಕ್ಕೆ ಮುಖ್ಯಮಂತ್ರಿಗಳು ಭರವಸೆಯನ್ನು ಸಹ ನೀಡಿದ್ದರು.  ಹೀಗಾಗಿ ಜಿಲ್ಲೆಯ ರೈತರು ಪಿಕಾರ್ಡ್ ಬ್ಯಾಂಕುಗಳಿಂದ ಪಡೆದಿರುವ ಧೀರ್ಘಾವಧಿ ಸಾಲ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸಂಬಂಧಿಸಿದ ರೈತರ ಸಾಲಗಳನ್ನು 2013-14ರ ಬಜೆಟ್‌ನಲ್ಲಿ ಮನ್ನಾ ಮಾಡುತ್ತಾರೆ ಎಂಬ ವಿಶ್ವಾಸವಿತ್ತು. ಆದರೆ ಭರವಸೆಯಂತೆಯೇ ಮುಖ್ಯಮಂತ್ರಿಗಳು ಯಾವುದೇ ರೀತಿಯ ರಿಯಾಯಿತಿ ಘೋಷಣೆ ಮಾಡದೆ, ಈ ಭಾಗದ ರೈತರನ್ನು ಮತ್ತಷ್ಟು ಕಷ್ಟಕ್ಕೆ ಸಿಲುಕಿಸಿದ್ದಾರೆ. ಹೀಗಾಗಿ ಸಹಕಾರ ಖಾತೆ ಹೊಂದಿರುವ ಸಚಿವರು ಈ ಬಜೆಟ್ ಮೇಲಿನ ವಿಧಾನಸಭಾ ಕಲಾಪದಲ್ಲಿ ಚರ್ಚೆಗೆ ಬಂದಾಗ ಜೆಲ್ಲೆಯ ರೈತರು ಪಿಕಾರ್ಡ್ ಬ್ಯಾಂಕ್‌ಗಳಿಂದ ಪಡೆದಿರುವ ಧೀರ್ಘಾವಧಿ ಸಾಲಗಳನ್ನು ಮನ್ನಾ ಮಾಡುವ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸಿಎಂಗೆ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.