ಬೀದರ್

ಅತ್ಯಾಚಾರ ಪ್ರಕರಣ: ಆರೋಪಿ ಬಂಧನ

Published On :

ಬೀದರ್: ತಾಲೂಕಿನ ಮೀರ್ಜಾಪೂರ ಗ್ರಾಮದಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಪೊಲೀಸರು ಮಂಗಳವಾರ ಬೆಳಗ್ಗೆ ಬಂಧಿಸಿದ್ದಾರೆ.
ಈ ಕುರಿತು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅತ್ಯಾಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಕಮಠಾಣಾ ಗ್ರಾಮದ ಸೈಯದ್ ಖಾಜಾಮಿಯ್ಯಾ (22) ಎಂಬ ಯುವಕ ಘಟನೆಯ ನಂತರ ಪೊಲೀಸರು ಜಾಲ ಬಿಸಿ ಪರಾರಿಯಾಗಿದ್ದ ಆರೋಪಿಯನ್ನು ಮಂಗಳವಾರ ಬೆಳಗಿನ ಜಾವ ಆಂಧ್ರಪ್ರದೇಶದ ಜಹಿರಾಬಾದ್ ಬಸ್‌ನಿಲ್ದಾಣದಿಂದ ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ನಂತರ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗುವುದು ಎಂದರು.
ಮುನ್ನ ಪ್ರಕರಣಗಳು ದಾಖಲಾಗಿಲ್ಲ: ಅವನೊಂದಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದರೆನ್ನಲಾದ ಫಿರೋಜ್, ಯುಸೂಫ್ ಹಾಗೂ ತಾಜೊದ್ದೀನ್ ಎಂಬ ಮೂರು ಆರೋಪಿತರನ್ನು ಮುಂಚೆಯೇ ಬಂಧಿಸಲಾಗಿತ್ತು ಎಂದ ಅವರು, ಎಲ್ಲ ಆರೋಪಿಗಳು ಕಮಠಾಣಾ ಗ್ರಾಮದವರಾಗಿದ್ದು, ಇದಕ್ಕೂ ಮುನ್ನ ಅವರ ಮೇಲೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದರು.
 ಎಲ್ಲ ಆರೋಪಿಗಳು ಘಟನೆಯ ದಿನದಂದು ಹುಡುಗಿಯೊಂದಿಗೆ ಬಂದಿದ್ದ ಯುವಕನ್ನು ಥಳಿಸಿ ಆತನಿಂದ ಹಣ, ಮೊಬೈಲ್ ಹಾಗೂ ಎಟಿಎಂ ಕಾರ್ಡ್ ಕಸಿದುಕೊಂಡಿದ್ದಾರೆ. ಇದೇ ವೇಳೆ ಸೈಯದ್ ಎಂಬುವನು ಒಬ್ಬನೆ ಅತ್ಯಾಚಾರ ಎಸಗಿದ್ದಾನೆಂದು ತಿಳಿಸಿದ್ದರು.
ಎಸ್ಪಿ ಸುಧೀರಕುಮಾರ ರೆಡ್ಡಿ ಮಾರ್ಗದರ್ಶನದಲ್ಲಿ ಎಎಸ್‌ಪಿ ಸಂಗೀತಾ ಹಾಗೂ ಡಿವೈಎಸ್‌ಪಿ ಎ.ಡಿ. ಬಸವಣ್ಣವರ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಯ ಬಂಧನಕ್ಕಾಗಿ ರಚಿಸಿದ ವಿಶೇಷ ತಂಡದಲ್ಲಿ ಸಿಪಿಐಗಳಾದ ವಿಶ್ವನಾಥರಾವ ಕುಲಕರ್ಣಿ, ಶರಣಬಸವೇಶ್ವರ ಭಜಂತ್ರಿ, ಅಲಿಬಾಸ, ಪಿಎಸ್‌ಐಗಳಾದ ಪಂಡಿತ ಸಗರ, ವೀರೇಂದ್ರ, ಶ್ರೀನಿವಾಸ ಅಲ್ಲಪೂರೆ, ಜಿಎಸ್ ಬಿರಾದಾರ, ಸಂಗಮೇಶ, ವಿಜಯಕುಮಾರ ಬಿರಾದಾರ, ದಿಲೀಪ ಸಾಗರ ಹಾಗೂ ಸಿಬ್ಬಂದಿ ಮಲ್ಲಿಕಾರ್ಜುನ, ಅಶೋಕ, ಕಿಶನ, ನೀಲಕಂಠ, ಸತೀಶ, ಆಸೀಫ್ ಹಾಗೂ ಸುನೀಲ ಪಾಲ್ಗೊಂಡಿದ್ದರು.
 ವಿಶೇಷ ತಂಡವು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಹಿನ್ನಲೆಯಲ್ಲಿ ತಂಡಕ್ಕೆ ವಿಶೇಷ ಬಹುಮಾನ ನೀಡಲಾಗುವುದು ಎಂದರು.
ಮಾಹಿತಿ ನೀಡಿಲ್ಲ: ಅತ್ಯಾಚಾರ ಘಟನೆ ನಡೆದ ಎರಡು ದಿನಗಳವರೆಗೆ ಬಗದಲ ಠಾಣೆಯ ಪಿಎಸ್‌ಐ ತಾನಪ್ಪಗೋಳ ಮೇಲಾಧಿಕಾರಿಗಳಿಗೆ ಇದರ ಬಗ್ಗೆ ಮಾಹಿತಿ ನೀಡದಿರುವುದರಿಂದಲೇ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಜು. 18ರಂದು ಘಟನೆ ನಡೆದಾಗ ಗ್ರಾಮಸ್ಥರು ಸೈಯದ್ ಕುರಿತು ಪಿಎಸ್‌ಐಗೆ ದೂರು ಸಲ್ಲಿಸಿದ್ದಾರೆ. ಆದರೆ ಅತ್ಯಾಚಾರ ಪ್ರಕರಣ ದಾಖಲಿಸದೇ ಆರೋಪಿಯನ್ನು ಬಿಟ್ಟು ಕರ್ತವ್ಯ ಲೋಪ ವೆಸಗಿದ ಹಿನ್ನಲೆಯಲ್ಲಿ ಅಮಾನತು ಮಾಡಲಾಗಿದೆ ಎಂದರು.
ಆರೋಪಿಯನ್ನು ಪಿಎಸ್‌ಐ ಬಿಡುಗಡೆ ಮಾಡಿದ ನಂತರ ಅವರು ಹುಡುಗನಿಂದ ಕಸಿದುಕೊಂಡಿದ್ದ ಎಟಿಎಂ ಕಾರ್ಡ್‌ನಿಂದ 700 ತೆಗೆದುಕೊಂಡಿದ್ದಾನೆ. ಹುಡುಗಿ ದೂರಿನ ಮೇರೆಗೆ ದೂರು ದಾಖಲಿಸಿದ ನಂತರವೇ ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.