ಸಾರ್ವಜನಿಕರ ಕೆಲಸ ಸರಳವಾಗಬೇಕು
ಹುಮನಾಬಾದ್: ಗ್ರಾಮೀಣ ಭಾಗದಲ್ಲಿರುವ ವಿವಿಧ ಸಮಸ್ಯೆ ತಿಳಿದುಕೊಂಡು ಅವರ ಭಾವನೆಗಳಿಗೆ ತಕ್ಕಂತೆ ಕೆಲಸ ಕಾರ್ಯಗಳೂ ನಡೆದಲ್ಲಿ ಸಾರ್ವಜನಿಕರು ನೆಮ್ಮದಿಯ ಬದುಕು ಸಾಗಿಸುತ್ತಾರೆ ಎಂದು ಕನ್ನಡ ಸೇನೆಯ ರಾಜ್ಯ ಸಂಚಾಲಕ ರವಿಸ್ವಾಮಿ ತಿಳಿಸಿದರು.
ಪಟ್ಟಣದ ಕನ್ನಡಸೇನೆಯ ಕಚೇರಿಯಲ್ಲಿ ನೂತನ ತಾಲುಕು ಪಂಚಾಯತ್ ಹಾಗೂ ಪುರಸಭೆ ಅಧ್ಯಕ್ಷರ ಸನ್ಮಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಜನರ ಕೆಲಸ ಕಾರ್ಯಗಳೂ ಸರಳವಾಗಿ ಆಗುವಂತಹ ವಾತವರಣ ನಿರ್ಮಾಣವಾಗಬೇಕು ಎಂದರು.
ಗ್ರಾಮೀಣ ಭಾಗದಲ್ಲಿ ಸಾಕಷ್ಟು ಜನರು ಬಡವರಿದ್ದಾರೆ, ಸರ್ಕಾರದ ಯೋಜನೆ ಪಡೆಯಲು ಅವರಿಗೆ ತೀವ್ರ ತೊಂದರೆಯಾಗುತ್ತಿದೆ. ಯೋಜನೆ ಪಡೆಯಲು ಸೂಕ್ತವಾದ ಮಾರ್ಗದರ್ಶನದ ತಿಳಿವಳಿಕೆ ಇಲ್ಲದೆ ಇರುವುದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಇಲ್ಲ ಸಲ್ಲದ ಕಾಗದ ಪತ್ರಗಳನ್ನು ತರಲು ಹೇಳಿ ಅವರನ್ನು ಕಚೇರಿ ಸುತ್ತಾ ಓಡಾಡಿಸುವುದು ಸಂಘಟನೆ ಗಮನಕ್ಕೆ ಬಂದಿದೆ ಎಂದರು.
ಹಳ್ಳಿಗಳಲ್ಲಿ ವಾಸಿಸುವ ಜನರ ಕಷ್ಟಗಳಿಗೆ ತಾಪಂ ಅಧ್ಯಕ್ಷರು ಸ್ಪಂದಿಸಬೇಕು, ಅಧಿಕಾರ ಇರುವುದು ಎಷ್ಟು ದಿನ ಎನ್ನುವುದು ಮುಖ್ಯವಲ್ಲ ಜನರ ಸೇವೆ ಮಾಡಿ ತೃಪ್ತಿ ತರುವಂತಹ ಕಾರ್ಯಗಳಾಗಬೇಕೆಂದರು. ತಾಪಂ ಅಧ್ಯಕ್ಷ ಜಗನ್ನಾಥರೆಡ್ಡಿ ಮಾತನಾಡಿ, ನೂತನವಾಗಿ ಅಧಿಕಾರಕ್ಕೆ ಬಂದಿದ್ದು, ಸಮಸ್ಯೆಗಳನ್ನು ಅರಿಕತು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡಲು ಯತ್ನಿಸಲಾಗುವುದು ಎಂದರು.
ಪುರಸಭೆ ಅಧ್ಯಕ್ಷ ವಿನಾಯಕ್ ಯಾದವ್ ಮಾತನಾಡಿ, ಪಟ್ಟಣಗಳಲ್ಲಿ ಅನೇಕ ಸಮಸ್ಯೆಗಳು ಎದುರಾಗಿದ್ದು, ಅವುಗಳನ್ನು ಹಂತ ಹಂತವಾಗಿ ಪರಿಹರಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಕನ್ನಡಸೇನೆಯು ತಾಲೂಕಿನಾದಂತ್ಯ ಬಡವರ , ಸಾರ್ವಜನಿಕರ ಪರ ಕೆಲಸ ಮಾಡುತ್ತಿದ್ದು, ಸಂಘಟನೆಯ ಉತ್ತಮ ಕಾರ್ಯಗಳಿಗೆ ಸದಾ ಬೆಂಬಲಿಸುವುದಾಗಿ ತಿಳಿಸಿದರು.
ಕನ್ನಡಸೇನೆಯ ಸಂಘಟನೆ ತಾಲೂಕು ಅಧ್ಯಕ್ಷ ಬಾಲಾಜಿ ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ತಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದು, ಮೂಲ ಸೌಕರ್ಯ ಒದಗಿಸಲು ವಿದ್ಯಾರ್ಥಿಗಳಿಗೆ ಶಿಕ್ಷಣ ಸೌಲಭ್ಯ ಕಲ್ಪಿಸಲು ಬಸ್ ಮತ್ತಿತರ ವ್ಯವಸ್ಥೆಗಳ ಕುರಿತು ಹೋರಾಟದ ಮುಖಾಂತರ ತಾಲೂಕು ಆಡಳಿತಕ್ಕೆ ಚುರುಕು ಮುಟ್ಟಿಸಿ ಕೆಲಸ ಕಾರ್ಯ ಮಾಡಲಾಗುತ್ತಿದೆ. ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

