ಬೀದರ್

ದೇವರ ನೆನೆಯಲು ಶುದ್ಧ ಮನಸ್ಸಿರಲಿ

Published On :

ಬೀದರ್: ಹಾಲು ಹುತ್ತದ ಮೇಲೆ ಎರೆಯುವುದು, ದಾರಿಯಲ್ಲಿ ಅಳ್ಳು ಚೆಲ್ಲುವುದು ಮಾಡಬಾರದು. ಶುದ್ಧ ಮನಸ್ಸಿನಿಂದ ದೇವರನ್ನು ನೆನೆದು ದೇವರ ಸ್ವರೂಪದಲ್ಲಿರುವ ಲೋಕವನ್ನು ಪ್ರೀತಿಸಬೇಕೆಂದು ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದ್ದೇವರು ತಿಳಿಸಿದರು.
ಭಾಲ್ಕಿ ನಗರದ ಹಿರೇಮಠ ಸಂಸ್ಥಾನದ ಪ್ರಸಾದ ನಿಲಯದ ಬಡ, ನಿರ್ಗತಿಕ ಮಕ್ಕಳಿಗೆ ಹಾಲು ಕುಡಿಸುವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶುಕ್ರವಾರ ಮಾತನಾಡಿ, ಇಂದು ಎಲ್ಲೆಡೆ ಕಲ್ಲು ನಾಗರಕ್ಕೆ ಹಾಲು ಎರೆಯುವ ದೃಶ್ಯ ಕಾಣುತ್ತೇವೆ.
ಇದನ್ನು 12ನೇ ಶತಮಾನದಲ್ಲಿ ಬಸವಾದಿ ಶರಣರು ಖಂಡಿಸಿದ್ದಾರೆ. ಇಂತಹ ಮೂಢನಂಬಿಕೆಗಳನ್ನು ನಾವು ಬಿಡಬೇಕೆಂದರು. ಕೆಂಪಾನಂದ ಸ್ವಾಮಿ, ಗುರುಬಸವ ದೇವರು ಸಮ್ಮುಖ ವಹಿಸಿದ್ದರು.
ಭಾಲ್ಕಿ ನಗರ ಪೊಲೀಸ್ ಠಾಣೆಯ ಸಿಪಿಐ ಜ್ಯೋತಿರ್ಲಿಂಗ ಹೊನಕಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶರಣರ ಮಾರ್ಗ ವ್ಯಕ್ತಿಗಳ ಮನಸ್ಸನ್ನು ಕಟ್ಟುವ ಶ್ರೇಷ್ಠ ಮಾರ್ಗವಾಗಿದೆ ಎಂದರು.
ಭಾಲ್ಕಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಕಿರಣ ಚಾಕೋತೆ, ಸಂತೋಷ ಹಡಪದ ಮತ್ತು ಅಕ್ಕನ ಬಳಗದ ಶರಣೆಯರು ಇದ್ದರು. ಗುರುಪ್ರಸಾದ ಶಾಲೆಯ ಮುಖ್ಯಗುರು ಬಾಬು ಬೆಲ್ದಾಳ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.