ಕುಡಿವ ನೀರಿನ ಸಮಸ್ಯೆ: ಪ್ರತಿಭಟನೆ
ಗುಂಡ್ಲುಪೇಟೆ: ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ 1, 2, 9 ಮತ್ತು 16ನೇ ವಾರ್ಡಿನ ನಿವಾಸಿಗಳು ಮಂಗಳವಾರ ಮತ್ತೆ ಪುರಸಭೆ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ನಿವಾಸಿಗಳು ಮಾತನಾಡಿ, ಕಳೆದ 20 ದಿನಗಳಿಂದ ನಮ್ಮ ವಾರ್ಡ್ಗಳಿಗೆ ಸಮರ್ಪಕ ನೀರು ಸರಬರಾಜಾಗುತ್ತಿಲ್ಲ. ಜನರಿಗೆ ನೀರು ಬಿಡುವುದರಲ್ಲೂ ರಾಜಕೀಯ ನಡೆಯುತ್ತಿದೆ. ತಮಗೆ ಬೇಕಾದ ವಾರ್ಡ್ ಗಳಿಗೆ ನೀರು ಬಿಡಲಾಗುತ್ತಿದೆ ಎಂದು ಆರೋಪಿಸಿದರು.
ಪುರಸಭಾ ಸದಸ್ಯ ಎಲ್.ಸುರೇಶ್ ಹಾಗೂ ಪಿ.ಗಿರೀಶ್ ಪುರಸಭಾ ಕಚೇರಿ ಆವರಣಕ್ಕೆ ತೆರಳಿ ಆ ವೇಳೆಗೆ ಬಂದ ಪುರಸಭೆ ಮುಖ್ಯಾಧಿಕಾರಿ ಕರಿಬಸವಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಅವರು ಮಾತನಾಡಿ, ನೀರು ಸರಬರಾಜಿನಲ್ಲಿ ವ್ಯತ್ಯಯವಾದರೆ ಸಂಬಂಧಪಟ್ಟ ವಾಟರ್ಮನ್ಗಳು ಹಾಗೂ ಎಂಜಿನಿಯರ್ರನ್ನು ನೇರ ಹೊಣೆ ಮಾಡಬೇಕು. ಈಗಾಗಲೇ ಬೇಸಿಗೆ ಆರಂಭವಾಗಿದ್ದು, ಕುಡಿಯುವ ನೀರಿಗೆ ಇನ್ನು ತತ್ವಾರ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರತಿದಿನ 3 ವಾರ್ಡ್ಗಳಂತೆ ನೀರು ಸರಬರಾಜು ಮಾಡಿದರೆ ವಾರದಲ್ಲಿ ಎಲ್ಲ ವಾರ್ಡಿಗೂ ನೀರು ಬಂದಾಗುತ್ತದೆ ಎಂದರು. ಮುಂದಿನ ದಿನಗಳಲ್ಲಿ ಸಮಸ್ಯೆ ಉಂಟಾದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಿವೃತ್ತ ಅರಣ್ಯಾಧಿಕಾರಿ ಸೂರ್ಯ ನಾರಾಯಣ, ಎ.ಜಿ.ಆರಾಧ್ಯ ಮಂಜು, ಕುಮಾರ್, ಭೋಗಯ್ಯನಹುಂಡಿ, ಬಇದ್ದರು.
ಗುಂಡ್ಲುಪೇಟೆ ಬಂದ್ ಎಚ್ಚರಿಕೆ
ಕುಡಿಯುವ ನೀರಿನ ಸಮಸ್ಯೆಯನ್ನು ಇನ್ನು ಮೂರು ದಿನಗಳಲ್ಲಿ ಬಗೆಹರಿಸದಿದ್ದಲ್ಲಿ ಗುಂಡ್ಲುಪೇಟೆ ಬಂದ್ಗೆ ಕರೆ ನೀಡುವುದಾಗಿ ಪುರಸಭೆ ಆಡಳಿತ ಪಕ್ಷದ ಸದಸ್ಯರಾದ ಮಾಜಿ ಅಧ್ಯಕ್ಷ ಎಲ್. ಸುರೇಶ್, ಬಿಜೆಪಿಯ ಪುರಸಭಾ ಸದಸ್ಯ ಪಿ.ಗಿರೀಶ್ ತಿಳಿಸಿದರು.
ವಾರ್ಡ್ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನೀರಿನ ಸಮಸ್ಯೆ ಆಗಾಧವಾಗಿದೆ. ವಾರದಲ್ಲಿ ಒಂದು ದಿನವೂ ಜನತೆಗೆ ನೀರು ಸಿಗುತ್ತಿಲ್ಲವಾದ ಕಾರಣ ಬಂದ್ ಮಾಡುವುದು ಅನಿವಾರ್ಯ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

