ಬೀದರ್

ಶ್ರಾವಣ ಮಾಸಕ್ಕೆ ಚಾಲನೆ

Published On :

ಬೀದರ್: ನಗರದ ಡಾ. ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಪ್ರಸಕ್ತ ಸಾಲಿನ ಶ್ರಾವಣ ಮಾಸದ ನಿಮಿತ್ತ ಷಟಸ್ಥಲ ದರ್ಶನ ಪ್ರವಚನದ ಉದ್ಘಾಟನಾ ಸಮಾರಂಭ ಜು.28ರಂದು ಸಂಜೆ ಹಮ್ಮಿಕೊಳ್ಳಲಾಗಿದೆ. ಸಂಜೆ 6.30ಕ್ಕೆ ಜರುಗಲಿರುವ ಸಮಾರಂಭದ ಸಾನ್ನಿಧ್ಯವನ್ನು ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದ್ದೇವರು ವಹಿಸುವರು. ಗದಗಿನ ತೋಂಟದಾರ್ಯ ಸಂಸ್ಥಾನ ಮಠದ ನಿರಂಜನ ಮಹಾಸ್ವಾಮಿಗಳು ಪ್ರವಚನ ನೀಡುವರು. ಗುರುಬಸವ ದೇವರು ನೇತೃತ್ವ ವಹಿಸುವರು. ಲಿಂಗರಾಜಪ್ಪ ಅಪ್ಪ ಎಂಜಿನಿಯರಿಂಗ್ ಕಾಲೇಜಿನ ಕಾರ್ಯದರ್ಶಿಗಳಾದ ಬಸವರಾಜ ದೇಶಮುಖ ಉದ್ಘಾಟಿಸುವರು. ಪ್ರಸಾದ ನಿಲಯದ ಪ್ರೊ. ಎಸ್.ಬಿ. ಬಿರಾದಾರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಉದ್ಯಮಿ ಜಯರಾಜ ಖಂಡ್ರೆ, ಸಾಹಿತಿ ವಿಜಯಲಕ್ಷ್ಮೀ ಕೌಟಗೆ ಮತ್ತಿತರರು ಪಾಲ್ಗೊಳ್ಳುವರು.
ಪ್ರಾರ್ಥನೆಯಿಂದ ಆತ್ಮಶುದ್ಧಿ
ಹುಮನಾಬಾದ್: ದೇವರ ಪ್ರಾರ್ಥನೆ, ದೀರ್ಘ ಉಪವಾಸ, ಶಾಂತಿ ನೆಮ್ಮದಿ ನೀಡುತ್ತದೆ. ಇದನ್ನು ಎಲ್ಲರನ್ನು ಅನುಸರಿಕೊಳ್ಳಬೇಕೆಂದು ಸೈಯದ್ ಬಾಬಾ ಬುಖಾರಿ ತಿಳಿಸಿದರು. ತಾಲೂಕಿನ ಚಿಟಗುಪ್ಪ ಪಟ್ಟಣದ ಪುರಸಭೆ ಆವರಣದಲ್ಲಿ ಪುರಸಭೆ ಸದಸ್ಯರು ರಂಜಾನ್ ಅಂಗವಾಗಿ ಏರ್ಪಡಿಸಿದ್ದ ಇಫ್ತಾರ್ಕೂಟದಲ್ಲಿ ಮಾತನಾಡಿ, ದೇವರ ಪ್ರಾರ್ಥನೆ ಮಾಡಿದಲ್ಲಿ ಆತ್ಮಶುದ್ಧಿಯಾಗುತ್ತದೆ, ಮನಸ್ಸಿಗೆ ಶಾಂತಿ ಲಭಿಸುತ್ತದೆ ಎಂದರು. ಪುರಸಭೆ ಅಧ್ಯಕ್ಷೆ ರಾಜಶ್ರೀ ಹೊಸದೊಡ್ಡಿ, ಉಪಾಧ್ಯಕ್ಷೆ ರೇಷ್ಮಾ ಖುತಬೋದ್ದಿನ್, ಸದಸ್ಯರಾದ ಮಲ್ಲಿಕಾರ್ಜುನ ಪಾಟೀಲ್, ಭೀಮಣ್ಣಾ ಶಾಖಾ, ಗೊವಿಂದರಾವ್ ಬೋರಾಳೆ, ಮುಜಾಫರ ಪಟೇಲ್, ಮಹಮ್ಮದ ಲೈಕ್, ಅಹ್ಮದ್ ಪಾಶಾ, ರಾಜಕುಮಾರ ಗುತ್ತೆದಾರ, ಕ್ರಿಸ್ಥಾನಂದ, ಮನೋಜಕುಮಾರ ಮತ್ತಿತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.