ಬಸವ ದಳದಿಂದ ರೋಗಿಗಳಿಗೆ ಹಾಲು
ಬೀದರ್: ಬಸವ ಪಂಚಮಿಯ ನಿಮಿತ್ತ ರೋಗಿಗಳಿಗೆ ಕೊಡುವ ಹಾಲು, ಹಣ್ಣು ಅವರ ರೋಗ ದೂರ ಮಾಡಿ ಬೇಗ ಗುಣಮುಖರಾಗಲೆಂದು ರಾಷ್ಟ್ರೀಯ ಬಸವ ದಳದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಸವರಾಜ ಸಂಗಮದ ಹಾರೈಸಿದರು.
ಪ್ರತಿ ವರ್ಷದಂತೆ ಈ ವರ್ಷವು ಬಸವಣ್ಣನವರ ಲಿಂಗೈಕ್ಯ ಸಂಸ್ಮರಣೆ ಬಸವ ಪಂಚಮಿಯ ನಿಮಿತ್ತ ಶುಕ್ರವಾರ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಸಮಾಜದಿಂದ ರೋಗಿಗಳಿಗೆ ಹಾಲು, ಹಣ್ಣು ವಿತರಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶ್ರಾವಣ ಮಾಸದ ನಿಮಿತ್ತ ಆ.4ರಿಂದ ಸಂಜೆ 6.30ಕ್ಕೆ ಮನೆ ಮನೆಗೂ ಬಸವ ಜ್ಯೋತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲ ಶರಣರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದರು.
ಸುರೇಶಕುಮಾರ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈದ್ಯಾಧಿಕಾರಿ ಡಾ. ತುಕ್ಕಯ್ಯ ಮಾತನಾಡಿ, ಜಿಲ್ಲಾ ರಾಷ್ಟ್ರೀಯ ಬಸವದಳದ ಹಾಲು, ಹಣ್ಣು ವಿತರಿಸುವ ಕಾರ್ಯ ಶ್ಲಾಘನೀಯವಾಗಿದೆ. ಪ್ರತಿಯೊಬ್ಬರು ಬಸವಣ್ಣನವರ ತತ್ವಗಳನ್ನು ಪಾಲಿಸುವುದರ ಮೂಲಕ ಅವರ ಸಂದೇಶಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು. ಡಾ. ವೈಜಿನಾಥ ಬಿರಾದಾರ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ದಿಲೀಪಕುಮಾರ, ಡಾ. ಗುರತಪ್ಪ ಶೆಟಕಾರ, ರಘುನಾಥರಾವ್ ಕ್ಯಾಪ್ಟನ್, ಶಿವಕುಮಾರ ಮಿಠಾರೆ, ಸರಸ್ವತಿ ಬಿರಾದಾರ ಅತಿಥಿಯಾಗಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ರವಿಕಾಂತ ಬಿರಾದಾರ, ಮನ್ಮಥಯ್ಯ ಸ್ವಾಮಿ, ಶಾಂತಪ್ಪ ಮುಗಳಿ, ಬಸವಂತರಾವ್ ಬಿರಾದಾರ, ಸಿದ್ರಾಮಯ್ಯ ಸ್ವಾಮಿ, ಶಿವಕುಮಾರ ಪಾಟೀಲ್, ಮಲ್ಲಯ್ಯ ಸ್ವಾಮಿ, ವಿಶ್ವನಾಥ ಪಾಟೀಲ್ ಗೊಂದಗಾಂವ್, ಗಣಪತಿ ಬಿರಾದಾರ, ಶಿವಾನಂದ, ಸಂಗಶೆಟ್ಟಿ ಶೆಟಕಾರ, ಶಾಂತಾದೇವಿ ಬಿರಾದಾರ, ಶಶಿಕಲಾ ಶೆಂಬೆಳ್ಳಿ, ರಾಜೇಶ್ವೆರಿ ತಳವಾಡೆ, ಬಸಮ್ಮ ಬಿರಾದಾರ, ಲಲಿತಾ ಸಂಗಮದ, ಮಹಾಲಿಂಗಸ್ವಾಮಿ, ಭೀಮರಾವ್ ಪಾಟೀಲ್ ಮತ್ತಿತರರು ಭಾಗಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

