ಸಚಿವ ಶಿಂಧೆ ಹೇಳಿಕೆ ಖಂಡಿಸಿ ಪ್ರತಿಭಟನೆ
ಬಿಜಾಪುರ: ಬಿಜೆಪಿ ಹಾಗೂ ಆರ್ಎಸ್ಎಸ್ ವಿರುದ್ಧ ಹೇಳಿಕೆ ನೀಡಿರುವ ಸುಶೀಲಕುಮಾರ ಶಿಂಧೆ ಅವರ ವರ್ತನೆ ಖಂಡಿಸಿ ಗುರುವಾರ ನಗರದಲ್ಲಿ ಬಿಜೆಪಿ ಹಾಗೂ ಆರ್ಎಸ್ಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಸಿದ್ದೇಶ್ವರ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಹೊರಟ ಕಾರ್ಯಕರ್ತರು ಗಾಂಧಿ ಚೌಕ್ಗೆ ತೆರಳಿ ಕೆಲಕಾಲ ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಹಾಗೂ ಆರ್ಎಸ್ಎಸ್ ಕಾರ್ಯಕರ್ತರು ಕೇಂದ್ರ ಗೃಹ ಖಾತೆ ಸಚಿವ ಶಿಂಧೆ ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ ಕವಟಗಿ ಅವರು ಮಾತನಾಡಿ, ಸಚಿವ ಸುಶೀಲಕುಮಾರ ಶಿಂಧೆ ಅವರನ್ನು ಸಂಪುಟದಿಂದ ವಜಾ ಮಾಡಬೇಕು. ಪ್ರಧಾನಿ ಮನಮೋಹನ ಸಿಂಗ್ ಮತ್ತು ಸೋನಿಯಾಗಾಂಧಿ ಅವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಆಗ್ರಹಿಸುತ್ತದೆ ಎಂದರು.
ಶಿಂಧೆ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡದಿದ್ದರೆ ರಾಷ್ಟ್ರದಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಈರಣ್ಣ ಪಟ್ಟಣಶೆಟ್ಟಿ, ಪ್ರಕಾಶ ಅಕ್ಕಲಕೋಟ, ಹನಮಂತ ಬಿರಾದಾರ, ಚಿದಾನಂದ ಚಲವಾದಿ, ಶ್ರೀಶೈಲಗೌಡ ಬಿರಾದಾರ, ಬಸವರಾಜ ಹಳ್ಳಿ, ಸಂಗನಗೌಡ ಪಾಟೀಲ, ಪ್ರವೀಣ ಹೌದೆ, ಗೋಪಿನಾಥ ಕಾರಜೋಳ, ನಾಗರಾಜ ಮಾಯಾವಂಶಿ, ಅನುರಾಧಾ ಕಲಾಲ, ಶಿವಾಜಿ ಪಾಟೀಲ, ಸಂಗಮೇಶ ಉಕ್ಕಲಿ, ರಾಜಶೇಖರ ಪೂಜಾರಿ, ಸಿದ್ದು ಪಾಟೀಲ (ಜಾಲವಾದ), ಸಂಗನಗೌಡ ರಾಯಗೊಂಡ, ಶಂಕರಗೌಡ ಪಾಟೀಲ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇಂಡಿಯಲ್ಲಿ: ಬಿಜೆಪಿ ಹಾಗೂ ಆರ್ಎಸ್ಎಸ್ ಸಂಘಟನೆಗಳು ಉಗ್ರರ ತರಬೇತಿ ಶಿಬಿರಗಳನ್ನು ನಡೆಸುತ್ತಾ ಹಿಂದೂ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಿವೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿ, ದೇಶದ ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವ ಕೇಂದ್ರ ಗೃಹ ಸಚಿವ ಸುಶೀಲಕುಮಾರ ಶಿಂಧೆ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಸಚಿವ ಶಿಂಧೆ ಅವರ ಪ್ರತಿಕೃತಿ ದಹನ ಮಾಡಿದರು.
