ನಾನು ಪಲಾಯನವಾದಿಯಲ್ಲ
ಗುಂಡ್ಲುಪೇಟೆ: ಪೊಳ್ಳು ಆಶ್ವಾಸನೆ ನೀಡಿ ಪರಾರಿಯಾಗಲು ನಾನೇನು ಪಲಾಯನವಾದಿಯಲ್ಲ. ಜನರ ಮಧ್ಯೆ ಇದ್ದು, ಮಾಡಿರುವ ಅಭಿವೃದ್ಧಿ ಕೆಲಸಗಳೇ ನನಗೆ ಶ್ರೀರಕ್ಷೆಯಾಗಲಿವೆ ಎಂದು ಶಾಸಕ ಎಚ್.ಎಸ್.ಮಹದೇವಪ್ರಸಾದ್ ಹೇಳಿದರು.
ಅವರು ತಾಲೂಕಿನ ಬೊಮ್ಮನಹಳ್ಳಿಯಲ್ಲಿ 18 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಪಶು ಚಿಕಿತ್ಸಾಲಯದ ನೂತನ ಕಟ್ಟಡ ಉದ್ಘಾಟನೆ ಹಾಗೂ 1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ನನ್ನ ಅಧಿಕಾರಾವಧಿಯಲ್ಲಿ ಕುಡಿಯುವ ನೀರು, ಶಿಕ್ಷಣ, ಆರೋಗ್ಯಕ್ಕೆ ಆದ್ಯತೆ ನೀಡಿದ್ದೇನೆ. ಕುಡಿಯವ ನೀರಿಗಾಗಿ ಸರ್ಕಾರ 1700 ಕೋಟಿ ಮೀಸಲಿಟ್ಟಿದೆ. ಇದರಲ್ಲಿ 400 ಕೋಟಿ ಖರ್ಚಾಗಿಲ್ಲ. ಸರ್ಕಾರದ ಸ್ಥಿತಿ ಡೋಲಾಯಮಾನವಾಗಿದ್ದು, ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲು ಸಚಿವರಿಗೆ ಆಹ್ವಾನ ನೀಡುತ್ತಿದ್ದೇನೆ. ಆದರೂ ಅವರು ಬರುತ್ತಿಲ್ಲ ಎಂದು ದೂರಿದರು.
ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ: ಇದೇ ಸಂದರ್ಭದಲ್ಲಿ ತೆರಕಣಾಂಬಿ ಜಿಪಂನಲ್ಲಿ ಅಂದಾಜು 3 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಯರಿಯೂರು ಗುಡಿ ಮನೆ ಸಂಪರ್ಕ ರಸ್ತೆಗೆ 46 ಲಕ್ಷ, ಕಡಬೂರು- ಬೊಮ್ಮನಹಳ್ಳಿ ರಸ್ತೆಗೆ 84 ಲಕ್ಷ, ಕುಂದಕೆರೆ ಗ್ರಾಮಕ್ಕೆ ಸುವರ್ಣ ಗ್ರಾಮೋದಯ ಯೋಜನೆಯಡಿ 50.30 ಲಕ್ಷ ವೆಚ್ಚದಲ್ಲಿ ರಸ್ತೆ, ಚರಂಡಿ, ಸಮುದಾಯ ಭವನ ನಿರ್ಮಾಣ, ಅಂಗನವಾಡಿ ಕಟ್ಟಡ, ತ್ಯಾಜ್ಯ ವಸ್ತು ವಿಲೇವಾರಿ, ಸೋಲಾರ್ ದೀಪ ಆಳವಡಿಕೆ, ಸೋಮನಪುರ ಗ್ರಾಮದಲ್ಲಿ ದಲಿತರ ಹಾಗೂ ಗಿರಿಜನರ ಬೀದಿಗೆ ಸಿಮೆಂಟ್ ಚರಂಡಿ ಹಾಗೂ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ಮಾಡಿದರಲ್ಲದೆ, ಉತ್ತೂರು ಗ್ರಾಮದ ಆದಿ ಕರ್ನಾಟಕ ಜನಾಂಗದವರಿಗಾಗಿ 7 ಲಕ್ಷಗಳಲ್ಲಿ ಬಾಬು ಜಗಜೀವನರಾಂ ಸಮುದಾಯ ಭವನದ ಕಾಮಗಾರಿಗೆ ಗುದ್ದಲಿಪೂಜೆ ಮಾಡಿದರು.
ಜಿಪಂ ಉಪಾಧ್ಯಕ್ಷ ಪಿ.ಮಹದೇವಪ್ಪ, ಗ್ರಾಪಂ ಅಧ್ಯಕ್ಷ ಶಿವಪ್ರಸಾದ್, ಸುಧಾಮಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಬಿ.ರಾಜಶೇಖರ್, ಮುಖಂಡರಾದ ದೇಪಾಪುರಸಿದ್ದಪ್ಪ, ಕುಂದಕೆರೆ ಶಾಂತಪ್ಪ, ಮಹದೇವಪ್ಪ, ವೈ.ಎನ್.ರಾಜಶೇಖರ್, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ.ಸಿ.ಮಧು, ಕೊಡಸೋಗೆ ಚಂದ್ರು, ಬೊಮ್ಮಯ್ಯ, ನಾಗಮಲ್ಲಪ್ಪ, ಕುಂದಕೆರೆ ರಾಜಪ್ಪ, ಜಿ.ಕೆ.ಲೋಕೇಶ್, ಗಣೇಶ್, ಹಾಲಹಳ್ಳಿ ಬಸವರಾಜು, ಕೆಆರ್ಡಿಎಲ್ ಎಇಇ ರವಿಶಂಕರ್, ಲೋಕೋಪಯೋಗಿ ಇಲಾಖೆಯ ಎಇಇ ಚಂದ್ರಶೇಖರ್, ಎಂಜಿನಿಯರ್ ಪ್ರಸನ್ನ, ಲಿಂಗರಾಜು, ಪ್ರಥಮ ದರ್ಜೆ ಗುತ್ತಿಗೆದಾರ ಟಿ.ಪಿ.ನಾಗರಾಜು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

