ಜಾಗತೀಕರಣ ಭರಾಟೆಯಲ್ಲಿ ಬದುಕು ನಶ್ವರ
ಬೀದರ್: ಜಾಗತೀಕರಣ ಭರಾಟೆಯಲ್ಲಿ ಮಾನವನ ಬದುಕು ಅಶಾಂತಿ, ಅಸಮಾಧಾನ, ಅತೃಪ್ತಿಯಿಂದ ಕೂಡಿದೆ ಎಂದು ಹಿರೇಮಠ ಸಂಸ್ಥಾನ ಭಾಲ್ಕಿಯ ಉತ್ತರಾಧಿಕಾರಿ ಗುರುಬಸವ ದೇವರು ನುಡಿದರು.
ನಗರದ ಡಾ. ಚನ್ನಬಸವ ಪಟ್ಟದೇವರ ಪ್ರಸಾದ ನಿಲಯದಲ್ಲಿ ಶ್ರಾವಣ ಮಾಸದ ನಿಮಿತ್ತ ಷಟಸ್ಥಲ ದರ್ಶನ ಪ್ರವಚನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮನುಷ್ಯನ ಬದುಕು ನೆಮ್ಮದಿಯಿಂದ ಕೂಡಿರಬೇಕೆಂದರೆ ಶರಣರ, ಸಂತರ, ಮಹಂತರ ವಾಣಿ ಆಲಿಸಿ ಬದುಕು ಸುಂದರಗೊಳಿಸಬೇಕೆಂದರು.
ಜೀವನ ಪರಿವರ್ತನೆ: ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಯುವ ಮುಖಂಡ ಭೀಮ ಹಂಗರಗೆ, ಬಸವಾದಿ ಶರಣರು ಉಪದೇಶಿಸಿದ ತತ್ವಗಳು ಇಂದಿನ ಯುವ ಜನಾಂಗ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಜೀವನ ಸಾಗಿಸುವಂತೆ ಕಿವಿಮಾತು ಹೇಳಿದರು. ಶರಣರ ಕಾಯಕ ದಾಸೋಹ ತತ್ವಗಳು ಮಾನವನ ಜೀವನ ಸಂಪೂರ್ಣ ಪರಿವರ್ತನೆ ಮಾಡುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಗದಗದ ನಿರಂಜನ ಮಹಾಸ್ವಾಮಿ ಪ್ರವಚನ ನೀಡಿ, ಬಸವಣ್ಣನವರು ಸತ್ಯದಿಂದ ಆಧ್ಯಾತ್ಮಿಕ ಬೆಳಕನ್ನು ಕಂಡಿದ್ದಾರೆ. ಆಧ್ಯಾತ್ಮಿಕತೆಯ ಸಾಕ್ಷಾತ್ಕಾರ ಪಡೆದುಕೊಳ್ಳಬೇಕಾದರೆ ಅವರಲ್ಲಿ ತಾಳ್ಮೆ, ಸಹನೆ, ದಯೆ ಎಂಬ ಮೌಲ್ಯಗಳು ಅಡಗಿರಬೇಕು ಎಂದರು. ಬಸವಾದಿ ಶರಣರು ಜ್ಞಾನದ ಹಸಿವೆಯಿಂದ ಆಧ್ಯಾತ್ಮಿಕ ಮಹಾಶಕ್ತಿಯನ್ನು ಜಗತ್ತಿಗೆ ಬಿಂಬಿಸಿದ್ದಾರೆ ಎಂದು ತಿಳಿಸಿದರು.
ಜಯರಾಜ ಖಂಡ್ರೆ, ವಿಜಯಲಕ್ಷ್ಮಿ ಕೌಟಗೆ ಮಾತನಾಡಿದರು, ಪ್ರೊ. ಎಸ್.ಬಿ. ಬಿರಾದಾರ್, ಉಮಾಕಾಂತ ಮೀಸೆ, ಶಿವಕುಮಾರ ಭಾಲ್ಕೆ, ಸಂತೋಷಕುಮಾರ ಮಂಗಳೂರೆ, ಮಲ್ಲಿಕಾರ್ಜುನ ಹುಡಗೆ, ಶ್ರೀಕಾಂತ ಬಿರಾದಾರ್, ರಾಮಶೆಟ್ಟಿ ಮಾಳಗೆ, ಜಯಶ್ರೀ ಗಡ್ಡೆ, ಗಂಗಶೆಟ್ಟಿ ಖಾನಾಪೂರ, ಸಂಜೀವಕುಮಾರ ಅತಿವಾಳೆ, ಸಂಗಯ್ಯಾ ಸ್ವಾಮಿ, ಶಾಮರಾವ್ ನೆಲವಾಡ ಸೇರಿದಂತೆ ಇನ್ನಿತರ ಬಸವ ಭಕ್ತರು ಪ್ರವಚನ ಕಾರ್ಯಕ್ರಮದಲ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

