ಬಿಜಾಪುರ

ಸೃಜನಶೀಲ ಚಿತ್ರಕಲೆ ರಚಿಸಿ: ಸಲಹೆ

Published On :

ಬಿಜಾಪುರ: ಕಲಾವಿದರು ಸತತ ಪರಿಶ್ರಮದಿಂದ ಸೃಜನಶೀಲ ಹಾಗೂ ಕಲಾತ್ಮಕ ಚಿತ್ರಕಲೆಯನ್ನು ರಚಿಸಲು ಮುಂದಾಗಬೇಕು ಎಂದು ಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ವಿ.ಡಿ. ಐಹೊಳ್ಳಿ ಅವರು ಹೇಳಿದರು.
ನಗರದ ಬಿಎಲ್‌ಡಿಇ ಸಂಸ್ಥೆಯ ಸಿದ್ಧೇಶ್ವರ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ನೇತಾಜಿ ಸುಭಾಷಚಂದ್ರ ಬೋಸ್ ಅವರ ಜನ್ಮ ದಿನಾಚರಣೆ ಅಂಗವಾಗಿ ಹೈಸ್ಕೂಲ್ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಚಿತ್ರಕಲೆ ಎಲ್ಲ ವಿಷಯಗಳಿಗೆ ತಾಯಿ ಬೇರು ಇದ್ದಂತೆ. ಇಂದು ಪದವಿ, ಸ್ನಾತಕೋತ್ತರ, ಪಿಎಚ್‌ಡಿ ವರೆಗೊ ಚಿತ್ರಕಲೆಯನ್ನು ಅಭ್ಯಾಸ ಮಾಡಬಹುದಾಗಿದೆ ಎಂದರು.ಪಿ.ಎಸ್. ಕಡೇಮನಿ, ಕೆ.ಎಸ್. ಬಿರಾದಾರ, ಎಸ್.ಎಚ್. ಲಗಳಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸ್ಪರ್ಧೆಯಲ್ಲಿ ವಿಜೇತರಾದ  ರೇಖಾ ರಾಠೋಡ (ಪ್ರಥಮ), ಋತ್ವಿಕ ನಿವರಗಿ (ದ್ವಿತೀಯ), ವರ್ಣಿತಾ ಬಜಂತ್ರಿ (ತೃತೀಯ) ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಜಿ.ಎಸ್. ಭೂಸಗೊಂಡ, ಡಾ. ಶಶಿಕಲಾ ಹೂಗಾರ, ಎನ್.ಆರ್. ಪತ್ತಾರ, ಗಿರಿಜಾ ಬಿರಾದಾರ, ಪಿ.ಬಿ. ಖ್ಯಾಡದ, ಎಂ.ಎಂ. ಕನ್ನೂರ, ವಿ.ವಿ. ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.