ನುಡಿತೇರು ವಾಹನ ಸಂಚಾರಕ್ಕೆ ಚಾಲನೆ
ಬಿಜಾಪುರ: ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಶನಿವಾರ ಜರುಗಿದ 64ನೇ ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಬಿಜಾಪುರದಲ್ಲಿ ಫೆ. 9,10 ಹಾಗೂ 11ರಂದು ನಡೆಯಲಿರುವ ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಜಿಲ್ಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ತಯಾರಿಸಿದ ನುಡಿತೇರು ವಾಹನ ಸಂಚಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ನುಡಿತೇರು ಜಿಲ್ಲೆಯ ಎಲ್ಲ ತಾಲೂಕುಗಳಿಗೂ ಹಾಗೂ ಗ್ರಾಮೀಣ ಭಾಗದಲ್ಲಿ ಜನವರಿ 26ರಿಂದ 30ರ ವರೆಗೆ ಸಂಚರಿಸಿ ಸಮ್ಮೇಳನ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಿದೆ. ಸಮ್ಮೇಳನದ ಯಶಸ್ಸಿಗೆ ಎಲ್ಲರೂ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಬೇಕು ಎಂದರು.
ಕನ್ನಡ ನುಡಿತೇರಿಗೆ ಸ್ವಾಗತ ನೀಡುವುದರೊಂದಿಗೆ ಕನ್ನಡ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಸಮ್ಮೇಳನದ ಉತ್ಸಾಹ ತುಂಬಬೇಕು. ಆಯಾ ತಾಲೂಕಿನ ತಹಸೀಲ್ದಾರರು ನುಡಿತೇರು ವಾಹನ ಸಂಚಾರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು. ಈ ಸಂದರ್ಭದಲ್ಲಿ ಸಂಸದ ರಮೇಶ ಜಿಗಜಿಣಗಿ, ಶಾಸಕ ಅಪ್ಪಾಸಾಹೇಬ ಪಟ್ಟಣಶಟ್ಟಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕಾವ್ಯಾ ದೇಸಾಯಿ, ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ, ಜಿಲ್ಲಾಧಿಕಾರಿ ಶಿವಯೋಗಿ ಕಳಸದ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಗುತ್ತಿ ಜಂಬುನಾಥ್, ಅಪರ ಜಿಲ್ಲಾಧಿಕಾರಿ ಜೆ. ಸಿದ್ದಪ್ಪ, ಉಪ ವಿಭಾಗಾಧಿಕಾರಿ ಡಾ. ಎಚ್. ಬಿ ಬೂದೆಪ್ಪ, ನಗರಸಭೆ ಅಧ್ಯಕ್ಷ ಪರಶುರಾಮ ರಜಪೂತ, ಬಿಡಿಎ ಅಧ್ಯಕ್ಷ ಭೀಮಾಶಂಕರ ಹದನೂರ, ಕಸಾಪ ಅಧ್ಯಕ್ಷ ಹಾಗೂ ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಯಂಡಿಗೇರಿ, ಎಸ್ಪಿ ಅಜಯ ಹಿಲೋರಿ, ಭಾರತೀಯ ಮೀಸಲು ಪಡೆಯ ಕಮಾಡೆಂಟ್ ಕೆ.ಎಂ ಗಂಗಾಧರಪ್ಪ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಗಂಗೂಬಾಯಿ ಮಾನಕರ, ತಹಸೀಲ್ದಾರ ರಾಜಶ್ರೀ ಜೈನಾಪೂರ, ಡಿಡಿಪಿಐ ಬಿ.ಎನ್. ಹಕೀಂ. ದೈಹಿಕ ಶಿಕ್ಷಣಾಧಿಕಾರಿ ಟಿ.ಎಚ್ ಮೇಲಿನಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಸೋಮಶೇಖರ ವಾಲಿ, ಕಸಾಪ ಜಿಲ್ಲಾ ಗೌರವ ಕೋಶಾಧ್ಯಕ್ಷ ಎಸ್.ಎಸ್. ಖಾದ್ರಿ ಇನಾಮದಾರ, ಜಿಲ್ಲಾ ಗೌರವ ಕಾರ್ಯದರ್ಶಿ ರಂಗನಾಥ ಅಕ್ಕಲಕೋಟ, ಜಿಲ್ಲಾ ಗೌರವ ಸಹ ಕಾರ್ಯದರ್ಶಿ ಮಹಾಂತೇಶ ಸಾಲಿಮಠ, ಸಾಯಬಣ್ಣ ಮಡಿವಾಳರ, ಚನ್ನವೀರ ಝಳಕಿ, ಮಲ್ಲಿಕಾರ್ಜುನ ಭೃಂಗಿಮಠ, ಬಂಡೆಪ್ಪ ತೇಲಿ ಮುಂತಾದವರು ಉಪಸ್ಥಿತರಿದ್ದರು.
