ಚಾಮರಾಜನಗರ

ಪ್ರಾವೀಣ್ಯತೆಯಿಂದ ಉನ್ನತ ಸ್ಥಾನ

Published On :

ಚಾಮರಾಜನಗರ: ಯಾವುದೇ ವಿಷಯದಲ್ಲಿ ಪ್ರಾವೀಣ್ಯತೆ ಪಡೆದಾಗ ಉನ್ನತ ಹುದ್ದೆಗೇರಿ ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಬಹುದು ಎಂದು ಜಿಪಂ ಸಿಇಒ ಎಂ.ಆರ್.ಸೋಮಶೇಖರಪ್ಪ ಹೇಳಿದರು.
ಅವರು ನಗರದ ಜೆಎಸ್‌ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಜೆಎಸ್‌ಎಸ್ ನರ್ಸಿಂಗ್ ಶಾಲೆಯ 9ನೇ ಬ್ಯಾಚ್ ವಿದ್ಯಾರ್ಥಿಗಳ ಪ್ರತಿಜ್ಞಾ ವಿಧಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ವೈದ್ಯರು ಹಾಗೂ ದಾದಿಯರ ಸೇವೆ ಒಂದೇ ನಾಣ್ಯದ 2 ಮುಖಗಳು. ದಾದಿಯರ ವೃತ್ತಿಯಲ್ಲಿ ಮಾತ್ರ ಪ್ರತಿಜ್ಞಾವಿಧಿ ಬೋಧಿಸಲಾಗುತ್ತಿದ್ದು, ಬೇರೆ ಯಾವ ಶಿಕ್ಷಣದಲ್ಲೂ ಇಂಥ ಶ್ರದ್ಧೆ ಕಂಡು ಬರುವುದಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿರುವ ಜೆಎಸ್‌ಎಸ್ ಮಹಾವಿದ್ಯಾಪೀಠ 40 ವರ್ಷಗಳ ಹಿಂದೆಯೇ ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆ ತೆರೆದು ಈ ಭಾಗದ ವಿದ್ಯಾರ್ಥಿಗಳಿಗೆ ಆಶಾ ಜ್ಯೋತಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜೆಎಸ್‌ಎಸ್ ಮಹಾವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ವಿಭಾಗದ ಪ್ರಭಾರ ನಿರ್ದೇಶಕ ಆರ್.ಮಹೇಶ್ ಮಾತನಾಡಿ, ನರ್ಸಿಂಗ್ ಉತ್ತಮ ಕೋರ್ಸ್ ಆಗಿದ್ದು, ಈ ಕೋರ್ಸ್ ಮಾಡಿದ ಪ್ರತಿಯೊಬ್ಬರೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಪ್ರಶಂಸಿಸಿದರು.
ಮೊದಲು ಮೆಡಿಕಲ್ ಕಾಲೇಜು ಹಾಗೂ ಫಾರ್ಮಸಿ ಕಾಲೇಜು ಬಿಟ್ಟರೆ ಎಲ್ಲೂ ಸಂಶೋಧನೆ ಮಾಡಲು ಅವಕಾಶವಿರಲಿಲ್ಲ. ಈಗ ನರ್ಸಿಂಗ್ ಕೋರ್ಸಿನಲ್ಲೂ ಸಂಶೋಧನೆ ಮಾಡುವ ಅವಕಾಶಗಳಿವೆ. 3 ವರ್ಷದ ಕಲಿಕಾ ಅವಧಿಯಲ್ಲಿ ಮದರ್ ತೆರೇಸಾ, ಫ್ಲಾರೆನ್ಸ್ ನೈಟಿಂಗೇಲ್ ಅವರಂತೆ ಸೇವಾಗುಣ ಬೆಳೆಸಿಕೊಳ್ಳಬೇಕು ಎಂದರು.
ಪ್ರಾಂಶುಪಾಲರಾದ ಜ್ಯೋತಿ ಅಮ್ಮಾಳ್ ಲೋಗನಾಥನ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಸಮಾರಂಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಬಿ.ಮಲ್ಲಿಕಾ ಮಾತನಾಡಿದರು. ಜಿಲ್ಲಾಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಪಿ.ಜಿ.ಪದ್ಮಾವತಿ, ಉಪ ಪ್ರಾಂಶುಪಾಲರಾದ ಶೆರೆಂಜ್ ಕಾಂಜೊಮ್, ಉಪನ್ಯಾಸಕಿಯರು, ವಿದ್ಯಾರ್ಥಿಗಳು, ಪೋಷಕರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.