ಪ್ರತಿಭಟನಾ ಮನವಿಯನ್ನು ತಹಸೀಲ್ದಾರ ಡಾ. ಸಿದ್ದು ಹುಲ್ಲೊಳಿ ಅವರಿಗೆ ಸಲ್ಲಿಸಿದರು. ಎಪಿಎಂಸಿ ಅಧ್ಯಕ್ಷ ಪ್ರಭಾಕರ ಬಗಲಿ, ಪುರಸಭೆ ಅಧ್ಯಕ್ಷ ದೇವೇಂದ್ರ ಕುಂಬಾರ, ಮಲ್ಲಯ್ಯ ಪತ್ರಿಮಠ, ಅದೃಶ್ಯಪ್ಪ ವಾಲಿ, ಶಿವಾನಂದ ಕುಂಬಾರ, ಬುದ್ದುಗೌಡ ಪಾಟೀಲ, ಮಲ್ಲಿಕಾರ್ಜುನ ಕಿವುಡೆ, ಹುಚ್ಚಪ್ಪ ತಳವಾರ, ರಾಮಸಿಂಗ ಕನ್ನೊಳ್ಳಿ, ಶಾಂತು ಶಿರಕನಳ್ಳಿ, ಲಕ್ಷ್ಮಣ ಲಾಳಸಂಗಿ, ಬಾಳು ಮುಳಜಿ, ಸಂಜು ಮಲ್ಲಾಡಿ, ಭೀಮಸಿಂಗ ರಾಠೋಡ ಇದ್ದರು.
ತಾಳಿಕೋಟೆಯಲ್ಲಿ: ಬಿಜೆಪಿ, ಆರ್ಎಸ್ಎಸ್ ಸಂಘಟನೆ ಹಿಂದೂ ಉಗ್ರರನ್ನು ತಯಾರಿಸುವ ಕಾರ್ಖಾನೆ ಎಂದು ಕೇಂದ್ರ ಗೃಹ ಸಚಿವ ಸುಶೀಲಕುಮಾರ್ ಶಿಂಧೆ ಹೇಳಿರುವುದನ್ನು ಖಂಡಿಸಿ ಪಟ್ಟಣದ ಬಜರಂಗದಳ ಕಾರ್ಯಕರ್ತರು ಗುರುವಾರ ಸಚಿವ ಶಿಂಧೆ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.
ಆರ್ಎಸ್ಎಸ್ ಮುಖಂಡ ಪ್ರದೀಪ ದೇಶಪಾಂಡೆ ಮಾತನಾಡಿ, ಶಿಂಧೆ ಅವರು ಜವಾಬ್ದಾರಿ ಅರಿತು ಮಾತನಾಡಬೇಕೇ ವಿನಃ ಈ ರೀತಿ ಹಗುರ ಹೇಳಿಕೆ ನೀಡುವುದು ಸರಿಯಲ್ಲ ಎಂದು ಹೇಳಿದರು.
ಮನವಿಯನ್ನು ವಿಶೇಷ ತಹಸೀಲ್ದಾರ ಭಾಗವಾನ ಅವರಿಗೆ ಸಲ್ಲಿಸಿದರು. ಕಾಶಿನಾಥ ಅರಳಿಚಂಡಿ, ಪ್ರಮೋದ ಅಗರವಾಲ, ಆರ್.ಎಸ್. ಮಠ, ಬಸವರಾಜ ಹೊಸಹಳ್ಳಿ, ಗುರುರಾಜ ಕಲಾಲ, ಪವನ ಹಂಚಾಟೆ, ವಿಜಯ ದೇವಿ, ಶ್ಯಾಮ ಹಂಚಾಟೆ, ಸಂತೋಷ ಯಾಳಗಿ, ಸಚೀನ ಹಂಚಾಟೆ, ಸಾಗರ ಝಿಂಗಾಡೆ, ಪರಶುರಾಮ ಕಟ್ಟಿಮನಿ, ಅನಿಲಕಪೂರ ಹಜೇರಿ ಸೇರಿದಂತೆ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