ಬಸವನಬಾಗೇವಾಡಿಯಲ್ಲಿ ಪೂರ್ವ ಭಾವಿ ಸಭೆ: ಬಿಜಾಪುರದಲ್ಲಿ ನಡೆಯುವ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕಾಗಿ ಆಗಮಿಸುವ ಕನ್ನಡ ನುಡಿತೇರು ಸ್ವಾಗತಿಸಿಸುವ ಸಲುವಾಗಿ ಶುಕ್ರವಾರ ಇಲ್ಲಿನ ತಹಸೀಲ್ದಾರ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಡಿಎಸ್ಎಸ್ ಮುಖಂಡ ಸುರೇಶ ಮಣ್ಣೂರ, ಬಸವ ಸೈನ್ಯ ಸಂಸ್ಥಾಪಕ ಶಂಕರಗೌಡ ಬಿರಾದಾರ ಇತರರು ಮಾತನಾಡಿ, ಸಾಹಿತ್ಯ ಸಮ್ಮೇಳನದಲ್ಲಿ ಬಸವನಬಾಗೇವಾಡಿ ತಾಲೂಕನ್ನು ಜಿಲ್ಲಾ ಕಸಾಪ ಅಧ್ಯಕ್ಷರು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ನಮ್ಮ ತಾಲೂಕಿನಲ್ಲಿ ಅನೇಕ ಸಂಘಟನೆಗಳಿದ್ದು, ಅವುಗಳ ಪದಾಧಿಕಾರಿಗಳನ್ನು ಸಮ್ಮೇಳನದಲ್ಲಿ ತೊಡಗಿಸಿಕೊಳ್ಳಬೇಕಾಗಿತ್ತು ಎಂದರು.
ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಇದನ್ನೆಲ್ಲ ಮರೆತು ಪಕ್ಷಾತೀತವಾಗಿ ಎಲ್ಲ ಸಂಘಟನೆಗಳು ಕನ್ನಡ ನುಡಿ ತೇರನ್ನು ನಮ್ಮ ತಾಲೂಕಿಗೆ ಬರಮಾಡಿಕೊಳ್ಳಬೇಕು ಎಂದರು. ಶಿವನಗೌಡ ಬಿರಾದಾರ, ಪುರಸಭೆ ಅಧ್ಯಕ್ಷ ಜಗದೀಶ ಕೊಟ್ರಶೆಟ್ಟಿ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಶಿವಾನಂದ ಕಲ್ಲೂರ, ತಹಸೀಲ್ದಾರ ಎಂ.ಬಿ. ನಾಗಠಾಣ, ತಾಲೂಕು ಕಸಾಪ ಅಧ್ಯಕ್ಷ ನಿಂಗಪ್ಪ ಬೊಮ್ಮನಹಳ್ಳಿ ಇತರರು ಮಾತನಾಡಿ ಸಮ್ಮೇಳನ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ ಎಂದರು.
ಪಟ್ಟಣದಲ್ಲಿ ಬರುವ ಕನ್ನಡ ನುಡಿತೇರಿನ ಮೆರವಣಿಗೆಯಲ್ಲಿ ಪಟ್ಟಣದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು, ಇಲಾಖೆಯ ಅಧಿಕಾರಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸುವಂತೆ ಮನವಿ ಮಾಡಲಾಯಿತು.
ಸಭೆಯಲ್ಲಿ ಧುರೀಣರಾದ ಸಂಗಮೇಶ ಓಲೇಕಾರ, ಕಲ್ಲು ಸೊನ್ನದ, ಅರವಿಂದ ಸಾಲವಾಡಗಿ, ರಾಜು ಫಿರಂಗಿ, ಮಹಾಂತೇಶ ಸಾಸಾಬಳ, ಶ್ರೀಕಾಂತ ಪಡಶೆಟ್ಟಿ, ಬಿಇಓ ಎನ್.ಹೆಚ್. ನಾಗೂರ, ಮುಖ್ಯಾಧಿಕಾರಿ ಅರವಿಂದ ಜಮಖಂಡಿ, ಸಿಪಿಐ ಸುನೀಲ ನಾಯಕ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

